ಕನ್ನಡ ಚಿತ್ರರಂಗದ ಹಿರಿಯ ನಟಿ ಆಗಿರುವ ಶ್ರುತಿ ಅವರು ಒಂದು ಕಾಲದಲ್ಲಿ ಫೇಮಸ್ ನಟಿಯಾಗಿ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಶ್ರುತಿ ಅವರು ಆಗಿನ ಕಾಲದ ಹಲವು ಸಿನಿಮಾಗಳಲ್ಲಿ ಹಲವು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದೀಗ ಅವರ ಮಗಳು ಸುಮಧುರವಾಗಿ ಹಾಡುವ ಮೂಲಕ ಮನೆ ಮತಾಗುತ್ತಿದ್ದಾರೆ. ಗೌರಿ ಹಾಡಿರುವ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಕಣ್ಣೆ ಅಧಿರಿಟ್ಟೆ ಹಾಡು ಕೂಡ ಒಂದಾಗಿದೆ. ಶ್ರುತಿ ಅವರ ಮಗಳು ಗೌರಿ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಚಿತ್ರರಂಗದ ನಟಿ ಶ್ರುತಿ ಅವರು ಅನೇಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ ಅಲ್ಲದೆ ಆಗಿನ ಕಾಲದ ಬೇಡಿಕೆ ನಟಿಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಸಿನಿಮಾರಂಗದಿಂದ ಸ್ವಲ್ಪ ದೂರವೆ ಉಳಿದಿದ್ದಾರೆ ಮತ್ತು ರಾಜಕೀಯದಲ್ಲಿ ಕೆಲಸ ಮಾಡುತ್ತಿದ್ದರು. ಶ್ರುತಿ ಅವರು ತಮ್ಮ ನೈಜ ನಟನೆಯಿಂದಲೆ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಶ್ರುತಿ ಅವರಿಗೆ ಮುದ್ದಾದ ಮಗಳಿದ್ದಾಳೆ ಅವಳ ಹೆಸರು ಗೌರಿ, ಅವಳು ಬೆಂಗಳೂರಿನ ಕಾಲೇಜೊಂದರಲ್ಲಿ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ಓದಿದ್ದಾಳೆ. ಗೌರಿ ಓದುವುದರಲ್ಲಿ ಮಾತ್ರವಲ್ಲದೆ, ಹಾಡನ್ನು ಕೂಡ ಹಾಡುತ್ತಾರೆ ಅಲ್ಲದೆ ಗಿಟಾರ್ ನುಡಿಸುವುದು, ಲಾಂಗ್ ಜರ್ನಿ ಎಂದರೆ ಅವಳಿಗೆ ಇಷ್ಟ. ಗೌರಿಗೆ ಐಎಎಸ್ ಮಾಡುವ ಕನಸಿದೆ. ಅವಳಿಗೆ ಕನ್ನಡ ಚಿತ್ರರಂಗದ ಯಶ್-ರಮ್ಯಾ ಮೆಚ್ಚಿನ ನಟ ನಟಿಯರು.

ಅಮ್ಮ ಶ್ರುತಿ ಅವರು ನಟನೆಯ ಮೂಲಕ ಎಲ್ಲರಿಂದಲೂ ಸೈ ಎನಿಸಿಕೊಂಡರೆ ಅವರ ಮಗಳು ಗೌರಿ ಹಾಡಿನ ಮೂಲಕ ಸೈ ಎನಿಸಿಕೊಳ್ಳುತ್ತಿದ್ದಾರೆ. ಅವರ ಹಾಡನ್ನು ಸ್ನೇಹಿತರು, ಸಿನಿಮಾ ನಟ, ನಟಿಯರು ಮೆಚ್ಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಗೌರಿ ಅವರ ಹಾಡುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೌರಿ ಚಿತ್ರರಂಗದಲ್ಲಿ ಒಳ್ಳೆಯ ಪಾತ್ರ ಬಂದರೆ ನಟಿಸುವ ಆಸೆಯನ್ನು ಹೇಳಿಕೊಂಡಿದ್ದಾರೆ. ಚಿತ್ರರಂಗಕ್ಕೆ ಹೋಗುವ ವಿಷಯದಲ್ಲಿ ಶ್ರುತಿ ಅವರು ಮಗಳಿಗೆ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ. ಗೌರಿಯ ಹಾಡುಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಗೌರಿ ಎಲ್ಲಾ ರೀತಿಯ ಹಾಡುಗಳನ್ನು ಹಾಡುತ್ತಾರೆ, ಇತ್ತೀಚೆಗೆ ಫೇಮಸ್ ಆಗಿರುವ ಕಣ್ಣೆ ಅಧಿರಿಟ್ಟೆ ತೆಲುಗು ಹಾಡನ್ನು ಹಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗೌರಿ ಚಿತ್ರರಂಗಕ್ಕೆ ಬರಲಿ, ಉತ್ತಮ ಸಿನಿಮಾಗಳಲ್ಲಿ ನಟಿಸಿ ಶ್ರುತಿ ಅವರಂತೆ ಜನರನ್ನು ರಂಜಿಸಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *