ನಟ ಗೋಲ್ಡನ್ ಸ್ಟಾರ್ ಗಣೇಶ್ ಮಗಳ ಸಕತ್ ಡಾನ್ಸ್ ವಿಡಿಯೋ

0 3

ಸಾಮಾನ್ಯವಾಗಿ ಸಲೆಬ್ರಿಟಿಗಳ ಮಕ್ಕಳು ಆದಷ್ಟು ಸಾಮಾಜಿಕ ಜಾಲತಾಣದಿಂದ ದೂರ ಇರುತ್ತಾರೆ. ಆದರೆ ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಮಕ್ಕಳು ಮಾತ್ರ ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅದೂ ಸಹ ಅಮ್ಮ-ಅಮ್ಮನ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೆಲವೊಮ್ಮೆ ಮಕ್ಕಳದ್ದೇ ಕಾರುಬಾರು. ಶಿಲ್ಪಾ ಹಾಗೂ ಗಣೇಶ್​ ತಮ್ಮ ಮಗಳು ಹಾಗೂ ಮಗನ ವಿಡಿಯೋಗಳನ್ನು ಆಗಾಗ ಪೋಸ್ಟ್​ ಮಾಡುತ್ತಿರುತ್ತಾರೆ. ಪ್ರವಾಸದ ಚಿತ್ರಗಳು ಹಾಗೂ ಮಗಳ ಡಬ್​ಸ್ಮ್ಯಾಶ್​ ಹೀಗೆ ಹಲವಾರು ವಿಡಿಯೋ ಮತ್ತು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ ಈ ಸೆಲೆಬ್ರಿಟಿ ದಂಪತಿ. ಇನ್ನುಗಣೇಶ್​ ತಮ್ಮ ಮಗಳೊಂದಿಗೆ ಖಾಸಗಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್​ ಹಾಕಿದ್ದ ವಿಡಿಯೋ ಬಹಳ ಹಿಂದೆ ವೈರಲ್ ಆಗಿತ್ತು. ಈಗ ಮತ್ತೆ ಇದೇ ಪುಟ್ಟ ಸೆಲೆಬ್ರಿಟಿಯ ಲೆಟೆಸ್ಟ್​ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಜೊತೆಗೆ ಫ್ಯಾಮಿಲಿಗೆ ಹೆಚ್ಚು ಟೈಮ್ ಕೊಡುವ ನಟರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಒಬ್ಬರು. ಗಣೇಶ್ ಸಿನಿಮಾ ಶೂಟಿಂಗ್ ಇಲ್ಲ ಅಂದರೆ ಮಗ ವಿಹಾನ್ ಮತ್ತು ಮಗಳು ಚಾರಿತ್ರ್ಯ ಜೊತೆ ಕಾಲ ಕಳೆಯುತ್ತಾರೆ. ಚಾರಿತ್ರ್ಯ ಈಗಾಗಲೇ ಚಮಕ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಗಣೇಶ್ ಮಗಳು ಚಾರಿತ್ರ್ಯಾ ಇತ್ತೀಚೆಗೆ ಅಷ್ಟೇ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಮಗಳ ಹುಟ್ಟು ಹಬ್ಬದ ಖುಷಿಯನ್ನ ಗಣೇಶ್ ಮತ್ತಷ್ಟು ಹೆಚ್ಚಿಸಿದ್ದಾರೆ. ಸದ್ಯ ಸಖತ್ ಸಿನಿಮಾ, ಚಿತ್ರೀಕರಣದಲ್ಲಿರೋ ಗೋಲ್ಡನ್ ಸ್ಟಾರ್, ತಮ್ಮ ಮಗಳ ಬರ್ತ್ ಡೇಗೆ ಒಂದು ವಿಶೇಷ ವಿಡಿಯೋವನ್ನ ಹಂಚಿಕೊಳ್ಳುವ ಮೂಲಕ, ಮಗಳಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದ್ದಾರೆ. ಮಕ್ಕಳೊಂದಿಗಿನ ಗಣೇಶ್ ಅವರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹಾಗಂತ ಅವರು ವಿಶ್‌ ಮಾಡಿದ್ದಕ್ಕಷ್ಟೆ ಈ ವಿಡಿಯೋ ವೈರಲ್‌ ಆಗಿದೆ ಅಂತಲ್ಲ, ಪುತ್ರಿ ಚಾರಿತ್ಯ್ರಾ ಡಾನ್ಸ್‌ ಮಾಡುವ ವಿಡಿಯೋ ಹಾಕಿ, ಬರ್ತ್‌ ಡೇ ವಿಶ್‌ ಮಾಡಿದ್ದಾರೆ. ಚಾರಿತ್ರ್ಯಾ ಅಲ್ಲಿ ಸಖತ್‌ ಆಗಿಯೇ ಡಾನ್ಸ್‌ ಮಾಡಿರೋದು ನೋಡುಗರಿಗೆ ಮೆಚ್ಚುಗೆಯಾಗಿದೆ.ಮಕ್ಕಳೊಂದಿಗೆ ಗೋಲ್ಡನ್ ಸ್ಟಾರ್ ಗಣೇಶ್ಚಾರಿತ್ರ್ಯಾ ಡ್ಯಾನ್ಸ್ ನೋಡ್ತಾ ಇದ್ದರೆ ಮುಂದಿನ ದಿನಗಳಲ್ಲಿ ಗಣೇಶ್ ಮಗಳು ಸಿನಿಮಾಗೆ ಬರುವ ಎಲ್ಲಾ ಲಕ್ಷಣಗಳು ಕಾಣ್ತಾ ಇದೆ. ಈಗಾಗಲೇ ಅಪ್ಪನ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಚಾರಿತ್ರ್ಯಾಳ ಈ ಡ್ಯಾನ್ಸ್ ನೋಡಿದರೆ ಭವಿಷ್ಯದ ಹೀರೋಯಿನ್ ಆಗುವ ಎಲ್ಲಾ ಸೂಚನೆಗಳು ಇವೆ. ಚಾರಿತ್ರ್ಯಾಳ ಡ್ಯಾನ್ಸ್ ನೋಡಿ ಗಣೇಶ್‌ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಗಣೇಶ್‌, ಗಾಳಿಪಟ 2 ಹಾಗೂ ಸಖತ್‌ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಅಭಿಪ್ರಾಯ ನೀಡಿ.

Leave A Reply

Your email address will not be published.