Ultimate magazine theme for WordPress.

ಸ್ಪೆಷಲ್ ಫೋಟೋ ಮೂಲಕ ತಾಯಿಯಾಗುತ್ತಿರುವ ಸೂಚನೆ ನೀಡಿದ ನಟಿ ಅಮೂಲ್ಯ

0 1

ನಟಿ ಅಮೂಲ್ಯ ಮತ್ತು ಜಗದೀಶ್​ ದಂಪತಿ ಫೋಟೋ ಸಮೇತ ಗುಡ್​ ನ್ಯೂಸ್​ ನೀಡಿದ್ದಾರೆ. ತಾವು ಮೊದಲ ಮಗವಿನ ಆಗಮನದ ನಿರೀಕ್ಷೆಯಲ್ಲಿ ಇರುವುದಾಗಿ ಅವರು ತಿಳಿಸಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬಾಲನಟಿಯಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟವರು ಅಮೂಲ್ಯ ಅವರು ನಂತರ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಹೀರೋಯಿನ್ ಆಗಿ ಬಡ್ತಿ ಪಡೆದುಕೊಂಡರು. ಚಿಕ್ಕ ವಯಸ್ಸಿನಲ್ಲಿಯೇ ಸ್ಟಾರ್ ಹೀರೋಯಿನ್ ಆಗಿ ಮಿಂಚಿದರು. ಗೋಲ್ಡನ್ ಸ್ಟಾರ್ ಗಣೇಶ್, ಯಶ್, ಲವ್ಲೀ ಸ್ಟಾರ್ ಪ್ರೇಮ್, ಕೃಷ್ಣ ಅಜಯ್ ರಾವ್, ದುನಿಯಾ ವಿಜಯ್ ಮುಂತಾದ ಸ್ಟಾರ್ ಕಲಾವಿದರಿಗೆ ಅವರು ಜೋಡಿಯಾಗಿ ನಟಿಸಿದರು. ‘ನಾನು ನನ್ನ ಕನಸು’ ಸಿನಿಮಾದಲ್ಲಿ ಬಹುಭಾಷಾ ಕಲಾವಿದ ಪ್ರಕಾಶ್ ರೈ ಜತೆ ತೆರೆಹಂಚಿಕೊಂಡು ಮೆಚ್ಚುಗೆ ಗಳಿಸಿದರು. ಹೀಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇರುವಾಗಲೇ ಅವರು 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಈಗ ಕನ್ನಡದ ಖ್ಯಾತ ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ತಾವು ಪ್ರೆಗ್ನೆಂಟ್​ ಎಂಬ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ. ಪತಿ ಜಗದೀಶ್​ ಜತೆ ಇರುವ ಒಂದು ವಿಶೇಷ ಫೋಟೋವನ್ನು ಹಂಚಿಕೊಂಡು, ಸೋಶಿಯಲ್​ ಮೀಡಿಯಾ ಮೂಲಕ ಅಮೂಲ್ಯ ಸಿಹಿ ಸುದ್ದಿ ನೀಡಿದ್ದಾರೆ. ಈ ದಂಪತಿಗೆ ಎಲ್ಲರೂ ಶುಭಕೋರುತ್ತಿದ್ದಾರೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಅಮೂಲ್ಯ ಅವರು ಇತ್ತೀಚಿನ ದಿನಗಳಲ್ಲಿ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ.

ಮದುವೆ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡ ನಟಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟ ಆ್ಯಕ್ಟೀವ್ ಆಗಿದ್ದರು. ಸಂಸಾರದ ಕಡೆಗೆ ಅವರು ಹೆಚ್ಚು ಗಮನ ನೀಡಿದ್ದಾರೆ. ಈಗ ಅವರು ತಾಯಿ ಆಗುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ಸದ್ಯ ಅವರ ಹೊಸ ಈ ಫೋಟೋ ಅಭಿಮಾನಿಗಳ ವಲಯದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಅಮೂಲ್ಯ ಚಿತ್ರರಂಗದಿಂದ ದೂರಾದರು ಪತಿಯ ಜೊತೆ ಸಾಮಾಜಿಕ ಕಾರ್ಯದಲ್ಲಿ ಅಮೂಲ್ಯ ತೊಡಗಿಸಿಕೊಂಡಿದ್ದರು. ರಾಜಕೀಯ ಹಿನ್ನಲೆ ಕುಟುಂಬದ ಜಗದೀಶ್​​ ಲಾಕ್ಡೌನ್​ ಸಮಯದಲ್ಲಿ ಅನೇಕ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದರು. ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್​ ಜತೆ ಅಮೂಲ್ಯ ಮದುವೆ 2017ರಲ್ಲಿ ನೆರವೇರಿತು.

