ನಮ್ಮ ದಿನ ನಿತ್ಯದ ಆಹಾರ ಶೈಲಿ ನಮ್ಮ ಆರೋಗ್ಯವನ್ನು ವೃದ್ಧಿಸುವಂತ ಕೆಲಸ ಮಾಡುತ್ತದೆ, ಹಾಗೆಯೆ ಸೇವಿಸುವಂತ ಆಹಾರದಲ್ಲಿ ಸ್ವಲ್ಪ ಏನಾದರು ವ್ಯತ್ಯಾಸ ಕಂಡು ಬಂದರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಆದ್ದರಿಂದ ಅಡುಗೆ ಮನೆ ಯಾವಾಗಲು ಸ್ವಚ್ಛವಾಗಿರಬೇಕು ಹಾಗೂ ನಾವುಗಳು ಸೇವನೆ ಮಾಡುವಂತ ಆಹಾರ ಆರೋಗ್ಯದಾಯಕವಾಗಿರಬೇಕು.
ವಿಷ್ಯಕ್ಕೆ ಬರೋಣ ಅಜೀರ್ಣತೆ ಸಮಸ್ಯೆಗೆ ಪರಿಹಾರ ಮಾರ್ಗವನ್ನು ತಿಳಿಯುವುದರ ಜೊತೆಗೆ ಇನ್ನು ಕೆಲವಷ್ಟು ಸಮಸ್ಯೆಗಳಿಗೆ ಈ ಮೂಲಕ ಪರಿಹಾರ ಮಾರ್ಗಗಳನ್ನು ನೋಡೋಣ, ಅಜೀರ್ಣತೆ ಸಮಸ್ಯೆ ನಿಮ್ಮನ್ನು ಕಾಡಬಾರದು ಅನ್ನೋದಾದರೆ, ಸಿಪ್ಪೆ ಸಹಿತ ಏಲಕ್ಕಿ ಕಲಿತ ಬಾಳೆಹಣ್ಣು ಪ್ರತಿದಿನ ಸೇವಿಸವುದರಿಂದ ಅಂದರೆ ರಾತ್ರಿ ಮಲಗುವ ಮುಂಚೆ ಇದನ್ನು ಸೇವಿಸುವುದರಿಂದ ನಿಮಗೆ ಅಜೀರ್ಣತೆ ಕಾಡೋದಿಲ್ಲ.
ದೇಹಕ್ಕೆ ರಕತ ವೃದ್ಧಿಯಾಗಲು ಹಾಗೂ ನರದೌರ್ಬಲ್ಯ ಸಮಸ್ಯೆಗೆ ಮನೆಯಲ್ಲೇ ಮದ್ದು, ಹೌದು ಬೀಜ ರಹಿತ ಹಸಿ ದ್ರಾಕ್ಷಿಯಾ ರಸ ಒಂದು ಲೋಟ, ಜೇನುತುಪ್ಪ, ಒಂದು ಚಮಚ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ, ಆಗ ನರ ದೌರ್ಬಲ್ಯ ನಿವಾರಣೆಯಾಗಿ ದೇಹಕ್ಕೆ ರಕ್ತ ವೃದ್ಧಿಯಾಗುವುದು.
ಇನ್ನು ತಿಂಗಳಿಗೆ ಒಂದು ಬಾರಿಯಾದರೂ ಮೈಗೆ ಎಣ್ಣೆಯನ್ನು ಒತ್ತಿಸ್ನಾನ ಮಾಡುವುದರಿಂದ ಅನೇಕ ಮಾರಣಾಂತಿಕ ಕಾಯಿಲೆಗಳಿಂದ ದೂರ ಇರಬಹುದು ಎಂದು ಪ್ರಕೃತಿ ವೈದ್ಯರು ಹೇಳುತ್ತಾರೆ. ಅಷ್ಟೇ ಅಲ್ಲದೆ ಹಸಿ ತರಕಾರಿ ಸೊಪ್ಪುಗಳನ್ನು ತಿನ್ನುವುದರಿಂದ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚುವುದು.