ದಾಂಪತ್ಯ ಸಮಸ್ಯೆ ಹಾಗೂ ವಧು ವರರ ಬಯಕೆಯನ್ನು ಹಿಡೇರಿಸುವ ಏಕೈಕ ದೇವಸ್ಥಾನ

0 275

ತಮಿಳುನಾಡಿನಲ್ಲಿರುವ ಕುಂಭಕೋಣಂಗೆ ದೇವಸ್ಥಾನಗಳ ನಗರ ಎಂದು ಕರೆಯಲಾಗುತ್ತದೆ ಏಕೆಂದರೆ ಕುಂಬಕೋಣಂ ನಲ್ಲಿರುವ ಪುರಾಣ ಪ್ರಸಿದ್ಧ ದೇವಾಲಯಗಳು ಬೇರೆಲ್ಲೂ ಕಂಡುಬರುವುದಿಲ್ಲ ಎಂದು ಪರಿಗಣಿಸಲಾಗಿದೆ. ಈ ಕುಂಭಕೋಣಂನಲ್ಲಿ ಇರುವಂತಹ ಪ್ರತಿ ದೇವಾಲಯಕ್ಕೂ ಸಹ ತನ್ನದೇ ಆದಂತಹ ಪ್ರಾಧ್ಯಾನ್ಯತೆ ಇದೆ. ಇಂತಹ ಪುರಾಣ ಪ್ರಸಿದ್ಧವಾಗಿರುವಂತಹ ದೇವಾಲಯಗಳಿಗೆ ಭೇಟಿ ನೀಡಿ ದೇವರನ್ನು ಪೂಜೆ ಮಾಡಿಸುವುದರಿಂದ ನಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ನಾವು ಕಂಡುಕೊಳ್ಳಬಹುದು. ನಾವಿಂದು ನಿಮಗೆ ಕುಂಭಕೋಣಂ ನಲ್ಲಿರುವ ಒಂದು ಪ್ರಸಿದ್ಧ ದೇವಾಲಯದ ಬಗ್ಗೆ ತಿಳಿಸಿಕೊಡುತ್ತೇವೆ.

ತ್ವರಿತವಾಗಿ ವಿವಾಹವಾಗಬೇಕು ಅಥವಾ ಉತ್ತಮವಾದ ವರ ಅಥವಾ ವಧು ಬೇಕು ಎಂದು ಬಯಕೆಯುಳ್ಳವರು ಈ ದೇವಸ್ಥಾನಕ್ಕೆ ತೆರಳಿ ದೇವರನ್ನು ಶ್ರದ್ಧೆ ನಿಷ್ಠೆ ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಂಡರೆ ಇಚ್ಛೆಗೆ ತಕ್ಕ ವರ ಅಥವಾ ವಧುವು ದೊರಕಿ ಅತಿ ಶೀಘ್ರವಾಗಿ ವಿವಾಹವು ಸಂಪನ್ನಗೊಳ್ಳುತ್ತದೆ.

ಅಷ್ಟೇ ಅಲ್ಲದೆ ವೈಮನಸ್ಸಿನಿಂದ ದೂರವಾದವಂತಹ ದಂಪತಿಗಳು ಈ ದೇಗುಲಕ್ಕೆ ಆಗಮಿಸಿ ಶ್ರದ್ಧಾ ನಿಷ್ಠ ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿದರೆ ಪತಿ-ಪತ್ನಿಯರ ನಡುವೆ ಇರುವಂತಹ ವೈಮನಸ್ಸು ದೂರವಾಗಿ ಸತಿ-ಪತಿಗಳು ಅನ್ಯೋನ್ಯವಾಗಿ ಸಂತೋಷವಾಗಿ ಬಾಳಿ ಬದುಕುತ್ತಾರೆ. ಇಷ್ಟೊಂದು ಶಕ್ತಿಯುತ ದೇವಾಲಯಕ್ಕೆ ದೇಶದ ನಾನಾ ಭಾಗಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತಮ್ಮಷ್ಟಕ್ಕೆ ತಕ್ಕಂತಹ ವಧು ಅಥವಾ ವರರನ್ನ ಪಡೆದ ಅನೇಕ ಉದಾಹರಣೆಗಳಿವೆ.

ನಾವಿಂದು ನಮ್ಮ ದೇಶದಲ್ಲಿ ವಿಶಿಷ್ಟ ಎನಿಸಿರುವ ಶ್ರೀ ಶಕ್ತಿವನೇಶ್ವರ ದೇವಾಲಯದ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ದೇವಸ್ಥಾನ ಇರುವುದು ನಮ್ಮ ನೆರೆಯ ರಾಜ್ಯ ತಮಿಳುನಾಡಿನ ಕುಂಭಕೋಣಂ ಪಟ್ಟಣದಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿ ತಿರುಶಕ್ತಿಮುಟ್ರಂ ಎಂಬ ಗ್ರಾಮವಿದೆ

ಈ ಗ್ರಾಮದಲ್ಲಿ ಶಕ್ತಿವನೇಶ್ವರ ದೇವಸ್ಥಾನವಿದೆ ಈ ದೇವಾಲಯ ಅತ್ಯಂತ ಅಪರೂಪದ ದೇವಾಲಯ ಎಂದು ಹೇಳಬಹುದು. ಏಕೆಂದರೆ ಈ ದೇವಸ್ಥಾನದ ಗರ್ಭಗುಡಿಯಲ್ಲಿ ಶಿವಲಿಂಗವನ್ನು ಪಾರ್ವತಿದೇವಿಯು ಗಟ್ಟಿಯಾಗಿ ತಬ್ಬಿಹಿಡಿದಿರುವಂತಹ ಮೂರ್ತಿ ಕಂಡುಬರುತ್ತದೆ ಅಷ್ಟೇ ಅಲ್ಲದೆ ಒಂದೇ ಮೂರ್ತಿಯಲ್ಲಿ ಶಿವಪರಮಾತ್ಮ ಮತ್ತು ಪಾರ್ವತಿದೇವಿ ನೆಲೆಸಿರುವ ಆಲಯ ಇದು. ಇಂತಹ ವಿಶಿಷ್ಟ ಮೂರ್ತಿ ಶಕ್ತಿವನೇಶ್ವರ ದೇವಾಲಯದಲ್ಲಿ ಮಾತ್ರ ಕಂಡುಬರುತ್ತದೆ.

ಈ ದೇಗುಲಕ್ಕೆ ಆಗಮಿಸುವ ಅದೆಷ್ಟೋ ಜನರು ತಾವು ಬಯಸಿರುವಂತಹ ಜೀವನ ಸಂಗಾತಿಯನ್ನು ಪಡೆದುಕೊಳ್ಳುತ್ತಾರೆ ಈ ದೇಗುಲಕ್ಕೆ ಇಷ್ಟೊಂದು ಕ್ಷೇತ್ರ ಮಹಿಮೆ ಬರುವುದಕ್ಕೂ ಸಹ ಪುರಾಣ ಆಧಾರಿತ ಒಂದು ಕಾರಣವಿದೆ. ಪರ್ವತ ರಾಜನ ಪುತ್ರಿ ಪಾರ್ವತಿಯು ಬಾಲ್ಯದಿಂದಲೂ ಶಿವ ಪರಮಾತ್ಮನ ಬಗ್ಗೆ ವಿಶೇಷ ಒಲವನ್ನು ಹೊಂದಿರುತ್ತಾರೆ.

ಪಾರ್ವತಿ ದೇವಿಯು ಬೆಳೆಯುತ್ತಾ ಪ್ರೌಢಾವಸ್ಥೆಗೆ ತಲುಪಿದ ನಂತರ ಶಿವ ಪರಮಾತ್ಮನನ್ನೇ ತನ್ನ ಪತಿಯನ್ನಾಗಿ ಪಡೆಯಬೇಕು ಎನ್ನುವ ಉದ್ದೇಶದಿಂದ ಒಂಟಿ ಕಾಲಿನಲ್ಲಿ ನಿಂತು ಘೋರ ತಪಸ್ಸನ್ನು ಆಚರಿಸುತ್ತಾರೆ. ಪಾರ್ವತಿದೇವಿಯ ತಪಸ್ಸಿನಿಂದ ಶಿವ ಪರಮಾತ್ಮ ಪ್ರಸನ್ನರಾದರು ಸಹ ತಕ್ಷಣ ಪ್ರತ್ಯಕ್ಷವಾಗುವುದಿಲ್ಲ. ಪಾರ್ವತಿ ದೇವಿಯನ್ನು ಪರೀಕ್ಷಿಸುವ ಉದ್ದೇಶದಿಂದ ಶಿವಪರಮಾತ್ಮ ತೇಜೋಮಯ ಅಗ್ನಿಯ ರೂಪದಲ್ಲಿ ಆಕೆಗೆ ದರ್ಶನವನ್ನು ನೀಡುತ್ತಾರೆ.

