ಪ್ರಕಾಶ್ ರಾಜ್ ಮೇಹು ಅವರ ಕನ್ನಡ ಚಿತ್ರರಂಗದ ಜರ್ನಿ ಹಾಗೂ ಜನುಮದ ಜೋಡಿ ಸಿನಿಮಾ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಪ್ರಕಾಶ್ ರಾಜ್ ಮೇಹು ಇವರು ಚಾಮರಾಜನಗರದ ಹತ್ತಿರದ ಒಂದು ಹಳ್ಳಿಯಿಂದ ಬಂದವರು. ಹೆಂಡ ಮಾರುತ್ತಿದ್ದ ಕುಟುಂಬದಿಂದ ಬಂದಿದ್ದಾರೆ. ಹೈಸ್ಕೂಲ್ ನಂತರದ ವಿದ್ಯಾಭ್ಯಾಸ ಮೈಸೂರಿನಲ್ಲಿ ನಡೆಯಿತು. ಸಹ ನಿರ್ದೇಶಕರಾಗಿ ಕೆಲಸ ಮಾಡಿದರು.ಈಗ ಇವರೇ ನಿರ್ದೇಶನ ಮಾಡಿದ ಡಿ.ಎನ್.ಎ ಚಿತ್ರ ಸೆನ್ಸಾರ್ ಹೋಗಿದೆ.

ರಾಜಕುಮಾರ್ ಅವರು ಪ್ರಕಾಶ ರಾಜ್ ಅವರಿಗೆ ದೂರದ ಸಂಬಂಧಿ. ಚಿಕ್ಕ ವಯಸ್ಸಿನಲಿ ರಾಜಕುಮಾರ್ ಅವರ ಚಿತ್ರ ನೋಡಿ ಅವರಂತೆ ಆಗಬೇಕು ಎನ್ನುವ ಆಸೆ ಬಂದಿತು. ಕೆಲವು ನಾಟಕಗಳಲ್ಲಿ ಅಭಿನಯಿಸಿದರು. ನಾಟಕಗಳನ್ನು ಬರೆದು ನಿರ್ದೇಶಿಸಿದರು. ನಂತರ ನೀನಾಸಂ ಹೋದರು ಅಲ್ಲಿ ಪ್ರಕಾಶ್ ರಾಜ್ ಅವರಿಗೆ ತಿಳಿಯಿತು ನಾನು ಒಳ್ಳೆ ನಟನಲ್ಲ ನಾನೊಬ್ಬ ನಿರ್ದೇಶಕನಾಗಬಹುದು ಎಂದು ನಿರ್ಧರಿಸಿದರು. ಅಲ್ಲಿಂದ ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗುತ್ತಾರೆ.

ಮೊದಲು ನಾಗಾಭರಣ ಅವರ ಬಳಿ ಅಪರಂಜಿ ಸಿನಿಮಾಕ್ಕೆ ಕ್ಲಾಪ್ ಆಗಿ ಸೇರಿಕೊಂಡರು, ನಾಲ್ಕನೇ ದಿನ ಡೈಲಾಗ್ಸ್ ಬರೆಯಲು ಅವಕಾಶ ಸಿಕ್ಕಿತು. ನಂತರ ನಾಗಾಭರಣ ಅವರು ಗೀತ ಮಾಧುರಿ ಎನ್ನುವ ಕಾರ್ಯಕ್ರಮ 12 ಕವಿಗಳ 60 ಗೀತೆಗಳ ಶೂಟ್ ಮಾಡುವುದು. ರಾಜ್ಯದ ಬೇರೆ ಬೇರೆ ಕಲ್ಚರ್, ಸ್ಥಳಗಳಲ್ಲಿ ಶೂಟ್ ಮಾಡಬೇಕಿತ್ತು, 6 ತಿಂಗಳ ಪ್ರೊಜೆಕ್ಟ್ ಆಗಿತ್ತು ಇದು ಪ್ರಕಾಶ್ ಅವರಿಗೆ ಒಳ್ಳೆಯ ಅನುಭವ ಕೊಟ್ಟಿತು. ನಂತರ ನಾಗಾಭರಣ ಮೂಲಕ ವಜ್ರೇಶ್ವರಿಗೆ ಎಂಟ್ರಿ ಯಾದರು. ಜನುಮದ ಜೋಡಿ ಸಿನಿಮಾಕ್ಕೆ ಕೆಲಸ ಮಾಡಿದರು, ನಾಗಮಂಡಲ ಸಿನಿಮಾ ಮಾಡಿದ ನಂತರ ಟುವ್ವಿ ಟುವ್ವಿ ಸಿನಿಮಾಕ್ಕೆ ಕೆಲಸ ಮಾಡಲು ವಜ್ರೇಶ್ವರಿ ಕಂಪನಿಗೆ ಹೋದರು ಅಲ್ಲಿ ಸುಮಾರು ಚಿತ್ರಗಳಿಗೆ ಪ್ರಕಾಶ್ ಅವರು ಸಹ ನಿರ್ದೇಶಕರಾಗಿ ಕೆಲಸ ಮಾಡಿದರು.

