ಬೆಲ್ಲ ಜೀರಿಗೆ ಕಷಾಯ ಕುಡಿಯೋದ್ರಿಂದ ಈ 5 ಕಾಯಿಲೆ ನಿಮ್ಮ ಹತ್ತಿರಕ್ಕೆ ಸುಳಿಯೋಲ್ಲ

0 244

ಸದೃಢವಾದ ಮತ್ತು ಆರೋಗ್ಯಕರ ದೇಹವನ್ನು ನಾವೆಲ್ಲರೂ ಬಯಸುತ್ತೇವೆ ಮತ್ತು ಬಹಳಷ್ಟು ವಿಧಾನಗಳನ್ನು ಪ್ರಯತ್ನಿಸುತ್ತೇವೆ. ಆರೋಗ್ಯ ವೃದ್ದಿಸುವ ಎಷ್ಟೋ ವಿಧಾನಗಳು ಪ್ರಚಾರದ ಕೊರತೆಯಿಂದಾಗಿ ಅರಿವಿಗೆ ಬಾರದೇ ಹೋಗುತ್ತವೆ.ಇದರಲ್ಲಿ ಒಂದು ವಿಧಾನ ಜೀರಿಗೆ ನೆನೆಸಿಟ್ಟ ನೀರನ್ನು ಮುಂಜಾನೆ ಕುಡಿಯುವುದು ದೇಹಕ್ಕೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. ಇದರ ಜೊತೆಗೆ ಕೊಂಚ ಬೆಲ್ಲ ಸೇರಿಸಿದರೆ ಇದರ ಕ್ಷಮತೆ ಇನ್ನಷ್ಟು ಹೆಚ್ಚುತ್ತದೆ.

ಹಿರಿಯರ ಅನುಭವದ ಪ್ರಕಾರ ಈ ವಿಧಾನ ಅತ್ಯಂತ ಆರೋಗ್ಯಕರ ಅಭ್ಯಾಸವಾಗಿದೆ. ಮುಖ್ಯವಾಗಿ ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಬೆಲ್ಲ ಮತ್ತು ಜೀರಿಗೆಯನ್ನು ಪ್ರತ್ಯೇಕವಾಗಿ ಪರಿಗಣಿಸಿದಾಗ ಇವುಗಳಲ್ಲಿರುವ ಪ್ರಯೋಜನಗಳನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಈ ಲೇಖನದ ಮೂಲಕ ನಾವು ಜೀರಿಗೆ ಮತ್ತು ಬೆಲ್ಲವನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಆರೋಗ್ಯಕರ ಲಾಭಗಳನ್ನು ಪಡೆಯಬಹುದು ಎನ್ನುವುದನ್ನು ನೋಡೋಣ.

ಪ್ರತೀ ನಿತ್ಯದ ನಮ್ಮ ಅಡುಗೆ, ಆಹಾರದಲ್ಲಿ ನಾವು ಜೀರಿಗೆಯ ಬಳಕೆ ಮಾಡಿಯೇ ಮಾಡುತ್ತೇವೆ. ಇದಕ್ಕೆ ಕಾರಣ ಅದರ ಘಮ ಮತ್ತು ಜೀರಿಗೆಯ ಬಳಕೆಯಿಂದ ಬದಲಾಗುವ ಆಹಾರದ ರುಚಿ. ಅದೇ ರೀತಿ ಬೆಲ್ಲವನ್ನೂ ಸಹ ಅಡುಗೆಯಲ್ಲಿ ಹಾಗೂ ಸಾಕಷ್ಟು ಸಿಹಿ ತಿನಿಸುಗಳ ತಯಾರಿಕೆಯಲ್ಲಿ ನಾವು ಬಳಕೆ ಮಾಡುತ್ತೇವೆ. ಹಾಗಿದ್ದರೆ ಇವೆರಡನ್ನೂ ಸೇವನೆ ಮಾಡುವುದರಿಂದ ನಮಗೆ ಏನೆಲ್ಲಾ ಲಾಭಗಳು ಉಂಟಾಗುತ್ತವೆ ಎಂದು ನೋಡುವುದಾದರೆ, ಬೆಲ್ಲ ಸೇವನೆ ಮಾಡುವುದರಿಂದ ಶೀತ ಕೆಮ್ಮು ಮುಂತಾದವುಗಳನ್ನು ತಡೆಯಬಹುದು.

