ನೀವೆಲ್ಲರೂ ಕೂಡ ನಟಿ ಆರತಿ ಅವರಿಗೆ ಸಂಬಂಧಿಸಿದಂತೆ ಒಂದಷ್ಟು ಅಂತೆಕಂತೆ ಸುದ್ದಿಯನ್ನು ಕೇಳಿರುತ್ತೀರಿ ಅದರಲ್ಲಿ ಒಂದಿಷ್ಟು ಸುಳ್ಳು ಒಂದಷ್ಟು ಸತ್ಯ ಕೂಡ ಸೇರಿರುತ್ತದೆ. ಅದಕ್ಕೂ ಮಿಗಿಲಾಗಿ ನಟಿ ಆರತಿಯವರು ಅಷ್ಟೊಂದು ಪ್ರಖ್ಯಾತ ನಟಿ ಆಗಿದ್ದರರೂ ಕನ್ನಡ ಸಿನಿಮಾರಂಗಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿದ್ದರೂ, ನೂರಾ ಇಪ್ಪತ್ತೈದಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದರೂ ಒಂದಷ್ಟು ಸಮಯಗಳ ಕಾಲ ಕನ್ನಡ ಸಿನಿಮಾರಂಗವನ್ನ ಆಳಿದ್ದರೂ ಕೂಡ ಕೆಲವೊಂದು ಟೀಕೆಗಳಿಗೆ ಒಳಗಾಗಿ ತನ್ನೊಳಗೆ ಒಂದಿಷ್ಟು ನೋವನ್ನು ಅದುಮಿಟ್ಟುಕೊಂಡರು. ಆದರೆ ಆರತಿಯವರ ಸಮಾಜ ಸೇವೆಯ ಬಗ್ಗೆ ಸರಿಯಾಗಿ ಯಾರಿಗೂ ತಿಳಿದಿಲ್ಲ ನಮ್ಮ ಸಮಾಜ ಕೆಟ್ಟದ್ದರ ಬಗ್ಗೆ ಮಾತನಾಡುತ್ತದೆ ಆದರೆ ಒಳ್ಳೆಯತನವನ್ನು ಗುರುತಿಸುವುದು ಕಡಿಮೆ. ನಾವಿಂದು ನಿಮಗೆ ನಟಿ ಆರತಿಯವರ ಸಮಾಜ ಸೇವೆಗೆ ಸಂಬಂಧಿಸಿದಂತೆ ಕೆಲವು ವಿಚಾರಗಳನ್ನು ತಿಳಿಸಿಕೊಡುತ್ತೇವೆ.

ನಟಿ ಆರತಿಯವರು ಹುಟ್ಟಿದ್ದು 1954 ರಲ್ಲಿ ಅರಕಲಗೂಡಿನ ಕುಶಾಲನಗರ ಸಮೀಪದ ಅರೆಕಲ್ಲು ಎಂಬಲ್ಲಿ ಹುಟ್ಟುತ್ತಾರೆ ಇವರ ಮೊದಲ ಹೆಸರು ಭಾರತಿ ಅದಾಗಲೇ ಭಾರತಿ ಎನ್ನುವ ಓರ್ವ ನಟಿ ಇರುವ ಕಾರಣ ಪುಟ್ಟಣ್ಣ ಕಣಗಾಲ್ ಅವರು ಇವರ ಹೆಸರನ್ನು ಆರತಿ ಎಂದು ಮರು ನಾಮಕರಣ ಮಾಡುತ್ತಾರೆ. ಆರತಿ ಅವರು ಪಿಯುಸಿ ಮುಗಿಸಿ ಮುಂದಿನ ಶಿಕ್ಷಣದ ಕನಸನ್ನು ಕಾಣುತ್ತಿರುತ್ತಾರೆ. ತಾವು ವೈದ್ಯರಾಗಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ ಆದರೆ ಅವರ ತಂದೆ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.

