ಗ್ಯಾಸ್ ಸ್ಟವ್ ಕೆಲವೇ ನಿಮಿಷಗಳಲ್ಲಿ ಕ್ಲಿನ್ ಮಾಡುವ ಸುಲಭ ವಿಧಾನ

0 2

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಅಡಿಗೆ ಮಾಡಿದ ನಂತರ ಗ್ಯಾಸ್ಸ್ಟೋವ್ ಗಲೀಜು ಆಗುತ್ತದೆ. ಸ್ಟೋವ್ ಇಲ್ಲದೆ ಅಡಿಗೆ ಮಾಡಲು ಸಾಧ್ಯವಿಲ್ಲ. ನಾವು ಕೊಳಕು ಮಾಡಬಾರದು ಎಂದು ಎಷ್ಟೇ ಬಾರಿ ಅಂದುಕೊಂಡರ ಕೊಳಕು ಆಗುತ್ತದೆ. ಆದರೆ ಸ್ವಚ್ಛವಾಗಿ ನಾವು ಮಾಡಿಕೊಳ್ಳದಿದ್ದರೆ ನಮಗೆ ಮನಸಿಗೆ ಸಮಾಧಾನ ಇಲ್ಲ. ಆರೋಗ್ಯಕ್ಕೂ ಒಳ್ಳೆಯದಲ್ಲ.ಇಲ್ಲಿ ಗ್ಯಾಸ್ ಸ್ಟೋವ್ ಸ್ವಚ್ಛ ಮಾಡುವ ಒಂದು ಸುಲಭದ ವಿಧಾನವನ್ನು ನೋಡೋಣ.

ಇದು ತುಂಬಾ ಸುಲಭದ ವಿಧಾನವಾಗಿದೆ. ಗ್ಯಾಸ್ ಸ್ವಚ್ಛ ಮಾಡುವಾಗ ಮೊದಲು ಸಿಲಿಂಡರನ್ನು ಹುಷಾರಾಗಿ ಆಫ್ಫ್ ಮಾಡಿಕೊಳ್ಳಬೇಕು. ಇದು ಬಹಳ ಮುಖ್ಯ. ನಂತರದಲ್ಲಿ ಗ್ಯಾಸ್ ಸ್ಟೋವ್ ಬನ್ಸ್ ನ ತೆಗೆದು ಪಕ್ಕಕ್ಕಿಟ್ಟುಕೊಳ್ಳಿ.

ಮೊದಲು ಒಂದು ಕಪ್ ತೆಗೆದುಕೊಂಡು 2ಸ್ಫೂನ್ ನಷ್ಟು ದಿಟರ್ಜೆಂಟ್ ಪೌಡರ್ ಹಾಕಿಕೊಳ್ಳಿ. ನೀವು ಮನೆಯಲ್ಲಿ ಯಾವುದು ಬಳಸುತ್ತೀರೋ ಅದನ್ನು ಹಾಕಬಹುದು. ಇದಕ್ಕೆ ಅರ್ಧ ಕಪ್ ನಷ್ಟು ನೀರನ್ನು ಹಾಕಿ ಚೆನ್ನಾಗಿ ಕಲಸಬೇಕು. ನಂತರ ತಯಾರಿಸಿದ ನೀರನ್ನು ಸ್ಟೋವಿನ ಮೇಲೆ ಕೊಳಕಾದ ಜಾಗಗಳಲ್ಲಿ ಹಾಕಬೇಕು. ಹಾಕಿದ ನಂತರ ಒಂದೆರಡು ನಿಮಿಷ ಚೆನ್ನಾಗಿ ನೆನೆಯಲು ಬಿಡಬೇಕು. ನಂತರ ಪಾತ್ರ ತೊಳೆಯುವ ಬ್ರಶನ್ನು ಬಳಸಿ ನಿಧಾನಕ್ಕೆ ಉಜ್ಜಿದರೆ ಸಾಕು. ನಂತರ ನೀರನ್ನು ಹಾಕಿ ಕೆಯ್ಯಲ್ಲಿ ಉಜ್ಜಿತೊಳೆಯಬೇಕು.

ತುಂಬಾ ಸೂಲಭವಾಗಿ ಇದನ್ನು ಸ್ವಚ್ಛ ಮಾಡಬಹುದು. ಇದರಿಂದ ಗ್ಯಾಸ್ ಸ್ಟೋವ್ ತುಂಬಾ ನೀಟಾಗಿ ಕಾಣುತ್ತದೆ. ಹಾಗೆ ತುಂಬಾ ಶೈನಿಂಗ್ ಆಗಿರುತ್ತದೆ. ಗ್ಯಾಸಿನ ಮೇಲೆ ಹಾಲು ಏನಾದರೂ ಪದಾರ್ಥ ಚೆಲ್ಲಿರುತ್ತೇವೆ. ಅಂತಹ ಜಿಡ್ಡುಗಳನ್ನು ಕೂಡ ತುಂಬಾ ಸುಲಭವಾಗಿ ಕಷ್ಟವಿಲ್ಲದೆ ಹೋಗಿಸಬಹುದು.

ಹಾಗೆಯೇ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಗ್ಯಾಸ್ ಸ್ಟೋವ್ ಬರ್ನ್ಸ್ ಕಪ್ಪು ಆಗಿರುತ್ತದೆ.ಸುಲಭವಾಗಿ ಮನೆಯಲ್ಲಿ ಫಳಫಳ ಅಂತ ಹೊಳೆಯೋ ಹಾಗೆ ಬೇಗನೆ ಮಾಡಬಹುದು.ಅದರ ವಿಧಾನವನ್ನು ತಿಳಿಯೋಣ. ಮೊದಲು ಅರ್ಧ ಕಪ್ ವಿನೆಗರ್ಗೆ ಅರ್ಧ ಕಪ್ ನೀರು ಹಾಕಿ ಗ್ಯಾಸ್ ಸ್ಟೋವ್ ಬರ್ನ್ಸ್ ನೆನೆಸಿಡಿ. ಮುಳುಗುವ ಹಾಗೆ ಒಂದು ರಾತ್ರಿ ನೆನೆಸಿಡಬೇಕು. ನಂತರ ಪಾತ್ರೆ ತೊಳೆಯುವ ಬ್ರಶ್ ನಿಂದ ಉಜ್ಜಿದರೆ ಸಾಕು. ಆದ್ದರಿಂದ ಈ ಸುಲಭ
ವಿಧಾನದಿಂದ ನಿಮ್ಮ ಮನೆಯ ಗ್ಯಾಸ್ ಸ್ಟೋವನ್ನು ಸ್ವಚ್ಛವಾಗಿ ಮತ್ತು ಶುಚಿಯಾಗಿ ಇಟ್ಟುಕೊಳ್ಳಿ.

Leave A Reply

Your email address will not be published.