ಕಫ ನಿವಾರಣೆಗೆ ಮನೆಮದ್ದು ಮೂರು ದಿನದಲ್ಲಿ ಮಾಯ

0 72

ವಾತಾವರಣ ಅಥವಾ ಕಾಲದ ಬದಲಾವಣೆ ಅಲರ್ಜಿ ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳ ಮುಂತಾದ ಕಾರಣಗಳಿಂದ ಪ್ರಾಥಮಿಕ ಹಂತದಲ್ಲಿ ಕಂಡುಬರುವ ಕಫದ ಸಮಸ್ಯೆ ಕ್ರಮೇಣ ಎದೆಯ ದೀರ್ಘಾವಧಿ ಕಫದ ಸಮಸ್ಯೆಯಾಗಿ ಬದಲಾಗುತ್ತದೆ. ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು ಇದಕ್ಕೆ ಔಷಧಿಯ ಅಗತ್ಯವಿಲ್ಲ ಎಂದುಕೊಳ್ಳುತ್ತಾರೆ ಹಾಗೂ ಅದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಹೀಗೆ ನೆಗಡಿ ಮತ್ತು ಕಫವನ್ನು ನಿರ್ಲಕ್ಷ್ಯ ಮಾಡಿದರೆ ದೀರ್ಘಾವಧಿಯಲ್ಲಿ ಅದು ಅಪಾಯಕಾರಿಯಾಗಿ ಆಗಬಹುದು. ಮುಂದೆ ನ್ಯುಮೋನಿಯಾದಂತಹ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಹಾಗಾಗಿ ಈ ಕಫದ ಸಮಸ್ಯೆಗೆ ಸುಲಭವಾದ ಹಾಗೂ ಯಾವುದೇ ಅಡ್ಡಪರಿಣಾಮವನ್ನು ಉಂಟು ಮಾಡದ ಮನೆಮದ್ದು ಏನು? ಅನ್ನೋದನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಶೀತ ಮತ್ತು ಕೆಮ್ಮುಗಳು ವಾಸ್ತವದಲ್ಲಿ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚು ಮಾಡಲು ಕೈಗೊಳ್ಳುವ ಕ್ರಮಗಳೇ ಹೊರತು ಇದೇ ಒಂದು ದೊಡ್ಡ ಕಾಯಿಲೆ ಅಥವಾ ರೋಗವಲ್ಲ. ಗಾಳಿಯಲ್ಲಿ ತೇಲುವ ಹಲವು ಬಗೆಯ ವೈರಸ್ ಗಳು ಮೂಗು ಹಾಗೂ ಗಂಟಲ ಒಳಭಾಗದಲ್ಲಿ ಆಗಮಿಸಿದಾಗ ಇಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ ಇದನ್ನು ಶ್ವಾಸನಾಳದ ಸೋಂಕು ಎಂದು ಕರೆಯಲಾಗುತ್ತದೆ. ಈ ಸೋಂಕು ಕೆಲವು ದಿನಗಳಿಂದ ಹಾಗೂ ಒಂದು ವಾರದವರೆಗೂ ಇರಬಹುದು. ಒಂದು ವೇಳೆ ನಿಮಗೆ ಪ್ರತಿ ಬಾರಿ ವಾತಾವರಣ ಬದಲಾದಾಗಲೂ ಗಂಟಲ ಬೇನೆ, ಕೆಮ್ಮು, ಶೀತ ಮತ್ತು ಜ್ವರ ಎದುರಾಗುತ್ತಿದ್ದರೆ ಇಂದಿನ ನಿಮಗೆ ಅತ್ಯಗತ್ಯವಾಗಿದೆ. ನಮ್ಮ ದೇಹದ ಹಲವಾರು ಭಾಗಗಳಲ್ಲಿ ತೆಳುವಾದ ತೇವಭರಿತ ಪದರ ಇರುತ್ತದೆ. ಈ ಪದರದ ಮುಖ್ಯ ಉದ್ದೇಶವೆಂದರೆ ಗಾಳಿಯ ಮೂಲಕ ಒಳಬರುವ ಅತಿಕ್ರಮಿ ಕ್ರಿಮಿಗಳನ್ನು ತಮ್ಮಲ್ಲಿ ಅಂಟಿಸಿಕೊಳ್ಳುವುದು ಹಾಗೂ ದೇಹವನ್ನು ಇದರ ಸೋಂಕಿನಿಂದ ರಕ್ಷಿಸುವುದು. ಇದೇ ಕಾರಣಕ್ಕೆ ನಮ್ಮ ಮೂಗಿನ ಒಳಭಾಗ ಗಂಟಲ ಒಳಭಾಗ ಹಾಗೂ ಬಾಯಿಯ ಒಳಭಾಗ ಮೊದಲಾದವು ಸದಾ ತೇವವಾಗಿಯೇ ಇರುತ್ತವೆ. ಯಾವಾಗ ಕ್ರಿಮಿ ಈ ಪದರದ ಮೇಲೆ ಅಂಟಿಕೊಳ್ಳುತ್ತದೆಯೋ ಆಗ ಈ ಕ್ರಿಮಿಗಳನ್ನು ನಮ್ಮ ರಕ್ತದಲ್ಲಿರುವ ಬಿಳಿ ರಕ್ತ ಕಣಗಳು ಒಂದಕ್ಕೆ ನೂರರಂತೆ ಸುತ್ತುವರೆದು ಕೊಂದು ತಾವೂ ಸಾಯುತ್ತವೆ.

