Tulasi Plant Tips: ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವ ನೀಡಲಾಗುತ್ತದೆ. ಹಿಂದುಗಳ ಪ್ರಕಾರ ತುಳಸಿ ಗಿಡವೂ (Tulasi plant) ವಿಶೇಷ ಶಕ್ತಿಯನ್ನ ಹೊಂದಿದ್ದು ಇದನ್ನು ಶ್ರೇಷ್ಠ ಸ್ಥಾನದಲ್ಲಿ ಇಟ್ಟು ಪೂಜಿಸಲಾಗುತ್ತದೆ ಮತ್ತು ಇದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ ಇಂತಹ ತುಳಸಿ ಗಿಡವನ್ನ ಎಲ್ಲೆಂದರಲ್ಲಿ ನೆಟ್ಟು ಬೆಳೆಸಲು ಸಾಧ್ಯವಿಲ್ಲ ಹಾಗೆ ಅದನ್ನು ಚೆನ್ನಾಗಿ ಕಾಪಾಡಿಕೊಂಡು ಹೋಗಲು ಕಷ್ಟಕರವಾಗಿರುತ್ತದೆ ಅದರಂತೆ ತುಳಸಿ ಗಿಡದ (Tulasi plant) ಸಂರಕ್ಷಣೆಯನ್ನು ಹೇಗೆ ಮಾಡಬೇಕು ಎಂದು ಇಲ್ಲಿ ನಾವು ತಿಳಿದುಕೊಳ್ಳೋಣ.

ತುಂಬಾ ಪವಿತ್ರವಾದ ತುಳಸಿ ಗಿಡವೂ (Tulasi plant) ಹಲವಾರು ವಿಶೇಷತೆಗಳನ್ನು ಹೊಂದಿದ್ದು ಪ್ರಮುಖವಾಗಿ ಇದು ಔಷಧೀಯ ತತ್ವವನ್ನು ಹೊಂದಿರುತ್ತದೆ ಆದ್ದರಿಂದ ಈ ಗಿಡದ ರಕ್ಷಣೆಯನ್ನು ಕಾಲಕಾಲಕ್ಕೆ ಸರಿಯಾಗಿ ನಿರ್ವಹಿಸಬೇಕು. ತುಳಸಿ ಗಿಡದ ಬೀಜಗಳು ಒಣಗಿದ್ದರೆ ಅವುಗಳನ್ನು ಕಾಲಕಾಲಕ್ಕೆ ಬೇರ್ಪಡಿಸಬೇಕು ಇದರಿಂದ ತುಳಸಿ ಗಿಡ ಆರೋಗ್ಯಕರವಾಗಿ ಬೆಳೆಯಲು ಸಹಾಯಕವಾಗುತ್ತದೆ.

ಅಷ್ಟೇ ಅಲ್ಲದೆ ಅತಿ ಹೆಚ್ಚು ಸೂರ್ಯನ ಬೆಳಕಿನಿಂದ ಹಾಗೂ ಮಳೆಯಿಂದ ಕೂಡ ತುಳಸಿಯನ್ನ ರಕ್ಷಿಸಬೇಕಾಗುತ್ತದೆ ಈ ಗಿಡಕ್ಕೆ ಲಘು ಬೆಚ್ಚಗಿನ ವಾತಾವರಣವು ಬಹಳ ಸೂಕ್ತವಾಗಿರುತ್ತದೆ ಚಳಿಗಾಲದಲ್ಲಿ ಅಥವಾ ಇನ್ಯಾವುದೇ ವಾತಾವರಣದ ಅಧಿಕ ಬದಲಾವಣೆಯಿಂದ ತುಳಸಿಯನ್ನ ರಕ್ಷಿಸಲು ಬಟ್ಟೆ ಅಥವಾ ಗಾಜಿನ ಹೊದಿಕೆಯನ್ನು ಉಪಯೋಗಿಸಬಹುದು.

ತುಳಸಿ ಗಿಡಕ್ಕೆ ಅತಿ ಹೆಚ್ಚು ತೇವಾಂಶ ಒಳ್ಳೆಯದಲ್ಲ ತುಳಸಿ ಗಿಡದ ಬುಡದಲ್ಲಿ ಹೆಚ್ಚು ನೀರಿನ ಶೇಖರಣೆಯಿಂದ ಗಿಡದ ಎಲೆಗಳು ಉದುರುವ ಸಾಧ್ಯತೆ ಹೆಚ್ಚಾಗಿರುತ್ತವೆ ತುಳಸಿ ಗಿಡವನ್ನು ಈ ಸಮಸ್ಯೆಯಿಂದ ದೂರವೇರಿಸಲು ಗಿಡದಿಂದ 15 ರಿಂದ 20 ಸೆಂಟಿಮೀಟರ್ ದೂರದಲ್ಲಿ ಮಣ್ಣನ್ನು ಅಗೆದು ಬೇರುಗಳಲ್ಲಿ ತೇವಾಂಶ ಗೋಚರವಾದಾಗ ಅದರಲ್ಲಿ ಒಣ ಮಣ್ಣು ಮತ್ತು ಮರಳನ್ನು ತುಂಬಿಸಬೇಕು ಇದು ಸುತ್ತಲಿನ ಬೇರುಗಳಿಗೆ ಗಾಳಿ ಆಡಲು ಸಹಾಯಮಾಡುತ್ತದೆ.

