ನಟಿ ಮಾಲಾಶ್ರೀ ಸಹೋದರಿಯರು ಹಾಗೂ ಕುಟುಂಬ ಮೊದಲ ಬಾರಿಗೆ ನೋಡಿ

0 1

ಕನಸಿನ ರಾಣಿ ಮಾಲಾಶ್ರೀ ಮಗಳು ಅನನ್ಯಾ, ಮಗ ಹಾಗೂ ಕುಟುಂಬದ ಜೊತೆ ಕಾಲಕಳೆದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಅದರ ಬಗ್ಗೆ ಇಲ್ಲಿದೆ ಕೆಲವು ವಿಷಯಗಳು ಹಾಗೂ ಮಾಲಾಶ್ರೀ ಅವರ ಸುಂದರ ಫಾಮಿಲಿಯ ಫೋಟೋಗಳು.

ಕನಸಿನ ರಾಣಿ ಎಂದೇ ಖ್ಯಾತಿ ಹೊಂದಿರುವ ಮಾಲಾಶ್ರೀ ಅವರ ಸಿನಿಮಾಗಳನ್ನು ಈಗಿನ ಯುವಜನತೆ ಕೂಡ ತುಂಬ ಖುಷಿಯಿಂದ ನೋಡುತ್ತದೆ. ರೊಮ್ಯಾನ್ಸ್, ಕಾಮಿಡಿ, ಸಾಹಸ, ಐತಿಹಾಸಿಕ ಈ ಎಲ್ಲ ಪ್ರಕಾರದ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡ ನಟಿ ಮಾಲಾಶ್ರೀ. 1990ರ ಸಮಯದಲ್ಲಿ ಮಾಲಾಶ್ರೀ ನಟಿಸಿದ್ದ ಬಹುತೇಕ ಸಿನಿಮಾಗಳು ಹಿಟ್ ಆಗಿದ್ದವು. ಅಂದಿನ ಜನರು ಇವರ ಸಿನಿಮಾಗಳನ್ನು ನೋಡಿ ಖುಷಿಪಡುತ್ತಿದ್ದರು. ನಟಿ ಮಾಲಾಶ್ರೀ ಸಿನಿಮಾ ಮೂಲಕ ಜನರನ್ನು ರಂಜಿಸುತ್ತಿದ್ದರು ಅಷ್ಟೇ ಅಲ್ಲದೆ ಪ್ರೇಕ್ಷಕರ ಕನಸಲ್ಲೂ ಮಾಲಾಶ್ರೀ ಬರುತ್ತಿದ್ದರಂತೆ. ಮಾಲಾಶ್ರೀ ಕಾಲ್‌ಶೀಟ್ ಸಿಗೋದು ಆ ಟೈಮ್‌ನಲ್ಲಿ ತುಂಬ ಕಷ್ಟವಾಗುತ್ತಿತ್ತು. ನಟನೆ ವಿಚಾರದಲ್ಲಿ ಮಾಲಾಶ್ರೀ ತುಂಬ ವಿಭಿನ್ನವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಾರೆ. ಇವರ ಅಭಿನಯ ನೋಡಿದವರು ಮಾಲಾಶ್ರೀ ಕನ್ನಡದ ಹುಡುಗಿ ಎನ್ನುವಷ್ಟರ ಮಟ್ಟಿಗೆ ಇವರನ್ನು ಒಪ್ಪಿಕೊಂಡಿದ್ದರು. ನಿರ್ಮಾಪಕ ರಾಮು ಅವರ ಸರಳತೆ, ಸದ್ಗುಣ ನೋಡಿ ಇಷ್ಟಪಟ್ಟ ಮಾಲಾಶ್ರೀ ಅವರ ಜೊತೆ ಮದುವೆಯಾಗಿ, ಖುಷಿಯಿಂದ ಬಾಳ್ವೆ ನಡೆಸುತ್ತಿದ್ದಾರೆ.

ಮಾಲಾಶ್ರೀ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ರಾಜ್‌ಕುಮಾರ್ ಫ್ಯಾಮಿಲಿಗೆ ಮಾಲಾಶ್ರೀ ಅವರ ಪರಿಚಯ ಮಾಡಿಕೊಟ್ಟಿದ್ದು ಚಿ.ಉದಯ್‌ಶಂಕರ್ ಅವರು. ಈ ಮೂಲಕ ಸಿನಿಮಾ ರಂಗಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಪರಿಚಯಿಸಿದ್ದ ನಟಿ ಮಾಲಾಶ್ರೀ1980-90ರ ಸಮಯದ ಬಹುಬೇಡಿಕೆಯ ನಟಿ ಆಗುತ್ತಾರೆ. ನಂತರದ ದಿನಗಳಲ್ಲಿ ಮುತ್ತಿನಂತ ಹೆಂಡ್ತಿ ಸಿನಿಮಾ ವೇಳೆ ನಿರ್ದೇಶಕ ರಾಮು ಅವರನ್ನು ಮೀಟ್ ಮಾಡಿದ್ದ ಮಾಲಾಶ್ರೀ, ಅವರಿಬ್ಬರ ನಡುವೆ ಪ್ರೇಮಾಂಕುರವಾಗಿ ಇಬ್ಬರೂ ವಿವಾಹವಾಗುತ್ತರೆ. ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಕನ್ನಡದಲ್ಲಿ ಮಾಲಾಶ್ರೀ ನಟನೆ ಮಾಡಲು ಆರಂಭಿಸುತ್ತಾರೆ. ಇನ್ನು ಮಾಲಾಶ್ರೀ ಅವರ ಸಹೋದರಿ ಶುಭಶ್ರೀ ಕೂಡ ದಕ್ಷಿಣ ಭಾರತದ ನಟಿ. ಮಾಲಾಶ್ರೀ ನಟಿಸಿದ್ದ ಬಹುತೇಕ ಸಿನಿಮಾಗಳೆಲ್ಲವೂ ಹಿಟ್ ಆಗಿರುವುದೇ.

ಕನ್ನಡದ ಲೇಡಿ ಟೈಗರ್ ಅವರ ಮುಂದಿನ ಕೆಲವು ಚಿತ್ರಗಳು ಅವರಿಗಾಗಿಯೇ ಬರೆದಂಥವಾಗಿದ್ದವು ಮತ್ತು ಇವಲ್ಲವುಗಳಲ್ಲಿ ಅವರು ಮುಖ್ಯ ಪಾತ್ರದಲ್ಲಿದ್ದರು. ಈ ಎಲ್ಲ ಚಿತ್ರಗಳು ಭಾರಿ ಯಶಸ್ಸು ಕಂಡವು. ಗಜಪತಿ ಗರ್ವಭಂಗ, ಪೋಲಿಸ್‍ನ ಹೆಂಡ್ತಿ, ಪ್ರತಾಪ್, ಕಿತ್ತೂರಿನ ಹುಲಿ ಮತ್ತು ತವರುಮನೆ ಉಡುಗೊರೆಯಂತಹ ಚಿತ್ರಗಳು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು ಮತ್ತು ಅವರು ಮುಂದೆ ಕನ್ನಡ ಚಿತ್ರರಂಗದ ಅತ್ಯಧಿಕ ಸಂಭಾವನೆ ಪಡೆದ ನಟಿಯೆನಿಸಿದರು. ಇಷ್ಟೊಂದು ಜನಪ್ರಿಯತೆ ಹೊಂದಿ ಕನ್ನಡಿಗರ ಕನಸಿನ ರಾಣಿ ಎಂದೇ ಖ್ಯಾತಿ ಹೊಂದಿರುವ ಮಾಲಾಶ್ರೀ ಅವರು ಇತ್ತೀಚೆಗೆ ತಮ್ಮ ಕುಟುಂಬದ ಸದಸ್ಯರ ಜೊತೆಗೆ ಅನ್ಯೋನ್ಯವಾಗಿ ಕಾಲಕಳೆದು ಆ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ಕಾಣಬಹುದು.

Leave A Reply

Your email address will not be published.