ಪರಶಿವನ ಈ ರೂಪವನ್ನು ನೋಡಿದಂತಹ ಪಾರ್ವತಿದೇವಿಯು ಬೆಂಕಿಯ ಜ್ವಾಲೆಯನ್ನು ಶಿವಪರಮಾತ್ಮನೆಂದು ತಿಳಿದು ಅದನ್ನು ತಬ್ಬಿ ಹಿಡಿದುಕೊಳ್ಳುತ್ತಾರೆ. ಇದರಿಂದ ಪ್ರಸನ್ನನಾದ ಶಿವಪರಮಾತ್ಮರೂ ತಮ್ಮ ನೈಜ ರೂಪದಲ್ಲಿ ಆಗಮಿಸಿ ಪಾರ್ವತಿ ದೇವಿಯನ್ನು ವಿವಾಹವಾಗುತ್ತಾರೆ. ಈ ರೀತಿಯಾಗಿ ಪಾರ್ವತಿದೇವಿಯು ತಾವು ಇಷ್ಟಪಟ್ಟಂತಹ ಶಿವ ಪರಮಾತ್ಮನನ್ನು ಪತಿಯನ್ನಾಗಿ ಪಡೆದುಕೊಳ್ಳುತ್ತಾರೆ.

ಈ ಪುರಾಣ ಕಥೆಗೆ ಪೂರಕವಾಗಿ ಶಕ್ತಿವನೇಶ್ವರ ದೇವಾಲಯದಲ್ಲಿ ಪಾರ್ವತಿದೇವಿಯು ಶಿವ ಪರಮಾತ್ಮನನ್ನು ತಬ್ಬಿ ಕೊಂಡಿರುವಂತೆ ಶಿವಲಿಂಗವಿದ್ದು ದೇವಾಲಯವು ಮಹತ್ವವನ್ನು ಪಡೆದುಕೊಂಡಿದೆ. ಶಕ್ತಿವನೇಶ್ವರ ದಲ್ಲಿರುವ ಶಿವಲಿಂಗವು ಅಪಾರ ಶಕ್ತಿಯನ್ನು ಹೊಂದಿದೆಯಂತೆ. ಈ ದೇವಾಲಯಕ್ಕೆ ಭೇಟಿ ನೀಡಿ ಶ್ರದ್ಧಾಭಕ್ತಿಯಿಂದ ಶಿವಪರಮಾತ್ಮನನ್ನ ಆರಾಧಿಸುವವರಿಗೆ ಶಿವಪರಮಾತ್ಮ ಉತ್ತಮ ಬಾಳಸಂಗಾತಿಯನ್ನು ನೀಡಿ ಆಶೀರ್ವದಿಸುತ್ತಾರೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ದೇವಾಲಯಕ್ಕೆ ಅಧಿಕವಾಗಿ ಯುವಜನರೇ ಆಗಮಿಸುತ್ತಾರೆ. ದೇವರಿಗೆ ಪೂಜೆ ಸಲ್ಲಿಸಿ ಉತ್ತಮ ಸಂಗಾತಿಯನ್ನು ಪಡೆದು ಸಂತೋಷದಿಂದ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

ಇನ್ನು ವಿಶೇಷವಾಗಿ ಅನೇಕ ಪ್ರೇಮಿಗಳು ತಮ್ಮ ಮದುವೆಗೆ ಹೆತ್ತವರು ಸಮ್ಮತಿಸಿ ಸುಲಭವಾಗಿ ಮದುವೆ ನೆರವೇರಲಿ ಎಂಬ ಉದ್ದೇಶದಿಂದದಾಗಿ ಈ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಾರೆ. ಬಾಳ ಸಂಗಾತಿಯ ಮೇಲಿನ ವೈಮನಸ್ಸಿನಿಂದ ವಿಚ್ಛೇದನ ಹಂತಕ್ಕೆ ತಲುಪಿರುವಂತಹ ವಿವಾಹ ಸಂಬಂಧಗಳು ಸಹ ಶಕ್ತಿವನೇಶ್ವರ ದೇವರ ಕೃಪೆಯಿಂದ ಉಳಿದುಕೊಂಡಿರುವ ಉದಾಹರಣೆಗಳಿವೆ.

ನಮ್ಮ ದೇಶದಲ್ಲಿಯೇ ವಿಶಿಷ್ಟ ಎನ್ನಬಹುದಾದ ಶಿವ-ಪಾರ್ವತಿಯರ ವಿಗ್ರಹವನ್ನು ನೋಡಬೇಕಾದರೆ ನಾವು ಒಮ್ಮೆಯಾದರೂ ಕುಂಭಕೋಣಂನ ಬಳಿ ಇರುವಂತಹ ತಿರುಶಕ್ತಿಮುಟ್ರಂ ಗ್ರಾಮದಲ್ಲಿರುವ ಶಕ್ತಿವನೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗೋಣ.

Leave A Reply

Your email address will not be published.