ರಾಜಕುಮಾರ್ ಅವರ ಎಲ್ಲಾದರೂ ಇರು ಎಂತಾದರೂ ಇರು ಎನ್ನುವ ಹಾಡನ್ನು ಶೂಟ್ ಮಾಡಲು ಅಣ್ಣಾವ್ರ ಮನೆಗೆ ಹೋದರು ಅಲ್ಲಿ ಮೊದಲ ಸಲ ರಾಜಕುಮಾರ್ ಅವರಿಗೆ ಪ್ರಕಾಶ್ ಅವರು ಕ್ಲ್ಯಾಪ್ ಕೊಟ್ಟಿದ್ದು. ಪ್ರಕಾಶ್ ಅವರು ಅಫೀಷಿಯಲ್ ಆಗಿ ಕೆಲಸ ಮಾಡಿದ ಮೊದಲ ಚಿತ್ರ ಜನುಮದ ಜೋಡಿ. ಜನುಮದ ಜೋಡಿ ಸ್ಕ್ರಿಪ್ಟ್ ಈಗಾಗಲೇ ಸಿನಿಮಾ ಮಾಡಬೇಕೆಂದು ತಯಾರಿ ನಡೆಸಿ ಕ್ಯಾನ್ಸಲ್ ಆಗಿತ್ತು ಅದನ್ನು ರಾಜಕುಮಾರ್, ಪಾರ್ವತಮ್ಮ ಓಕೆ ಮಾಡಿದರು ಈ ಸಿನಿಮಾಕ್ಕೆ ಸಾಹಿತಿಗಳ ಹತ್ತಿರ ಸಂಭಾಷಣೆ ಬರೀಬೇಕು ಎಂದು ತೀರ್ಮಾನವಾಯಿತು ಅದರಂತೆ ಬರಗೂರು ಅವರು ಸಂಭಾಷಣೆ ಬರೆದರು.

ಯಾವುದೇ ಸಿನಿಮಾ ಆದರೂ ವರ್ಧಣ್ಣ, ಅಣ್ಣಾವ್ರು, ನಿರ್ದೇಶಕರು, ಕಥೆಗಾರರು, ಸಹ ನಿರ್ದೇಶಕರು ಟೀಮ್ ಕುಳಿತುಕೊಂಡು ಪ್ರತಿ ಸೀನ್ ಓದಿಸಿ ತಪ್ಪಾಗಿದ್ದರೆ ಸರಿ ಪಡಿಸಿ ಶೂಟಿಂಗ್ ಟೈಮ್ ಫಿಕ್ಸ್ ಮಾಡುತ್ತಿದ್ದರು. ಜನುಮದ ಜೋಡಿ ಸಿನಿಮಾಕ್ಕೆ ಮೊದಲು ಫಿಕ್ಸ್ ಆಗಿದ್ದು ಹಂಸಲೇಖ ಅವರು. ಅವರು ಮ್ಯೂಸಿಕ್ ಕಂಪೋಸ್ ಗೆ ಬಂದು 2 ತಾಸು ಕೆಲಸ ಮಾಡಿದ ನಂತರ ಪಾರ್ವತಮ್ಮ ಅವರ ಹತ್ತಿರ ನಾನು ಸುಗ್ಗಿ ಎನ್ನುವ ಸಿನಿಮಾ ಮಾಡುತ್ತಿದ್ದೇನೆ ಅದು ಸಹ ಹೀಗೆ ಇದೆ ಎರಡನ್ನು ನಿಭಾಯಿಸುವುದು ನನಗೆ ಕಷ್ಟವಾಗುತ್ತದೆ ಎಂದರು ನಂತರ ರಾಜಕುಮಾರ ಅವರಿಗೆ ತಿಳಿಸಿದಾಗ ಅವರು ಹಂಸಲೇಖ ಅವರ ಹತ್ತಿರ ಸರಿ ನಿಮ್ಮ ಕೆಲಸ ಮುಗಿಸಿಕೊಳ್ಳಿ ಎಂದು ಹೇಳಿ ಕಳುಹಿಸುತ್ತಾರೆ.

ನಂತರ ಚರ್ಚೆ ಶುರುವಾಯಿತು ಸಿನಿಮಾ ಪೋಸ್ಟ್ ಪೋನ್ ಮಾಡುವುದು ಎಂದು ಆದರೆ ವರ್ಧಣ್ಣ ಅವರಿಗೆ ಪೋಸ್ಟ್ ಪೋನ್ ಮಾಡಲು ಮನಸ್ಸಿರಲಿಲ್ಲ. ಅಣ್ಣಾವ್ರು ಇದ್ದಕಿದ್ದ ಹಾಗೆ ಓ ಮಲ್ಲಿಗೆ ಬಾ ಮೆಲ್ಲಗೆ ಸದಾ ಸದಾ ಎನ್ನುತ್ತಾರೆ ಆಗ ಎಲ್ಲರೂ ರಾಜಕುಮಾರ್ ಅವರ ಮುಖ ನೋಡುತ್ತಾರೆ ಈ ಹಾಡನ್ನು ಮಾಡಿದವರು ಯಾರೆಂದು ಕೇಳಿದಾಗ ಉಳಿದವರು ಮನೋಹರ್ ಎಂದರು ಮನೋಹರ್ ಈ ಸಿನಿಮಾಕ್ಕೆ ಮ್ಯೂಸಿಕ್ ಕಂಪೋಸ್ ಮಾಡಬಹುದು ಎನ್ನುತ್ತಾರೆ. ಮನೋಹರ್ ಅವರಿಗೆ ತಿಳಿಸಿ ಅವರು ಒಪ್ಪಿ ಕೆಲಸ ಶುರು ಮಾಡಿದರು. ಈ ಸಿನಿಮಾದ ಹಾಡುಗಳು ಹಿಟ್ ಆಯಿತು. ಇದರಿಂದ ಮನೋಹರ್ ಫೇಮಸ್ ಆದರೂ.

Leave a Reply

Your email address will not be published. Required fields are marked *