ಕಡಿಮೆ ನೀರು, ಮಧ್ಯಮ ಪ್ರಮಾಣದ ಬಿಸಿಲು ಹಾಗೂ ಕಡಿಮೆ ಚಳಿಯ ವಾತಾವರಣದಲ್ಲಿ ತುಳಸಿ ಗಿಡದ ಎಲೆಯು ಹಚ್ಚಹಸುರಾಗಿ ಬೆಳೆಯುತ್ತದೆ. ತುಳಸಿ ಗಿಡದಲ್ಲಿ ತೇವಾಂಶದಿಂದ ಉಂಟಾಗುವ ಫಂಗಸ್ ಸೋಂಕಿನಿಂದ ಗಿಡವನ್ನು ರಕ್ಷಿಸಿಕೊಳ್ಳಲು ಬೇವಿನ ಬೀಜದ ಪುಡಿಯನ್ನು ಉಪಯೋಗಿಸಬಹುದು ಅಥವಾ ಬೇವಿನ ಎಲೆಯನ್ನು ನೀರಿನಲ್ಲಿ ಕುದಿಸಿ ತಣ್ಣಗೆ ಮಾಡಿ ಬಾಟಲಿಯಲ್ಲಿ ಶೇಖರಣೆ ಮಾಡಿಟ್ಟುಕೊಂಡು ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆ ಎರಡು ಚಮಚದಷ್ಟು ಬೇವಿನ ನೀರನ್ನು ಗಿಡಕ್ಕೆ ಸಿಂಪಡಿಸಬೇಕು ಇದರಿಂದ ಫಂಗಸ್ ಸೋಂಕು ನಿವಾರಣೆ ಯಾಗುತ್ತದೆ.

ತುಳಸಿ ಗಿಡವನ್ನು ಎಣ್ಣೆಯ ಅಂಶ ಅಥವಾ ಹೊಗೆ ಇತ್ಯಾದಿಗಳಿಂದ ದೂರವಿಡಬೇಕು. ಪೂಜಿಸುವ ತುಳಸಿ ಗಿಡಗಳಿಂದ ಬತ್ತಿ ದೀಪ ಇತ್ಯಾದಿಗಳನ್ನು ದೂರ ಇಡಬೇಕು. ಇನ್ನು ಶಾಸ್ತ್ರಗಳ ಪ್ರಕಾರ ತುಳಸಿ ಗಿಡದ ಮೇಲೆ ಹಾದುಹೋಗುವ ತಂತಿ ಅಥವಾ ಹಗ್ಗದ ಮೇಲೆ ಬಟ್ಟೆಯನ್ನು ಒಣ ಹಾಕಬಾರದು ಮತ್ತು ಯಾವುದೇ ಅಶುದ್ಧ ವಸ್ತು ಅಥವಾ ಬಟ್ಟೆಗಳನ್ನ ಅದರ ಸುತ್ತಲೂ ಇಡಬಾರದು.

ಭಾನುವಾರ ಮಂಗಳವಾರ ಇದರ ಎಲೆಗಳನ್ನ ಕೀಳಬಾರದು ಎಂಬುದು ಕೂಡ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಅಷ್ಟೇ ಅಲ್ಲದೆ ತುಳಸಿ ಗಿಡವನ್ನು ಋತುಚಕ್ರದ ಸಮಯದಲ್ಲಿ ಮಹಿಳೆಯರು ಮುಟ್ಟಬಾರದು ಇದಕ್ಕೆ ಮೈಲಿಗೆ ಯಾಗದಂತೆ ನೋಡಿಕೊಳ್ಳಬೇಕು. ಇಂತಹ ಸೂಕ್ಷ್ಮವಾದ ಪರಿಶುದ್ಧವಾದ ತುಳಸಿ ಗಿಡವನ್ನು ಬೆಳೆಸಲು ಹಲವಾರು ಸೂಕ್ಷ್ಮತೆಯನ್ನ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!