ಈಗ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ‘ನಾವೀಗ ಕೇವಲ ಇಬ್ಬರಲ್ಲ’ ಎಂಬ ಕ್ಯಾಪ್ಷನ್​ ಮೂಲಕ ಅಮೂಲ್ಯ ಸಿಹಿ ಸುದ್ದಿ ನೀಡಿದ್ದಾರೆ. ಈ ಗುಡ್​ ನ್ಯೂಸ್​ ನೀಡಲು ಅವರು ಮಾಡಿಸಿರುವ ಫೋಟೋಶೂಟ್​ ಗಮನ ಸೆಳೆಯುತ್ತಿದೆ. 2017ರ ಬಳಿಕ ಅಮೂಲ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಅವರು ಪೂರ್ಣ ಪ್ರಮಾಣದಲ್ಲಿ ಹೀರೋಯಿನ್​ ಆಗಿ ನಟಿಸಿದ ಕೊನೇ ಸಿನಿಮಾ ‘ಮಾಸ್ತಿಗುಡಿ’.

2017ರಲ್ಲಿ ತೆರೆಕಂಡ ‘ಮುಗುಳು ನಗೆ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಅಮೂಲ್ಯ ಮದುವೆಯಾಗಿ ನಾಲ್ಕು ವರ್ಷದ ಸಂಭ್ರಮದಲ್ಲಿ ಈ ಹೊಸ ಸುದ್ದಿ ನೀಡಿದ್ದು, ಅಭಿಮಾನಿಗಳು ಅವರಿಗೆ ಶುಭ ಹಾರೈಸಿದ್ದಾರೆ. 2022ಕ್ಕೆ ಹೊಸ ಕುಟುಂಬದ ಸದಸ್ಯ ನಮ್ಮ ಕುಟುಂಬಕ್ಕೆ ಆಗಮಿಸಲಿದ್ದು, ಈ ಹಿನ್ನಲೆ ಅವರು ವಿಶೇಷ ಫೋಟೋಶೂಟ್ ಕೂಡ ಮಾಡಿಸಿದ್ದಾರೆ.

ಇನ್ನು ನಟಿ ಅಮೂಲ್ಯ ಅವರು ತಾಯಿ ಆಗುತ್ತಿರುವ ಸುದ್ದಿಯನ್ನು ಕೇಳಿ ಕನ್ನಡ ನಟಿಯರು ಶುಭ ಹಾರೈಸಿದ್ದಾರೆ. ಕನ್ನಡ ನಟಿಯರಾದ ಸುಧಾರಾಣಿ, ಶ್ರುತಿ, ತಾರಾ, ಮೇಘನಾ ರಾಜ್, ಗಣೇಶ್ ಅವರ ಪತ್ನಿ ಶಿಲ್ಪ ಗಣೇಶ್, ನಟರಾದ ರವಿಶಂಕರ್, ದಿಗಂತ್, ರಾಕಿಂಗ್ ಸ್ಟಾರ್ ಯಶ್, ಅವರು ಅಮೂಲ್ಯ ದಂಪತಿಗಳಿಗೆ ಶುಭ ಕೋರಿದ್ದಾರೆ. ಅಮೂಲ್ಯ ಹಾಗು ಅವರ ಪತಿ ಜಗದೀಶ್ ಅವರು ಹಂಚಿಕೊಂಡಿರುವ ಸುಂದರ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು.

Leave A Reply

Your email address will not be published.