ಥೈರಾಯ್ಡ್ ಸಮಸ್ಯೆ ಯು ಇಂದಿನ ದಿನಗಳಲ್ಲಿ ಸಾಮಾನ್ಯವಾದ ಸಮಸ್ಯೆಯಾಗಿದೆ. ಕುತ್ತಿಗೆಯ ಕೆಳಭಾಗದಲ್ಲಿರುವಂತಹ ಪೀಟ್ಯೂಟರಿ ಗ್ರಂಥಿಯು ದೇಹದ ಚಾಯಪಚಯ ಕ್ರಿಯೆ ನಿಯಂತ್ರಿಸುವ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡುವ ಕೆಲಸ ಮಾಡುತ್ತದೆ.
ಇದು ಸಣ್ಣ ಚಿಟ್ಟೆ ಗಾತ್ರದ ಗ್ರಂಥಿ ಯಾಗಿದೆ. ಇದು ಗ್ರಂಥಿಗಳ ಸಂಪರ್ಕದ ಒಂದು ಭಾಗವಾಗಿದ್ದು,ಇದನ್ನು ಎಂಡೊಕ್ರೈನ್ ವ್ಯವಸ್ಥೆ ಎಂದೂ ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ ಗ್ರಂಥಿಯಲ್ಲಿ ಯಾವುದೇ ರೀತಿಯ ಸಮಸ್ಯೆಯಿದೆಯಾ ಎಂದು ತಿಳಿಯಲು ರಕ್ತಪರೀಕ್ಷೆ ಮೂಲಕ ಥೈರಾಯ್ಡ್ ಹಾರ್ಮೋನುಗಳನ್ನು ಪರೀಕ್ಷೆ ಮಾಡಲಾಗುತ್ತದೆ.
ಹೈಪೋಥೈರಾಯ್ಡಿಸಮ್ ಲಕ್ಷಣಗಳೇನು?
ಕೈಗಳು ತಣ್ಣಗಾದರೆ ಆಗ ಸರಿಯಾಗಿ ರಕ್ತ ಪರಿಚಲನೆ ಯಾಗುತ್ತಿಲ್ಲ ಎನ್ನುವುದರ ಸೂಚನೆಯಾಗಿದೆ. ಹೈಪೋಥೈರಾಯ್ಡಿಸಮ್ ವೇಳೆ ಥೈರಾಡ್ ಗ್ರಂಥಿಗಳ ಚಟುವಟಿಕೆಯು ತುಂಬಾ ಕುಗ್ಗಿರುವುದು.
ಹೈಪೋಥೈರಾಯ್ಡಿಸಮ್ ನಿಂದಾಗಿ ಚರ್ಮದ ಮೇಲೆ ನೆರಿಗೆ ಹಾಗೂ ಗೆರೆಗಳು ಕಾಣಿಸಿಕೊಳ್ಳಬಹುದು. ಅದರಲ್ಲೂ ಇದು ಕೈಗಳಲ್ಲಿ ಹೆಚ್ಚಾಗಿ ಕಾಣಿಸುವುದು.ಇನ್ನು ಥೈರಾಯ್ಡ್ ಗ್ರಂಥಿಗಳು ಕಾರ್ಯ ನಿರ್ವಹಿಸದೆ ಇರುವ ಕಾರಣದಿಂದಾಗಿ ನಿಮ್ಮ ವಯಸ್ಸು ಹೆಚ್ಚಾದಂತೆ ಕಾಣುವುದು ಮತ್ತು ನೆರಿಗೆ ಕಂಡುಬರುವುದು.
ಥೈರಾಯ್ಡ್ ಹಾರ್ಮೋನುಗಳು ಕುಂದಿರುವ ಕಾರಣದಿಂದಾಗಿ ಬಣ್ಣ ಮಾಸುವುದು, ಚರ್ಮವು ಕೆಂಪು ಹಾಗೂ ಪದರ ಎದ್ದು ಬಂದಂತೆ ಕಾಣಬಹುದು. ಕೆಲವೊಂದು ಸಲ ಇದು ತುಂಬಾ ಕಿರಿಕಿರಿ ಮತ್ತು ತುರಿಕೆ ಉಂಟು ಮಾಡಬಹುದಾಗಿದೆ. ಉಗುರು ಮತ್ತು ಉಗುರಿನ ಹಾಸಿಗೆ ಹಳದಿಯಾಗುವುದು ಇದರ ಪ್ರಮುಖ ಲಕ್ಷಣ ವಾಗಿರುತ್ತದೆ. ಈ ಲಕ್ಷಣಗಳಿದ್ದರೆ ಥೈರಾಯ್ಡ್ ಸಮಸ್ಯೆ ಇದೆ ಎಂದರ್ಥ . ಇದಕ್ಕೆ ಬೇಗನೇ ವೈದ್ಯರನ್ನ ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಸೂಕ್ತ.