ರಮೇಶ್ ಅರವಿಂದ್ ಮಗಳ ಲವ್ ಮ್ಯಾರೇಜ್ ಗೆ ಓಕೆ ಅಂದಿದ್ಯಾಕೆ ಗೊತ್ತೆ.?

0 4

ರಮೇಶ್ ಅರವಿಂದ್ ಅವರು ಒಳ್ಳೆಯ ನಟ ಮತ್ತು ಕಲಾವಿದರಾಗಿದ್ದಾರೆ. ಅವರು ಕನ್ನಡ ಚಿತ್ರರಂಗದಲ್ಲಿ ತುಂಬಾ ಚೆನ್ನಾಗಿ ಅಭಿನಯ ಮಾಡಿ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಇವರು ಮೊದಲು ನಡೆಸಿಕೊಡುತ್ತಿದ್ದ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿ ಬರುತ್ತಿತ್ತು. ಈ ಕಾರ್ಯಕ್ರಮ ಜೀ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುತ್ತಿತ್ತು. ಹಾಗೆಯೇ ಇತ್ತೀಚೆಗೆ ರಮೇಶ್ ಅರವಿಂದ್ ಅವರ ಮಗಳ ವಿವಾಹವಾಗಿದೆ. ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ರಮೇಶ್ ಅರವಿಂದ್ ಅವರು ಸೆಪ್ಟೆಂಬರ್ 11 1964ರಲ್ಲಿ ತಮಿಳುನಾಡಿನ ಕುಂಭಕೋಣಂದಲ್ಲಿ ಜನಿಸಿದರು. ಈಗ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. 1989ರಲ್ಲಿ ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ ಹಾಗೂ ನಿರೂಪಕ ಆದರು. ಇವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಮಲಯಾಳಂ, ಹಿಂದಿ, ತೆಲುಗುಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಕನ್ನಡ ಸಿನೆಮಾಗಳು ಎಂದರೆ ಸತಿ ಲೀಲಾವತಿ, ಡ್ಯುಯೆಟ್, ಅಮೆರಿಕ ಅಮೆರಿಕ, ಆಪ್ತಮಿತ್ರ, ಹೂಮಳೆ, ಚಂದ್ರಮುಖಿ ಪ್ರಾಣಸಖಿ, ಅಮೃತವಾರ್ಷಿಣಿ, ನಮ್ಮೂರ ಮಂದಾರ ಹೂವೆ ಇನ್ನೂ ಇವೆ.

ಅತ್ಯುತ್ತಮ ನಟ ಪಾತ್ರಕ್ಕೆ 2 ಫಿಲಂ ಫೇರ್ ಪ್ರಶಸ್ತಿಗಳು ದೊರಕಿದೆ. ಹೂಮಳೆ ಚಿತ್ರದ ನಟನೆಗೆ ಮತ್ತು ಲೇಖನಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿದೆ. ಉದಯ ಮತ್ತು ಸುವರ್ಣ ಚಾನೆಲ್ ಗಳು ನೀಡುವ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೆ. ಬಾಲಚಂದರ್ ಅವರು ಇವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಇವರು ಒಬ್ಬ ಒಳ್ಳೆಯ ಯುವ ಜನತೆಗೆ ಪ್ರಚೋದನೆ ನೀಡುವ ವ್ಯಕ್ತಿ ಎಂದು ಹೇಳಬಹುದು. ಹಾಗೆಯೇ ಇವರು ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದವರ ಜೀವನವನ್ನು ಇಡೀ ಕರ್ನಾಟಕಕ್ಕೆ ಪರಿಚಯಿಸಿದ್ದಾರೆ.

ಯಾವುದೇ ವ್ಯಕ್ತಿಗಳು ಸಿನಿಮಾಗಳಲ್ಲಿ ಹೆಂಡತಿಯರ ಜೊತೆ ನಟನೆ ಮಾಡಿದರೂ ಮನೆಯಲ್ಲಿ ನಿಜವಾದ ಸಂಗಾತಿ ಇರಲೇಬೇಕು. ಹಾಗೆಯೇ ಇವರ ಪತ್ನಿಯ ಹೆಸರು ಅರ್ಚನಾ. ಇವರಿಗೆ ಎರಡು ಮಕ್ಕಳು ಇದ್ದಾರೆ. ಅವರ ಮಗಳಿಗೆ ಇತ್ತೀಚೆಗೆ ವಿವಾಹ ಆಗಿದೆ. ಭರ್ಜರಿಯಾಗಿ ತನ್ನ ಮಗಳ ಮದುವೆಯನ್ನು ನಡೆಸಿದ್ದಾರೆ. ಪ್ರತಿಯೊಂದು ತಂದೆಗೂ ಎಷ್ಟೇ ಗಂಡು ಮಕ್ಕಳು ಇದ್ದರೂ ಒಂದು ಹೆಣ್ಣು ಮಗಳು ಇದ್ದರೆ ಸಾಕು. ಅವಳೇ ಎಲ್ಲಾ ಆಗಿಬಿಡುತ್ತಾಳೆ. ಇವರ ಕುಟುಂಬ ನೂರುಕಾಲ ಸುಖವಾಗಿ ಇರಲಿ ಎಂದು ನಾವೆಲ್ಲರೂ ಹಾರೈಸೋಣ.

Leave A Reply

Your email address will not be published.