ತಂದೆಯ ವಿರುದ್ಧವಾಗಿ ನಿಲ್ಲುತ್ತಾರೆ ಹೆಣ್ಣುಮಕ್ಕಳು ಹೆಚ್ಚಾಗಿ ಯಾವ ಕ್ಷೇತ್ರಕ್ಕೆ ಹೋಗುವುದಿಲ್ಲ ಆ ಕ್ಷೇತ್ರಕ್ಕೆ ತಾನು ಹೋಗಬೇಕು ಎಂದು ಹಠ ಕಟ್ಟಿಕೊಳ್ಳುತ್ತಾರೆ. ಇದೇ ಸಮಯದಲ್ಲಿ ಗೆಜ್ಜೆಪೂಜೆ ಸಿನಿಮಾಕ್ಕೆ ಕಲಾವಿದರನ್ನು ಹುಡುಕುತ್ತಿರುತ್ತಾರೆ ಅದಕ್ಕೆ ಸಂಬಂಧಿಸಿದಂತೆ ಪೇಪರ್ನಲ್ಲಿ ಬರಹವೊಂದು ಬಂದಿರುತ್ತದೆ ಅದು ಆರತಿಯವರ ಕೈಗೆ ಸಿಗುತ್ತದೆ ಆಗ ಆರತಿಯವರು ನಾನು ಹೇಗಾದರು ಮಾಡಿ ಸಿನಿಮಾದಲ್ಲಿ ನಟನೆ ಮಾಡಬೇಕು ಎಂದು ನಿರ್ಧರಿಸುತ್ತಾರೆ.

ಅದೇ ರೀತಿಯಾಗಿ ಗೆಜ್ಜೆಪೂಜೆ ಸಿನಿಮಾದ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಹೋಗುತ್ತಾರೆ ಪುಟ್ಟಣ್ಣ ಅವರ ಹತ್ತಿರ ಅವಕಾಶವನ್ನು ಕೇಳುತ್ತಾರೆ. ನಂತರ ಅಂತಿಮವಾಗಿ ಆರತಿ ಅವರಿಗೆ ಒಂದು ಪಾತ್ರವನ್ನು ಕೊಡಲಾಗುತ್ತದೆ ಅದಕ್ಕೂ ಮೊದಲು ಆರತಿಯವರಿಗೆ ನಟನೆಯ ಬಗ್ಗೆ ಗಂಧಗಾಳಿ ತಿಳಿದಿರುವುದಿಲ್ಲ. ಆರಂಭದಲ್ಲಿ ಚೆನ್ನಾಗಿ ಅಭಿನಯವನ್ನು ಮಾಡಿಕೊಂಡು ಹೋಗುತ್ತಿರುತ್ತಾರೆ ನಂತರ ಅವರ ತಂದೆಗೆ ತಿಳಿಯುತ್ತದೆ ಅವರು ಅಭಿನಯ ಮಾಡುವುದಕ್ಕೆ ಅವಕಾಶವನ್ನು ಕೊಡುವುದಿಲ್ಲ ಆಗ ಶಿವರಾಂ ಅವರು ಇವರ ಮನೆಗೆ ಹೋಗಿ ಇವರ ತಂದೆಯನ್ನು ಒಪ್ಪಿಸಿ ಆರತಿಯವರನ್ನು ಕರೆದುಕೊಂಡು ಬರುತ್ತಾರೆ ನಂತರ ಚಿತ್ರೀಕರಣ ಮುಗಿಯುತ್ತದೆ. ಗೆ

ಜ್ಜೆಪೂಜೆ ಸಿನಿಮಾದಲ್ಲಿ ಇವರ ಪಾತ್ರಕ್ಕೆ ತಕ್ಕ ಮಟ್ಟಿಗೆ ಹೆಸರು ಸಿಗುತ್ತದೆ ಅಲ್ಲಿಂದ ಆರತಿ ಅವರಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶಗಳು ದೊರೆಯುತ್ತವೆ ಡಾಕ್ಟರ್ ರಾಜಕುಮಾರ್ ಅವರ ಜೊತೆಯೂ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ. ನಾಗರಹಾವು ಸಿನಿಮಾ ಇವರ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.

