ನಿದ್ರಾಹೀನತೆ ಸಮಸ್ಯೆ ಅನ್ನೋದು ಕೆಲವರಲ್ಲಿ ಇರುತ್ತದೆ ಈ ಸಮಸ್ಯೆ ಇದ್ರೆ ಸರಿಯಾಗಿ ನಿದ್ರೆ ಬರೋದಿಲ್ಲ ಹಾಗೂ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಇದರಿಂದ ಪರಿಹಾರ ಕಂಡುಕೊಳ್ಳುವ ಮಾರ್ಗ ಯಾವುದು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ.
ನಿದ್ರಾಹೀನತೆಯಿಂದ ನರಳುವವರು ನೆರೆಳೆ ಹಣ್ಣಿನ ಶರಬತ್ತಿನ ಜೊತೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ ಇದರಿಂದ ನಿದ್ರೆಯು ಬರುವುದು, ನಿದ್ರಾಹೀನತೆ ನಿವಾರಣೆಯಾಗುವುದು. ನೇರಳೆಹಣ್ಣು ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಹಣ್ಣಾಗಿದೆ.
ಇನ್ನು ಬಾಣಂತಿಯರಲ್ಲಿ ಹಾಲಿನ ಕೊರತೆ ಇದ್ದರೆ ಸೊಪ್ಪಿನ ಪಲ್ಯ ಅಥವಾ ಸಾರನ್ನು ಊಟದಲ್ಲಿ ಸೇವಿಸುವುದರಿಂದ ಹಾಲು ಉತ್ಪತ್ತಿಯಾಗಿ ಮಗುವಿಗೆ ಯಥೇಚ್ಛ ಹಾಲು ದೊರೆಯುವುದು. ಅಷ್ಟೇ ಅಲ್ಲದೆ ಮೂಸಂಬಿ ಹಣ್ಣು ವಿಟಮಿನ್ ಸಿ ಅಂಶವನ್ನು ಹೊಂದಿರುವುದರಿಂದ ಇದನ್ನು ಸೇವಿಸುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ ಸಿಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದ್ರೆ ಯಾವುದೇ ರೋಗಗಳು ಕಾಯಿಲೆ ಬೇಗನೆ ಅಂಟೋದಿಲ್ಲ ದೇಹಕ್ಕೆ ಸಂರಕ್ಷಿಸುತ್ತವೆ.
ಬಿಸಿ ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅರಿಶಿನದ ಪುಡಿ ಮತ್ತು ಕಾಲು ಮೆಣಸಿನ ಪುಡಿಯನ್ನು ಹಾಕಿ ಕದಡಿ ಕುಡಿಯುವುದರಿಂದ ಕೆಮ್ಮು, ನೆಗಡಿ ಮತ್ತು ಗಂಟಲು ನೋವು ನಿವಾರಣೆಯಾಗುವುದು. ಇನ್ನು ಒಣದ್ರಾಕ್ಷಿಯನ್ನು ಕ್ರಮವಾಗಿ ಸೇವಿಸುತ್ತಿದ್ದರೆ ಶುದ್ಧ ರಕ್ತ ವೃದ್ಧಿಯಾಗುವದು ಹಾಗೂ ಮೂಳೆಗಳು ಶಕ್ತಿಯುತವಾಗುವವು