Ultimate magazine theme for WordPress.

ಶರೀರಕ್ಕೆ ತಂಪು ನೀಡುವ ಮಸಾಲಾ ಮಜ್ಜಿಗೆ ಮಾಡುವ ಸರಳ ವಿಧಾನ

0 0

ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ವಸಂತ ಋತು ಮತ್ತು ಶರದೃತು ಇವುಗಳ ನಡುವೆ ನಾಲ್ಕು ಉಷ್ಣ ಋತುಗಳಲ್ಲಿ ಬೇಸಿಗೆ ತುಂಬಾ ತಾಪಮಾನ ಮತ್ತು ಅಧಿಕ ಉಷ್ಣಾಂಶದ ಋತು. ಬೇಸಿಗೆ ಎಂದರೆ ಸಾಂಪ್ರದಾಯಕವಾಗಿ ಬಿಸಿ ಹಾಗೂ ಒಣ ವಾತಾವರಣವನ್ನು ಒಳಗೊಂಡಿರುತ್ತದೆ. ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ಅಧಿಕವಾಗಿ ಇರುತ್ತದೆ ಎಷ್ಟೇ ನೀರು ಕುಡಿದರೂ ಸಾಕಾಗುವುದಿಲ್ಲ. ಸಿಟ್ರಸ್ ಹಣ್ಣು ಮತ್ತು ಹಣ್ಣಿನ ರಸವನ್ನು ಸಾಕಷ್ಟು ಸೇವಿಸಬೇಕಾಗುತ್ತದೆ. ಅಷ್ಟಾದರೂ ಸಾಕಾಗುವುದಿಲ್ಲ. ಹಾಗಾಗಿ ಆರೋಗ್ಯಕ್ಕೂ ಒಳ್ಳೆಯದಾದ ಅತೀ ಕಡಿಮೆ ಖರ್ಚಿನಲ್ಲಿ ಆಗುವ ಸುಲಭ ಪಾನೀಯದ ಕುರಿತು ನಾವು ಈ ಲೇಖನದಲ್ಲಿ ಅದರ ಬಳಕೆ ಹಾಗೂ ತಯಾರಿಕಾ ವಿಧಾನ ಹೇಗೆ ಎನ್ನುವುದನ್ನು ತಿಳಿಯೋಣ.

ನಮಗೆಲ್ಲ ಮಜ್ಜಿಗೆ ಗೊತ್ತೇ ಇದೆ ಇದು ಎಲ್ಲರ ಮನೆಯಲ್ಲೂ ಸುಲಭಕ್ಕೆ ಸಿಗುವ ಒಂದು ಪದಾರ್ಥ. ಬೇಸಿಗೆಯ ಧಗೆಗೆ ನೀರನ್ನು ಕುಡಿದೂ ಸಾಕಾಗಿದ್ದರೆ ಈ ಮಸಾಲಾ ಮಜ್ಜಿಗೆಯನ್ನು ಮಾಡಿ ಕುಡಿದು ನೋಡಿ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಹಾಗೂ ರುಚಿಯೂ ಆಗಿರುವುದು. ಹಾಗಿದ್ದರೆ ಈ ಮಸಾಲ ಮಜ್ಜಿಗೆ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನ ಏನು ಎನ್ನುವುದನ್ನು ನೋಡೋಣ.

ಮೊಸರು ಅರ್ಧ ಲೀಟರ್ ಅಷ್ಟು , ಕೊತ್ತಂಬಿರಿ ಸೊಪ್ಪು ಸ್ವಲ್ಪ , ಕರಿಬೇವು, ನಾಲ್ಕು ಹಸಿಮೆಣಸಿನಕಾಯಿ, ಶುಂಠಿ ಅರ್ಧ ಇಂಚಿನಷ್ಟು , ಉಪ್ಪು ರುಚಿಗೆ ತಕ್ಕಷ್ಟು. ಈ ಐದು ಪದಾರ್ಥಗಳನ್ನು ಬಳಸಿಕೊಂಡು ನಾವು ಮಸಾಲ ಮಜ್ಜಿಗೆ ತಯಾರಿಸಿಕೊಳ್ಳಬಹುದು.

ಇನ್ನು ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ , ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಅರ್ಧ ಲೀಟರ್ ಮೊಸರು ಹಾಗೂ ಬೇಕಾದಷ್ಟು ನೀರನ್ನು ಸೇರಿಸಿ ಮೊಸರು ನೀರಿನ ಜೊತೆ ಸರಿಯಾಗಿ ಮಿಕ್ಸ್ ಆಗುವ ಹಾಗೆ ಮಾಡಿಕೊಳ್ಳಬೇಕು. ನಂತರ ಕುಟ್ಟಾಣಿ ಕಲ್ಲು ಇಲ್ಲವೇ ಮಿಕ್ಸಿ ಜಾರಿಗೆ ಹಸಿಮೆಣಸಿನಕಾಯಿ , ಶುಂಠಿ, ಕರಿಬೇವಿನ ಎಲೆ ಸ್ವಲ್ಪ , ಕೊತ್ತಂಬಿರಿ ಸೊಪ್ಪು ಇವೆಲ್ಲವನ್ನೂ ಹಾಕಿ ನೀರು ಸೇರಿಸದೆ ಹಾಗೆಯೇ ಪೇಸ್ಟ್ ಮಾಡಿಕೊಳ್ಳಬೇಕು. ಮಿಕ್ಸಿ ಜಾರ್ ನಲ್ಲಿ ಪೇಸ್ಟ್ ಮಾಡುವುದಕ್ಕಿಂತ ಕುಟ್ಟಾಣಿ ಕಲ್ಲಿನಲ್ಲಿ ಪೇಸ್ಟ್ ಮಾಡಿಕೊಂಡರೆ ರುಚಿ ಮತ್ತೂ ಹೆಚ್ಚು. ನಂತರ ಕುಟ್ಟಾಣಿ ಕಲ್ಲಿಗೆ ಸ್ವಲ್ಪ ನೀರು ಸೇರಿಸಿ ಆ ನೀರನ್ನು ಪೇಸ್ಟ್ ತೆಗೆದಿಟ್ಟುಕೊಂಡ ಬೌಲ್ ಗೆ ಹಾಕಿ ಮಿಕ್ಸ್ ಮಾಡಿಕೊಂಡು ಸೋಸಿಕೊಳ್ಳಬೇಕು. ನಂತರ ಆ ನೀರನ್ನು ಮಜ್ಜಿಗೆಗೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಮೇಲಿನಿಂದ ಸ್ವಲ್ಪ ಚಿಕ್ಕದಾಗಿ ಕಟ್ ಮಾಡಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಕುಡಿಯಬಹುದು.

ಈ ರೀತಿಯಾಗಿ ಮಾಡಿದ ಮಸಾಲ ಮಜ್ಜಿಗೆ ಬೇಸಿಗೆಯಲ್ಲಿ ಬಹಳ ಉತ್ತಮ. ಖಾರವಾಗಿ ರಿಚಿಯಾಗಿ ಮಸಾಲ ಮಜ್ಜಿಗೆ ಎಲ್ಲರಿಗೂ ಇಷ್ಟವಾಗುವುದು. ಬೇಕಿದ್ದರೆ ಫ್ರಿಡ್ಜ್ ನಲ್ಲಿಟ್ಟು ಬೇಕಾದಾಗ ಅಗತ್ಯ ಇದ್ದಾಗಲೂ ಕುಡಿಯಬಹುದು. ದಣಿದು ಬಂದಾಗ ಇದು ಒಂದು ರೀತಿಯ ಶಕ್ತಿಯನ್ನೂ ಸಹ ನೀಡುತ್ತದೆ ಈ ಮಸಾಲ ಮಜ್ಜಿಗೆ.

Leave A Reply

Your email address will not be published.