ಎಡಕಲ್ಲು ಗುಡ್ಡದಮೇಲೆ ಬಂಗಾರದ ಪಂಜರ ಉಪಾಸನೆ ಶುಭಮಂಗಳ ಬಿಳಿ ಹೆಂಡತಿ ಕಥಾಸಂಗಮ ರಂಗನಾಯಕಿ ಹೀಗೆ ನೂರಾ ಇಪ್ಪತ್ತೈದಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಾರೆ. ಪುಟ್ಟಣ್ಣ ಕಣಗಾಲ್ ಅವರ ಜೊತೆ ಹನ್ನೆರಡು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಸಾವಿರದ ಒಂಬೈನೂರ ಎಂಬತ್ತಾರರಲ್ಲಿ ಟೈಗರ್ ಸಿನಿಮಾದಲ್ಲಿ ಕೊನೆಯ ಬಾರಿಗೆ ಅಭಿನಯವನ್ನ ಮಾಡುತ್ತಾರೆ ಆನಂತರ ತುಂಬಾ ಸಮಯದ ನಂತರ ಇವರ ಮಗಳು ಯಶಸ್ವಿನಿಯೊಂದಿಗೆ ಸೇರಿಕೊಂಡು ಮಿಟಾಯಿ ಮನೆ ಎನ್ನುವ ಚಿತ್ರವನ್ನು 2005ರಲ್ಲು ನಿರ್ದೇಶನ ಮಾಡುತ್ತಾರೆ ಈ ಸಿನಿಮಾಗೆ ರಾಜ್ಯಪ್ರಶಸ್ತಿ ಸಿಗುತ್ತದೆ.

ಆರತಿಯವರು ಸಿನಿಮಾದಲ್ಲಿ ನಟಿಸುತ್ತಿದ್ದ ಸಮಯದಲ್ಲಿ ಅವರ ನಟನೆಗೆ ಮತ್ತು ಸೌಂದರ್ಯಕ್ಕೆ ಪುಟ್ಟಣ್ಣ ಕಣಗಾಲ್ ಅವರಿಗೆ ಇವರ ಮೇಲೆ ವಿಪರೀತ ವಾದಂತಹ ಪ್ರೀತಿ ಉಂಟಾಗುತ್ತದೆ. ಬಿಳಿ ಹೆಂಡತಿ ಸಿನಿಮಾದ ಸಮಯದಲ್ಲಿ ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ಪುಟ್ಟಣ್ಣ ಕಣಗಾಲ್ ಅವರು ಆರತಿಯನ್ನು ವಿವಾಹವಾಗುತ್ತಾರೆ. ಆರಂಭದಲ್ಲಿ ಇಬ್ಬರೂ ಚೆನ್ನಾಗಿದ್ದರು ಯಶಸ್ವಿನಿ ಎನ್ನುವ ಮಗಳು ಕೂಡ ಹುಟ್ಟುತ್ತಾಳೆ ನಂತರ ಬರುತ್ತಾ ಬರುತ್ತಾ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಆಗುತ್ತದೆ.

ಸಾವಿರದ ಒಂಬೈನೂರಾ ಎಂಬತ್ತೊಂದರಲ್ಲಿ ಇಬ್ಬರು ಬೇರೆಯಾಗುತ್ತಾರೆ. ಇದಾದ ನಂತರ ಆರತಿಯವರು ಸಿನಿಮಾ ಚಿತ್ರೀಕರಣಕ್ಕೆ ಹೋಗುತ್ತಿರುತ್ತಾರೆ ಮನೆಯಲ್ಲಿ ಮಗಳು ಒಬ್ಬಳೇ ಇರುತ್ತಾಳೆ. ಒಂದು ದಿನ ಇವರು ಚಿತ್ರೀಕರಣವನ್ನು ಮುಗಿಸಿ ಹಿಂತಿರುಗಿ ಬರುವಾಗ ಇವರಿಗೆ ಮಗಳನ್ನು ನೋಡಿ ಒಂದು ರೀತಿ ಅನಿಸುತ್ತದೆ ಆಗ ಮಗಳ ತಲೆಯ ಮೇಲೆ ಕೈಯಿಟ್ಟು ನಾನು ಇನ್ನು ಮುಂದೆ ಯಾವುದೇ ಚಿತ್ರೀಕರಣಕ್ಕೆ ಹೋಗುವುದಿಲ್ಲ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ಚಿತ್ರೀಕರಣಕ್ಕೆ ವಿದಾಯವನ್ನು ಹೇಳುತ್ತಾರೆ.

