ಇವರ ಹೆಸರು ರಮೇಶ್ ಗೊಲಾಪ್ (Ramesh Gholap IAS) ಅಂತ ಹೇಳಿ ಮೂಲತಃ ಮಹಾರಾಷ್ಟ್ರದವರು ಸೋಲಾಪುರ ಜಿಲ್ಲೆಯವರು ಅಲ್ಲಿ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿದಂತಹ ಅವರು ರಮೇಶ್ ಕುಲ ಹುಟ್ಟಿನಿಂದಲೇ ಬಡತನವನ್ನು ಕಂಡಂತಹ ವ್ಯಕ್ತಿ ಅಂತಿಮವಾಗಿ ಇವತ್ತು ಐಎಎಸ್ (IAS Officer) ಅಧಿಕಾರಿಯಾಗಿದ್ದಾರೆ ಇವರ ಕಡುಕಷ್ಟಗಳ ದಿನಗಳನ್ನು ಕೇಳುತ್ತಾ ಬಂದರೆ ಎಂಥ ಅವರಿಗೂ ಕೂಡ ಸ್ಪೂರ್ತಿ ಬರುತ್ತದೆ.

ಇಂತಹವರು ಈ ಹಂತಕ್ಕೆ ಹೋಗಿರುವಾಗ ನಾವು ಯಾಕೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಪ್ರತಿಯೊಬ್ಬರಿಗೂ ಅನಿಸುತ್ತದೆ ಇವರು ಇವತ್ತು ಅಧಿಕಾರಿ ಜಿಲ್ಲಾಧಿಕಾರಿಗಳಾಗಿ (District Collector) ಕಾರ್ಯನಿರ್ವಹಿಸುತ್ತಿದ್ದಾರೆ ಆದರೆ ಅವರ ತಾಯಿ ಮಾತ್ರ ಈಗಲೂ ಕೂಡ ಮನೆ ಮನೆಗೆ ಹೋಗಿ ಬೀದಿ ಬೀದಿ ಸುತ್ತಿ ಬಳೆ ಮಾರಾಟವನ್ನು ಮಾಡಿ ಅದರಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ.

ಯಾಕೆ ಇನ್ನೂ ಕೂಡ ಬಳೆ ಮಾರುತ್ತಿದ್ದಾರೆ ಎನ್ನುವ ಸಂಗತಿ ಗೊತ್ತಾದರೆ ನೀವೆಲ್ಲರೂ ಕೂಡ ಅಚ್ಚರಿಗೆ ಒಳಗಾಗುತ್ತೀರಿ, ಬಂಧುಗಳೇ ಅದಕ್ಕೂ ಮುನ್ನ ರಮೇಶ್ ಗೊಲಾಪ್ (Ramesh Gholap IAS) ಅಧಿಕಾರಿಯಾಗಿರುವಂತ ಸ್ಪೂರ್ತಿದಾಯಕವಾಗಿರುವಂತಹ ಕಥೆಯನ್ನು ಮೊದಲಿಗೆ ಹೇಳುತ್ತೇನೆ ಬಂಧುಗಳೇ ನಾವು ಆಗಲೇ ಹೇಳುತ್ತಿದ್ದ ಹಾಗೆ ರಮೇಶ್ ಗೊಲಾಪ್ ಮಹಾರಾಷ್ಟ್ರ ಮೂಲದವರು ಹುಟ್ಟುವ ಸಂದರ್ಭದಲ್ಲಿ ಹುಟ್ಟುವ ಸ್ವಲ್ಪ ವರ್ಷಗಳು ಆದ ನಂತರ ಇವರು ಎಡಗಾಲಿನ ಸ್ವಾಧೀನವನ್ನು ಕಳೆದುಕೊಳ್ಳುತ್ತಾರೆ.

ಮೊದಲ ಪೆಟ್ಟು ಅಂದರೆ ಅದು ಮತ್ತೊಂದು ಕಡೆಯಿಂದ ಕುಟುಂಬ ತೀರ ಬಡತನದಲ್ಲಿ ಇರುತ್ತದೆ ಇವರ ತಾಯಿ ಹೊರಗಡೆ ಹೋಗಿ ಬಹಳ ಕಷ್ಟಪಟ್ಟು ಬಳೆ ಮಾರಿಕೊಂಡು ಬದುಕುತ್ತಿದ್ದರು. ತಾಯಿಗೆ ಇವರು ಕೂಡ ಸಾತ್ ಕೊಡುತ್ತಿದ್ದರು ಯಾವಾಗಲೂ ಮಧ್ಯ ಸೇವನೆ ಮಾಡುತ್ತಿದ್ದ ತಂದೆ ಬಂದಂತ ಹಣವೆಲ್ಲವನ್ನು ಕೂಡ ಎಣ್ಣೆ ಹೊಡೆಯುವುದಕ್ಕೆ ಉಪಯೋಗಿಸುತ್ತಿದ್ದರು ಅವರ ತಂದೆ ಒಂದು ಸೈಕಲ್ ಅಂಗಡಿಯಲ್ಲಿ ಸೈಕಲ್ ರಿಪೇರಿ ಮಾಡುವ ಹುದ್ದೆಯನ್ನು ಮಾಡುತ್ತಿದ್ದರು .

ಇವರ ತಾಯಿ ಬಹಳ ಕಷ್ಟಪಟ್ಟು ಮನೆ ಮನೆಗೆ ಹೋಗಿ ಬಳೆ ಮಾರಿಕೊಂಡು ಬಂದರು ಅವರ ತಂದೆ ಎಲ್ಲವನ್ನು ಕೂಡ ಹೀಗಾಗಿ ಆ ಕುಟುಂಬ ಒದ್ದಾಡುವಂಥ ಪರಿಸ್ಥಿತಿ ಇದ್ದು ಅವರ ತಾಯಿ ಪ್ರತಿನಿತ್ಯ ಈ ರೀತಿ ಕೆಲಸ ಪಟ್ಟು ಅವರ ಕುಟುಂಬದಲ್ಲಿದ್ದು ಅದೆಲ್ಲವನ್ನು ಕೂಡ ಬಾಲ್ಯದಲ್ಲಿ ಕಂಡಂತಹ ರಮೇಶ್ ಗೊಲಾಪ್ ನಾನು ಏನಾದರೂ ಮಾಡಬೇಕು ಅಂತ ಅನಿಸುವುದಕ್ಕೆ ಶುರುವಾಗುತ್ತದೆ.

ನಾನು ಜೀವನದಲ್ಲಿ ಒಂದು ಹಂತಕ್ಕೆ ಹೋಗಬೇಕು ಅಂತ ಹೇಳಿ ಅದಕ್ಕೆ ತಕ್ಕ ಹಾಗೆ ಕಷ್ಟಪಟ್ಟು ಓದುವುದಕ್ಕೆ ಶುರು ಮಾಡುತ್ತಾರೆ ಇವರ ಮನೆಯಲ್ಲಿ ವಿದ್ಯುತ್ ದೀಪ ಇರಲಿಲ್ಲ ವಿದ್ಯುತ್ ಇಲ್ಲ ಅಂದರೂ ಕೂಡ ನಿಮಗೆಲ್ಲರಿಗೂ ಗೊತ್ತು TV ಇಲ್ಲ ಏನು ಇಲ್ಲ ನಾವುಗಳು ಏನು ಒಂದಿಷ್ಟು ಬೇಸಿಕ್ ಐಷಾರಾಮಿ ಸೌಲಭ್ಯಗಳು ಅಂತ ಕರೆಯುತ್ತೇವೆ ಒಂದು ಹಂತದ ವಯಸ್ಸಿನ ನಂತರ ಬಹುತೇಕ ಸಂದರ್ಭವನ್ನು ತಮ್ಮ ಓದು ಮುಗಿತು ಅಂದರೆ ಇವರು ಕೂಡ ಬಳೆ ಮಾರುವುದಕ್ಕೆ ಕಾಲ ಕಳೆಯುತ್ತಾರೆ ಮತ್ತೊಂದು ಕಡೆ ಚೆನ್ನಾಗಿ ಓದುತ್ತಾ ಇರುತ್ತಾರೆ ಅಂತೂ ಇಂತೂ SSLC ಮುಗಿಸುತ್ತಾರೆ ಕಂಪ್ಲೀಟ್ ಮಾಡಿ ಇಡೀ ಕುಟುಂಬದ ಜವಾಬ್ದಾರಿ ಅವರ ತಾಯಿ ಒಬ್ಬರದೇ ಆಗಿರುತ್ತದೆ.

ನಂತರ ಇವರ ತಲೆಯಲ್ಲಿ ಒಂದು ಯೋಚನೆ ಬರುತ್ತೆ ನನ್ನ ಹಾಗೆ ಸುಮಾರು ಜನ ಕಷ್ಟ ಹಾಗು ಬಡತನದಲ್ಲಿ ಬೆಳೆಯುತ್ತಿದ್ದಾರೆ ನಾನು ಏನಾದರು ಮಾಡಿ ಸಮಾಜಕ್ಕೆ ಒಳ್ಳೆಯ ಸೇವೆಯನ್ನು ಮಾಡಬೇಕು ಅನ್ನೋ ಹಂಬಲ ಇವರಲ್ಲಿ ಬರುತ್ತೆ, ಅವತ್ತಿನಿಂದಲೇ ಇವರು ಐಎಎಸ್ ಅಧಿಕಾರಿಯಾಗಬೇಕು ಎಂದು ಅಂದುಕೊಳ್ಳುತ್ತಾರೆ. ಅದಕ್ಕೆ ತಕ್ಕ ಹಾಗೆ ಇವರ ಮಾವನ ಜೊತೆ ಫೋಣೆಗೆ ಹೋಗುತ್ತಾರೆ. ಅಲ್ಲಿ ಹೋಗಿ ಇವರ ವಿದ್ಯಾಭ್ಯಾಸವನ್ನು ಶುರು ಮಾಡುತ್ತಾರೆ ಆದರೆ ಇವರ ತಾಯಿ ಅಲ್ಲಿ ಇಲ್ಲಿ ಹಣವನ್ನು ಸೇರಿಸಿ ಇವರ ಸಂಪೂರ್ಣ ವಿದ್ಯಾಭ್ಯಾಸಕ್ಕೆ ಹೂಡಿಕೆ ಮಾಡುತ್ತಾರೆ.

ಎಲ್ಲವನ್ನು ಕಲಿತ ಮೇಲೆ ಈ ರಮೇಶ್ ಅವರು ಶಿಕ್ಷಕರ ಹುದ್ದೆಯನ್ನಾಗಿ ಅಲಂಕಾರ ಮಾಡುತ್ತಾರೆ ಇದಾದ ನಂತರ ಅವರ ತಲೆಗೆ ಬರುತ್ತದೆ ಐಎಎಸ್ (IAS) ಎಂಬ ಕನಸು. ಇವರದು ಮುಖ್ಯ ಗುರಿ ಸಮಾಜಕ್ಕೆ ಏನನ್ನಾದರೂ ಸಹಾಯ ಮಾಡಬೇಕು ಎಂಬುದು ಅದೇ ಕಾರಣಕ್ಕೆ ಇವರು ಕೂಡ ಐಎಎಸ್ ಪರೀಕ್ಷೆಗೆ ಕುಳಿತುಕೊಳ್ಳುತ್ತಾರೆ.

ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಐಎಎಸ್ ಹುದ್ದೆಯನ್ನು ಅಲಂಕರಿಸಿ ಬಹಳಷ್ಟು ಹೆಸರು ಮಾಡಿದ್ದಾರೆ ಇವರು ಮಹಾರಾಷ್ಟ್ರದಲ್ಲಿ ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರ ಏನೆಂದರೆ ಇವರು ಐಎಎಸ್ ಆದಮೇಲೆ ಕೂಡ ಇವರ ತಾಯಿ ಬೀದಿ ಬೀದಿಯಲ್ಲಿ ಬಳೆಯನ್ನು ಮಾರುತ್ತಿದ್ದಾರೆ ಇವರ ತಾಯಿ. ಇದಕ್ಕೆ ಹಲವಾರು ಜನ ನೀವು ಇಷ್ಟು ದೊಡ್ಡವರಾದರು ಕೂಡ ನಿಮ್ಮ ತಾಯಿಯನ್ನು ಕೆಲಸ ಮಾಡಲು ಬಿಟ್ಟಿದ್ದೀರಾ ಅಲ್ಲ ಎಂದು ಇವರಿಗೆ ಹೀಯಾಳಿಸಿದರಂತೆ,

ಆದರೆ ರಮೇಶ್ ಎಲ್ಲರಿಗೂ ಹೇಳಿದ್ದು ಒಂದೇ ಮಾತು. ಈ ಕೆಲಸ ಬಿಡು ಎಂದು ಇವರ ತಾಯಿಗೆ ಹೇಳಿದಾಗ ಇವರ ತಾಯಿ ಹೇಳಿದ್ದು ಹೀಗೆ ನೀನು ಈಗ IAS ಅಧಿಕಾರಿ ಆಗಿರ ಬಹುದು ಆದರೆ ನಮ್ಮ ಜೀವನವನ್ನು ಮೇಲಕ್ಕೆ ಎತ್ತಿ ಹಿಡಿದಿದ್ದು ಇದೇ ಬಳೆ ಮಾರುವಂತ ವ್ಯಾಪಾರ ನೀನು ಐಎಎಸ್ (IAS) ಅಧಿಕಾರಿಯಾಗಲು ಮುಖ್ಯ ಕಾರಣ ಈ ಬಳೆಯ ವ್ಯಾಪಾರ ಹಾಗಾಗಿ ನಾನು ಈ ಬಳೆಯ ವ್ಯಾಪಾರವನ್ನು ಯಾವತ್ತಿಗೂ ಬಿಡುವುದಿಲ್ಲ ಎಂದು ಹೇಳಿದರಂತೆ.

Leave a Reply

Your email address will not be published. Required fields are marked *