ಕ್ರಿಕೆಟ್ ಆಟವೆಂದರೆ ಎಲ್ಲರಿಗೂ ಇಷ್ಟ. ಕ್ರಿಕೆಟ್ ನಲ್ಲಿ ಅನೇಕರು ಸಾಧನೆ ಮಾಡಿದ್ದಾರೆ. ಬಡತನದಲ್ಲಿ ಹುಟ್ಟಿ ಕ್ರಿಕೆಟ್ ಆಡುವ ಮೂಲಕ ಸಾಧನೆ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದವರೆಷ್ಟೊ ಜನ ಇದ್ದಾರೆ. ಅವರಲ್ಲಿ ಕ್ರಿಕೆಟ್ ಅಭಿಮಾನಿಗಳು ಮರೆಯದವರೆಂದರೆ ವೀರೆಂದ್ರ ಸೆಹ್ವಾಗ್. ಅವರ ಕ್ರಿಕೆಟ್ ಜರ್ನಿ ಹಾಗೂ ಕುಟುಂಬದವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕ್ರಿಕೆಟ್ ಜಗತ್ತಿನ ಉತ್ತಮ ಕ್ರಿಕೆಟ್ ಆಟಗಾರ ವೀರೆಂದ್ರ ಸೆಹ್ವಾಗ್. ಈತನು 20 ಅಕ್ಟೋಬರ್ 1978 ರಂದು ದೆಹಲಿಯಲ್ಲಿ ಕೂಡು ಕುಟುಂಬದಲ್ಲಿ ಜನಿಸಿದರು. ಇವರಿಗೆ ಒಬ್ಬಳು ಅಕ್ಕ ಇದ್ದಾಳೆ. ಇವರಿಗೆ ಸಣ್ಣ ವಯಸ್ಸಿನಿಂದಲೆ ಕ್ರಿಕೆಟ್ ಆಟದ ಬಗ್ಗೆ ಆಸಕ್ತಿ ಇತ್ತು. ನಂತರ ಭಾರತದ ಕ್ರಿಕೆಟ್ ಟೀಮ್ ಗೆ ಸೇರಿ ಬಿರುಸಿನ ಆಟದಿಂದ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ. ಸೆಹ್ವಾಗ್ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡುತ್ತಾರೆ. 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಕ್ರಿಕೆಟ್ ಆಟದಲ್ಲಿ ಮೊದಲನೇ ಬಾರಿ ಅವರು ಹೆಚ್ಚು ರನ್ ಗಳಿಸಿದರು. ಮೊದಮೊದಲು ಅವರು ಉತ್ತಮ ಆಟ ಆಡಲಿಲ್ಲ ನಂತರದ ದಿನಗಳಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿದ್ದಾರೆ.

ನಂತರ ಭಾರತ, ನ್ಯೂಜಿಲೆಂಡ್, ಶ್ರೀಲಂಕಾ ತ್ರಿಕೋನ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಅವರು ಇಂಜುರಿಯಾಗಿದ್ದು ಆಟದಿಂದ ಹೊರಗುಳಿದಿದ್ದರು ಆದ್ದರಿಂದ ಸಚಿನ್ ತೆಂಡೂಲ್ಕರ್ ಬದಲು ಸೆಹ್ವಾಗ್ ಆಡುತ್ತಾರೆ ಆಗ ಸೆಹ್ವಾಗ್ ಅತಿ ಹೆಚ್ಚು ರನ್ ಗಳಿಸಿದರು. ನಂತರ ಟೆಸ್ಟ್ ಪಂದ್ಯಗಳಲ್ಲಿ ಆಯ್ಕೆಯಾದರು. ನಂತರದ ಎಲ್ಲ ಆಟಗಳಲ್ಲಿ ಹೆಚ್ಚು ರನ್ ಗಳಿಸುತ್ತಾ ಸೆಹ್ವಾಗ್ ಬಂದರೆ ಆಟ ಸೋಲುವುದಿಲ್ಲ ಎಂಬ ಹೊಗಳಿಕೆಯನ್ನು ಪಡೆದುಕೊಂಡರು. ಕೆಲವು ಸರಣಿಯಲ್ಲಿ ಉಳಿದೆಲ್ಲಾ ಆಟಗಾರರು ಆಟದಲ್ಲಿ ವಿಫಲರಾಗುತ್ತಿದ್ದರು ಸೆಹ್ವಾಗ್ ಉತ್ತಮ ಆಟ ಪ್ರದರ್ಶಿಸುತ್ತಿದ್ದರು. ವೀರೆಂದ್ರ ಸೆಹ್ವಾಗ್ ಅವರನ್ನು ಶತಕ ಬಾರಿಸಿದ ಕಿಂಗ್ ಅಂತಾನೆ ಹೇಳಬಹುದು. ಇವರು ಕ್ರಿಕೆಟ್ ಜಗತ್ತಿನಲ್ಲಿ ಅನೇಕ ರೆಕಾರ್ಡ್ ಮಾಡಿದ್ದಾರೆ. ಇವರ ತಂದೆಯ ಹೆಸರು ಕೃಷ್ಣ ಸೆಹ್ವಾಗ್. ವೀರೆಂದ್ರ ಸೆಹ್ವಾಗ್ 2004 ರಲ್ಲಿ ಆರ್ಥಿ ಎಂಬುವವರೊಂದಿಗೆ ಮದುವೆಯಾಗುತ್ತಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ ವೇದಾಂತ ಮತ್ತು ಆರ್ಯವೀರ್. ಸೆಹ್ವಾಗ್ ಅವರ ಟೆಸ್ಟ್ ಮ್ಯಾಚ್ ಗೆ 5 ಲಕ್ಷ ರೂಪಾಯಿ, ಐಪಿಎಲ್ ಗೆ 8 ಕೋಟಿ ಸ್ಯಾಲರಿ ಪಡೆಯುತ್ತಾರೆ. ದೆಹಲಿಯಲ್ಲಿ ಸೆಹ್ವಾಗ್ ಅವರದು ಆಕರ್ಷಕ, ಭವ್ಯ ಮನೆಯಿದೆ. ಇವರ ಬಳಿ ಉತ್ತಮ, ದುಬಾರಿ ಕಾರುಗಳಿವೆ. ವೀರೆಂದ್ರ ಸೆಹ್ವಾಗ್ ಅವರನ್ನು ಕ್ರಿಕೆಟ್ ಪ್ರೇಮಿಗಳು ಮರೆಯಲು ಸಾಧ್ಯವಿಲ್ಲ. ಅವರು ಉತ್ತಮ ಕೋಚ್ ಆಗಿ, ಕ್ರಿಕೆಟ್ ಆಡುವವರಿಗೆ ಮಾರ್ಗದರ್ಶನ ಸಿಗಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *