IAS Officer: ದುಡ್ಡಿದ್ದವನು ಮಾತ್ರ ಓದಿ ಐಎಎಸ್ ಎಂಬ ಎಕ್ಸಾಮ್ ಪಾಸ್ ಮಾಡುತ್ತಾರೆ ಎನ್ನುವುದು ಸುಳ್ಳು. ಏಕೆಂದರೆ ಇಲ್ಲೊಬ್ಬ ವ್ಯಕ್ತಿ ಐಎಎಸ್ ಪಾಸ್ ಮಾಡಿದ್ದಾನೆ. ಅವನು ರಿಕ್ಷಾ ಕಾರ್ಮಿಕನ ಮಗ. ಅವನ ಕಥೆಯನ್ನು ತಿಳಿಯೋಣ ಬನ್ನಿ. ಈ ಹುಡುಗನ ಜೊತೆ ಅಪ್ಪ ಅಮ್ಮ ಮತ್ತು 4ಜನ ಅಣ್ಣ ತಂಗಿಯರು ಇದ್ದರು. ಇವರೆಲ್ಲಾ 8ಕ್ಕೆ 12ಅಡಿ ಮನೆಯಲ್ಲಿ ವಾಸವಾಗಿದ್ದರು.ಇವರು ಉತ್ತರಪ್ರದೇಶದ ವಾರಣಾಸಿಗೆ ಸೇರಿದವರು. ಇವರ ಹೆಸರು ಗೋವಿಂದ ಜಯಸ್ವಾಲ್.

ಇವರು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಗ ಒಂದು ದಿನ ಸ್ನೇಹಿತನ ಮನೆಗೆ ಆಟ ಆಡಲು ಹೋಗಿದ್ದರು. ಆಗ ಸ್ನೇಹಿತನ ತಂದೆ ಇವನು ರಿಕ್ಷಾ ಓಡಿಸುವವನ ಮಗ.ಅವನ ಜೊತೆ ಸೇರಬೇಡ ಎಂದು ಅವಮಾನ ಮಾಡಿ ಕಳುಹಿಸಿದರು. ಆಗಲೇ ಜೀವನದಲ್ಲಿ ಏನಾದರೂ ಮಾಡಬೇಕು ಎಂದು ಅಂದುಕೊಂಡರು. ಅದು ಕಳೆದ ಒಂದುವರ್ಷಕ್ಕೆ ತಾಯಿ ತೀರಿ ಹೋದರು.

ಒಂದು ಕಡೆ ಬಡತನ. ಪುಸ್ತಕ ಕೊಳ್ಳಲು ಹಣವಿಲ್ಲದ ಇವರು ಹೇಗೋ ಸ್ಯೆನ್ಸ್ ಮಾಡಿ ಡಿಗ್ರಿ ಮುಗಿಸಿದರು. ಬಸ್ಕಿ ಮಾಡಿದ ನಂತರ ಸ್ನೇಹಿತರ ಬಳಿ ಐಎಎಸ್ ಮಾಡುತ್ತೇನೆ ಎಂದು ಹೇಳಿದರು. ಆಗ ಸ್ನೇಹಿತರು “ಕೆಲಸ ಮಾಡುವುದು ಬಿಟ್ಟು ಐಎಎಸ್ ಮಾಡುತ್ತೀಯಾ” ಎಂದು ಹೀಯಾಳಿಸಿದರು. ಇವರು ತನ್ನ ತಂದೆಯ ಹತ್ತಿರ ಐಎಎಸ್ ಮಾಡುತ್ತೇನೆ ಎಂದು ಹೇಳುತ್ತಾರೆ.ಆಗ ಅವರ ತಂದೆ ತಮ್ಮ 2ಎಕರೆ ಜಮೀನನ್ನು 10,000 ರೂಪಾಯಿಗಳಿಗೆ ಮಾರಿ ತಮ್ಮ ಮಗನಿಗೆ ದೆಹಲಿಗೆ ಹೋಗು ಎನ್ನುತ್ತಾರೆ. ನಂತರ ಹಣ ಸಾಕಾಗದೆ ಅಲ್ಲಿನ ಮಕ್ಕಳಿಗೆ ಪಾಠ ಮಾಡಿ ಅದರಿಂದ ಸಂಪಾದನೆ ಮಾಡುತ್ತಾ ತಮ್ಮ ಖರ್ಚುಗಳನ್ನು ನಿಭಾಯಿಸುತ್ತಾರೆ.

ಕಷ್ಟಪಟ್ಟು ಓದಿದ ಅವರು ಮೊದಲ ಪ್ರಯತ್ನದಲ್ಲಿ ಭಾರತಕ್ಕೆ 48ನೇ ರಾಂಕ್ ಬರುತ್ತಾರೆ. ಅವರ ತಂದೆಗೆ ಪ್ರಪಂಚವನ್ನು ಗೆದ್ದಷ್ಟು ಆನಂದ ಆಯಿತು. ಈಗ ಗೋವಿಂದ ಜಯಸ್ವಾಲ್ ದಿಟ್ಟ ಮತ್ತು ನಿಷ್ಠಾವಂತ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ತಂದೆ, ಅಕ್ಕ ಎಲ್ಲರನ್ನು ನೋಡಿಕೊಳ್ಳುವುದಲ್ಲದೆ 10 ಅನಾಥ ಮಕ್ಕಳಿಗೆ ಓಡಿಸುತ್ತಿದ್ದಾರೆ. ಇವರು ಇಡೀ ದೇಶಕ್ಕೆ ಮಾದರಿ ಆಗಿದ್ದಾರೆ.

Leave a Reply

Your email address will not be published. Required fields are marked *