ಆಗ ಈ ತೇವ ಮಟ್ಟಷ್ಟು ಹೆಚ್ಚು ಸ್ನಿಗ್ಧಗೊಂಡು ಅದೇ ಕಫವಾಗುತ್ತದೆ. ತೆಳುವಾದ ಕಫ ಯಾವಾಗಲೂ ಇರಬೇಕು ಆದರೆ ಹೆಚ್ಚು ಹೆಚ್ಚು ಬಿಳಿರಕ್ತಗಣಗಳು ಕ್ರಿಮಿಗಳನ್ನು ಕೊಂದು ಎಷ್ಟು ಹೆಚ್ಚು ಈ ಕಫದಲ್ಲಿ ಸೇರಿಕೊಳ್ಳುತ್ತವೆಯೋ ಅಷ್ಟೂ ಈ ಕಫ ಹೆಚ್ಚು ಗಟ್ಟಿಯಾಗುತ್ತದೆ ಹಗೂ ಕೆಮ್ಮು ಈ ಕಫವನ್ನು ನಿವಾರಿಸುತ್ತದೆ. ಕ್ರಿಮಿ ಇಲ್ಲದ ಕಫ ಹೆಚ್ಚೂ ಕಡಿಮೆ ಪಾರದರ್ಶಕವಾಗಿರುತ್ತದೆ. ಆದರೆ ಕ್ರಿಮಿಗಳನ್ನು ಕೊಂದು ಗಟ್ಟಿಯಾಗಿರುವ ಕಫ ತಿಳಿ ಹಳದಿ ಅಥವಾ ಹಸಿರು ಬಣ್ಣಕ್ಕೆ ತಿರುಗುತ್ತದೆ. ಕಫ ಹೆಚ್ಚು ಗಟ್ಟಿಯಾದಷ್ಟೂ ಇದನ್ನು ನಿವಾರಿಸುವುದು ಕಷ್ಟವಾಗುತ್ತದೆ ಹಾಗೂ ಇದನ್ನು ಪಟ್ಟು ಬಿಡದೇ ಸತತ ಕೆಮ್ಮಿನಿಂದ ನಿವಾರಿಸಲು ರೋಗ ನಿರೋಧಕ ಶಕ್ತಿ ಹೆಚ್ಚು ವ್ಯಯ ಆಗುತ್ತದೆ. ಕಫ ಹೆಚ್ಚು ಗಟ್ಟಿಯಾದಷ್ಟೂ ಇದು ಸುಲಭವಾಗಿ ಬರದೇ ಸೋಂಕು ಇನ್ನಷ್ಟು ಹೆಚ್ಚಬಹುದು. ಇಂದಿನ ಲೇಖನದಲ್ಲಿ ಕಫವನ್ನು ನಿವಾರಿಸಿ ಶೀತ ಮತ್ತು ಕೆಮ್ಮು ನಿವಾರಿಸಲು ಸುಲಭ ಮನೆಮದ್ದು ಏನೂ ಅನ್ನೋದನ್ನ ನೋಡೋಣ.

ಈ ಮನೇಮದ್ದನ್ನು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ನೀಡಬಹುದು. ಇನ್ನು ಇದನ್ನು ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ , ಒಂದು ಪಾತ್ರೆಗೆ ಸ್ವಲ್ಪ ನೀರು ಹಾಗೂ ಒಂದೆರಡು ಚಮಚದಷ್ಟು ತುರಿದ ಬೆಲ್ಲವನ್ನು ಹಾಕಿಕೊಂಡು ಬೆಲ್ಲವನ್ನು ಕರಗಿಸಿ ಇನ್ನೊಂದು ಪುಟ್ಟ ಬೌಲ್ ಗೆ ಸೋಸಿಕೊಳ್ಳಬೇಕು. ನಂತರ ಇದಕ್ಕೆ ಕಾಲು ಟೀ ಸ್ಪೂನ್ ಅಷ್ಟು ಅರಿಶಿಣ ಹಾಗೂ ಒಂದೆರಡು ಚಿಟಕಿ ಉಪ್ಪು ಸೇರಿಸಿ ಮಿಶ್ರಣ ಮಾಡಿ ಇದನ್ನು ಪ್ರತೀ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಸಂಜೆಯೂ ತೆಗೆದುಕೊಳ್ಳಬಹುದು. ಒಟ್ಟಿನಲ್ಲಿ ಊಟ ತಿಂಡಿಗೆ ಅರ್ಧ ಗಂಟೆ ಮೊದಲು ಈ ಮದ್ದನ್ನು ತೆಗೆದುಕೊಳ್ಳಬೇಕು. ದೊಡ್ಡವರಿಗೆ ಒಬ್ಬರಿಗೆ ಈ ಔಷಧಿ ಒಂದು ಟೀ ಸ್ಪೂನ್ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಚಿಕ್ಕ ಮಕ್ಕಳಿಗೆ ಆದರೆ ಕಾಲು ಟೀ ಸ್ಪೂನ್ ಅಷ್ಟು ಅಥವಾ ಅರ್ಧ ಟೀ ಸ್ಪೂನ್ ಅಷ್ಟು ನೀಡಬೇಕು ಅದೂ ಮೂರು ಹೊತ್ತು ನೀಡಬೇಕು. ಈ ಮನೇಮದ್ದನ್ನೂ ಸತತವಾಗಿ ಮೂರು ದಿನಗಳ ಕಾಲ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಮೂರು ದಿನಗಳಲ್ಲಿ ಕಫ ಕಟ್ಟಿದ್ದರೆ ನಿವಾರಣೆ ಆಗುವುದು.

Leave A Reply

Your email address will not be published.