ಒಂದು ಕಾಲದಲ್ಲಿ ಟಾಪ್ ನಟಿಯಾಗಿದ್ದ ಮಾಲಾಶ್ರೀ ಅವರ ಕುಟುಂಬ ಹೇಗಿದೆ ಅನ್ನೋದರ ಬಗ್ಗೆ ಒಂದು ಪುಟ್ಟ ಮಾಹಿತಿ ಇಲ್ಲಿದೆ. ಕನ್ನಡದ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇವರ ಅಭಿನಯದ ಮೊದಲ ಚಿತ್ರವೇ ತುಂಬಾ ಫೇಮಸ್ ಆಗಿ ಹಿಟ್ ಆಗಿತ್ತು. ಈ ಚಿತ್ರದ ಕುರಿತು ಆಗಿನ ಕಾಲದಲ್ಲಿ ತುಂಬಾ ಪ್ರಶಂಶೆಗಳು ಉತ್ತಮ ಪ್ರತಿಕ್ರಿಯೆಗಳು ಬಂದಿದ್ದವು. ಈ ಚಿತ್ರದ ಬಗ್ಗೆ ಬಂದಂತಹ ಪ್ರಶಂಶೆಗಳು ಹೆಚ್ಚಾಗಿ ಚಿತ್ರದ ನಾಯಕಿಯ ಬಗ್ಗೆಯೇ ಆಗಿತ್ತು. ಅವರೇ ಕನಸಿನ ರಾಣಿ ಮಾಲಾಶ್ರೀ ಆಗಿನ ಕಾಲದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿ.

ಕನ್ನಡ ಚಿತ್ರ ರಂಗದ ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರು ಸಹ ಯಾರು ಈ ಸುಂದರ ಹುಡುಗಿ? ತನ್ನ ಮೊದಲ ಚಿತ್ರದಲ್ಲೇ ಅದ್ಭುತವಾಗಿ ನಟನೆ ಮಾಡಿದ್ದಾಳೆ ಖಂಡಿತವಾಗಿ ಇವರಿಗೆ ಚಿತ್ರ ರಂಗದಲ್ಲಿ ಉತ್ತಮ ಭವಿಷ್ಯ ಇದೆ ಎಂದು ನುಡಿದಿದ್ದರು. ಆ ಮಾತು ನಿಜವೂ ಕೂಡ ಆಯಿತು. ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆ ಹಠಮಾರಿ ಹೆಣ್ಣಿನ ಪಾತ್ರದಲ್ಲಿ ನಂಜುಂಡಿ ಕಲ್ಯಾಣ ಚಿತ್ರದಲ್ಲಿ ನಟಿಸಿ ಬಹಳಷ್ಟು ಫೇಮಸ್ ಆಗಿದ್ದರು. ಇದರ ನಂತರ ಮಾಲಾಶ್ರೀ ಅವರಿಗೆ ಹೆಚ್ಚು ಹೆಚ್ಚು ಹಠಮಾರಿ ತನ, ದಿಟ್ಟ ಪಾತ್ರಗಳೇ ಸಿಗುತ್ತಾ ಇತ್ತು. ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್, ಅಂಬರೀಷ್, ಸುನೀಲ್, ಶಶಿಕುಮಾರ್, ರವಿಚಂದ್ರನ್ ಈ ಎಲ್ಲಾ ನಾಯಕ ನಟರ ಜೊತೆ ಮಾಲಾಶ್ರೀ ಅಭಿನಯಿಸಿದ್ದರು.

ತಮಿಳು, ತೆಳಗು ಚಿತ್ರ ರಂಗದಲ್ಲಿ ಕೂಡ ಟಾಪ್ ನಟರ ಜೊತೆ ಅಭಿನಯಿಸಿದ್ದಾರೆ. ಹೀಗೆ ಕಾಲಾಂತರದಲ್ಲಿ ಮಾಲಾಶ್ರೀ ಅವರು ಸ್ವಲ್ಪ ದಪ್ಪಗಾದ ಕಾರಣ ಅವರಿಗೆ ಅವಕಾಶಗಳು ಸ್ವಲ್ಪ ಕಡಿಮೆ ಆದವು. ನಂತರ ದಿಟ್ಟ ಪೊಲೀಸ್ ಆಫೀಸರ್ ಅಂತಹ ಕೆಲವು ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. “ಲೇಡಿ ಕಮಿಷನರ್” ಚಿತ್ರ ಇವರಿಗೆ ಅತಿ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಚಿತ್ರ. ಯಾವ ಹಿರೋಗಳಿಗು ತಾನು ಕಡಿಮೆ ಇಲ್ಲ ಎಂಬ ರೀತಿಯಲ್ಲಿ ಸಿನಿಮಾಗಳಲ್ಲಿ ಫೈಟ್ ಮಾಡ್ತಾ ಇದ್ದರು. ನಿರ್ಮಾಪಕ ರಾಮು ಅವರನ್ನು ವಿವಾಹ ಆಗಿರುವ ಮಾಲಾಶ್ರೀ ಅವರಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ. ಮಗನ ಹೆಸರು ಆರ್ಯನ್ ಮಗಳು ಅನನ್ಯ. ಇದು ಮಾಲಾಶ್ರೀ ಅವರ ಸುಂದರ ಕುಟುಂಬ.

By

Leave a Reply

Your email address will not be published. Required fields are marked *