ಕರ್ನಾಟಕ ವಿದ್ಯುತ್ ನಿಗಮದಲ್ಲಿ ಉದ್ಯೋಗಾವಕಾಶ

0 0

ಕರ್ನಾಟಕ ವಿದ್ಯುತ್ ನಿಗಮ ಇದರಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದಕ್ಕೆ ಅಭ್ಯರ್ಥಿಗಳು ಯಾವ ರೀತಿ ಅರ್ಜಿ ಸಲ್ಲಿಸಬೇಕು? ಏನೆಲ್ಲಾ ಅರ್ಹತೆಗಳು ಹಾಗೂ ದಾಖಲಾತಿಗಳು ಬೇಕು? ಎನ್ನುವುದರ ಕುರಿತಾಗಿ ವಿವರವಾಗಿ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕೆಪಿಸಿ ಗ್ಯಾಸ್ ಪವರ್ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಹುದ್ದೆಗಳ ವಿವರ ನೋಡುವುದಾದರೆ ಈ ರೀತಿಯಾಗಿದೆ. ಐಟಿಐ ಎಲೆಕ್ಟ್ರಿಷಿಯನ್ ಇಲ್ಲಿ 3 ಹುದ್ದೆಗಳು , ಐಟಿಐ ಫಿಟ್ಟರ್ 3 ಹುದ್ದೆಗಳು ಹಾಗೂ ಅಸಿಸ್ಟೆಂಟ್ ಫ್ರಂಟ್ ಮ್ಯಾನೇಜ್ ಆಫೀಸರ್ ಇದಕ್ಕೆ 6 ಹುದ್ದೆಗಳು ಖಾಲಿ ಇದ್ದು ಒಟ್ಟೂ ಹನ್ನೆರಡು ಹುದ್ದೆಗಳು ಖಾಲಿ ಇವೆ. ನಾವಿಲ್ಲಿ ಗಮನಿಸಬೇಕಾದ ಅಂಶ ಎಂದರೆ ಇದು ಫುಲ್ ಟೈಮ್ ಕೆಲಸ ಆಗಿರುವುದಿಲ್ಲ ಬದಲಿಗೆ ಒಂದು ವರ್ಷದ ತರಬೇತಿಗಾಗಿ ಮಾತ್ರ ಈ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇನ್ನು ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು ಏನು ಎಂದು ನೋಡುವುದಾದರೆ , ಹತ್ತನೇತರಗತಿ ಹಾಗೂ ಐಟಿಐ ನಲ್ಲಿ ಉತ್ತೀರ್ಣರಾಗಿರಬೇಕು . ಹಾಗೂ ಇನ್ನು ಇದಕ್ಕೆ ಸಂಬಂಧಿಸಿದಂತೆ ಪ್ರಮುಖ ದಿನಾಂಕಗಳು ಯಾವವು ಎಂದು ನೋಡುವುದಾದರೆ , ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ ಇದೆ ತಿಂಗಳು ೨೦ ರಿಂದ ಅರ್ಜಿ ಸಲ್ಲಿಕೆ ಆರಂಭ ಆಗಿದ್ದು , ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/03/2021 ಕೊನೆಯ ದಿನಾಂಕ ಆಗಿರುವುದು. ಆನಲೈನ್ ಮೂಲಕ ಕೂಡಾ ಅರ್ಜಿ ಸಲ್ಲಿಸಬಹುದು.

ಆಯ್ಕೆ ಆದ ಅಭ್ಯರ್ಥಿಗಳಿಗೆ ಪ್ರತೀ ತಿಂಗಳು ತರಬೇತಿ ವೇತನ ಎಂದು ಹಣವನ್ನು ನೀಡಲಾಗುತ್ತದೆ. ಐಟಿಐ ಎಲೆಕ್ಟ್ರಿಷಿಯನ್ ಮತ್ತು ಐಟಿಐ ಫಿಟ್ಟರ್ ಈ ಎರಡು ಹುದ್ದೆಗಳಿಗೆ ಪ್ರತೀ ತಿಂಗಳು ಹತ್ತು ಸಾವಿರ ರೂಪಾಯಿ ಭತ್ಯೆ ನೀಡುವುದಾಗಿ ಹಾಗೂ ಅಸಿಸ್ಟೆಂಟ್ ಫ್ರಂಟ್ ಮ್ಯಾನೇಜ್ ಆಫೀಸರ್ ಈ ಹುದ್ದೆಗೆ ಏಳು ಸಾವಿರ ರೂಪಾಯಿ ಭತ್ಯೆ ನೀಡುವುದಾಗಿ KEB ಕಡೆಯಿಂದ ತಿಳಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಈ ವೆಬ್ಸೈಟ್ ಅನ್ನು ಬಳಸಿ ಅರ್ಜಿ ಸಲ್ಲಿಸಬಹುದು. www.apprenticeshipindia.org ಇಲ್ಲಿ ಅರ್ಜಿ ಸಲ್ಲಿಸಬಹುದು.

Leave A Reply

Your email address will not be published.