ಆನಂತರದಲ್ಲಿ ಅವರು ತಮ್ಮ ಸಂಪೂರ್ಣ ಜೀವನವನ್ನು ಸಮಾಜ ಸೇವೆಗೆ ಮುಡುಪಿಡುತ್ತೇನೆ ಎಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಉತ್ತರ ಕರ್ನಾಟಕದ ಇಪ್ಪತ್ತು ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುತ್ತಾರೆ ಹಳ್ಳಿಗಳಿಗೆ ಶೌಚಾಲಯದ ವ್ಯವಸ್ಥೆಯನ್ನು ಮಾಡುತ್ತಾರೆ ಆಸ್ಪತ್ರೆ ವ್ಯವಸ್ಥೆಯನ್ನು ಮಾಡುತ್ತಾರೆ ಹೆಣ್ಣುಮಕ್ಕಳಿಗೆ ಸ್ವಉದ್ಯೋಗದ ತರಬೇತಿಯನ್ನು ಕೊಡುತ್ತಾರೆ. ಜಿಎಸ್ ಶಿವರುದ್ರಪ್ಪ ಅವರ ಮಗ ಕಟ್ಟಿಸಿದಂತಹ ದೀನಬಂಧು ಅನಾಥ ಮಕ್ಕಳ ಶಾಲೆಗೆ ವಿಶಾಲವಾದಂತ ಹಾಸ್ಟೆಲ್ ಕಟ್ಟಡವನ್ನು ನಿರ್ಮಿಸಿ ಕೊಡುತ್ತಾರೆ ಮತ್ತು ಎರಡು ಕೋಟಿಯಷ್ಟು ಠೇವಣಿ ಹಣವನ್ನು ನೀಡುತ್ತಾರೆ.

ಅವರು ಬೆಳ್ಳಿತೆರೆ ಎಂಬ ದೊಡ್ಡ ಮನೆಯನ್ನು ಕಟ್ಟಿಸಿರುತ್ತಾರೆ ಆ ಮನೆಯನ್ನು ಮಾರಾಟ ಮಾಡಿ ಅದರಿಂದ ಬಂದಂತಹ 15 ಕೋಟಿ ರೂಪಾಯಿ ಹಣವನ್ನು ಎಲ್ಲ ಕಡೆಗಳಲ್ಲಿ ಸಮಾಜಸೇವೆಗೆ ತೊಡಗಿಸುತ್ತಾರೆ. ಇದೇ ರೀತಿ ತಮ್ಮ ಆಸ್ತಿಯ ಹೆಚ್ಚುಕಡಿಮೆ ಮುಕ್ಕಾಲು ಭಾಗದಷ್ಟು ಸಮಾಜಸೇವೆಗೆ ತೊಡಗಿಸುತ್ತಾರೆ. ಆದರೆ ಎಲ್ಲಿಯೂ ಕೂಡ ಪ್ರಚಾರವನ್ನು ಪಡೆದುಕೊಳ್ಳುವುದಿಲ್ಲ ಮಾಧ್ಯಮದವರಿಗೆ ಈ ವಿಷಯವನ್ನು ಹೇಳುವುದಿಲ್ಲ. ಇದೇ ರೀತಿಯಾಗಿ ಸಮಾಜಸೇವೆಯನ್ನು ಮಾಡುತ್ತಿದ್ದಂತಹ ಸಮಯದಲ್ಲಿ ಅವರಿಗೆ ಚಂದ್ರಶೇಖರ ದೇಸಾಯಿ ಗೌಡ ಎನ್ನುವವರ ಪರಿಚಯವಾಗುತ್ತದೆ ಅವರು ಕೂಡ ದೇಸಾಯಿ ಫೌಂಡೇಶನ್ ನಿರ್ಮಿಸಿಕೊಂಡು ಸಮಾಜಸೇವೆಯ ಮಾಡುತ್ತಿರುತ್ತಾರೆ ನಂತರ ಅವರಿಬ್ಬರ ವಿವಾಹವಾಗುತ್ತದೆ. ಮದುವೆಯಾದ ನಂತರ ಇಬ್ಬರೂ ಸಮಾಜಸೇವೆಯನ್ನು ಮುಂದುವರಿಸುತ್ತಾರೆ ನಂತರ ಇಬ್ಬರೂ ಅಮೆರಿಕಕ್ಕೆ ಹೋಗಿ ವಾಸವಾಗುತ್ತಾರೆ ಆಗಾಗ ಭಾರತಕ್ಕೆ ಬಂದು ಹೋಗುತ್ತಿರುತ್ತಾರೆ. ಇಲಿಯಾಗಿ ನಟಿ ತಾರಾ ಆರತಿಯವರು ಚಿತ್ರರಂಗದಿಂದ ದೂರ ಉಳಿದರೂ ಕೂಡ ಆರತಿ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ನಾವು ಆಶಿಸೋಣ.

Leave a Reply

Your email address will not be published. Required fields are marked *