ಹಾಗೇ ಅದೇ ರೀತಿ ಜೀರಿಗೆ ಕೂಡಾ ಅತಿಯಾದ ತೂಕ ಇರುವವರಿಗೆ ತೂಕ ಕಳೆದುಕೊಳ್ಳಲು ಸಹಾಯಕಾರಿ. ಬೆಲ್ಲ ಮತ್ತು ಜೀರಿಗೆ ಇವರೆದೂ ಪೌಷ್ಠಿಕ ಸತ್ವಗಳನ್ನು ಒಳಗೊಂಡ ಗುಣಗಳಿಂದ ಕೂಡಿದೆ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೆಲ್ಲ ಮತ್ತು ಜೀರಿಗೆ ನೀರನ್ನು ಕುಡಿಯುವುದರಿಂದ ಅನೇಕ ರೋಗಗಳಿಂದ ನಮ್ಮ ದೇಹವನ್ನು ರಕ್ಷಣೆ ಮಾಡಿಕೊಳ್ಳಬಹುದು. ಹಾಗೂ ಅನೇಕ ಸೋಂಕುಗಳಿಂದ ಕೂಡಾ ಪಾರಾಗಬಹುದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇವೆರಡೂ ಬಹಳ ಉತ್ತಮ. ಜೀರಿಗೆ ಮತ್ತು ಬೆಲ್ಲ ಇವೆರಡೂ ಹೊಟ್ಟೆಯ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾದ ಮಲಬದ್ಧತೆ, ಗ್ಯಾಸ್ , ಅಜೀರ್ಣತೆ, ಎದೆಯುರಿ ಮತ್ತು ಹೊಟ್ಟೆಯುರಿ ಅಂತಹ ಸಮಸ್ಯೆಗಳಿಗೆ ಬೆಲ್ಲ ಮತ್ತು ಜೀರಿಗೆ ನೀರನ್ನು ಕುಡಿಯುವುದರಿಂದ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ತಲೆ ನೋವಿನ ಸಮಸ್ಯೆಗೂ ಸಹ ಈ ಬೆಲ್ಲ ಮತ್ತು ಜೀರಿಗೆ ನೀರನ್ನು ಕುಡಿಯುವುದರಿಂದ ಬಹಳ ಉತ್ತಮ ಎನ್ನಬಹುದು. ಮೈಗರೆನ್ ಅಥವಾ ಧೀರ್ಘ ಕಾಲ ಕಾಡುವ ತಲೆನೋವು ಇದ್ದರೆ ಜೀರಿಗೆ ಮತ್ತು ಬೆಲ್ಲದ ನೀರನ್ನು ಕುಡಿಯುವುದರಿಂದ ಬಹಳ ಬೇಗ ಗುಣವಾಗಬಹುದು. ರಕ್ತಹೀನತೆಯ ಸಮಸ್ಯೆ ಇರುವವರು ಸಹ ಬೆಲ್ಲವನ್ನೂ ಸೇವಿಸುವುದು ಬಹಳ ಪ್ರಯೋಜನಕಾರಿ. ಬಹಳ ಹಿಂದಿನ ಕಾಲದಿಂದಲೂ ಸಹ ನಮ್ಮ ಹಿರಿಯರು ಈ ವಿಧಾನವನ್ನು ಅನುಸರಿಸುತ್ತಿದ್ದರು. ಹಾಗಾಗಿ ರಕ್ತ ಹೀನತೆಯ ಸಮಸ್ಯೆ ಇರುವವರು ಬೆಲ್ಲ ಮತ್ತು ಜೀರಿಗೆ ನೀರನ್ನು ಕುಡಿಯುವುದು ಉತ್ತಮ.

ಇದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಕೂಡಾ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಇವೆರಡರ ಮಿಶ್ರಣ ಬೆನ್ನುನೋವಿಗೆ ಸಹ ಉತ್ತಮವಾದದ್ದು. ದೀರ್ಘ ಕಾಲದ ಬೆನ್ನು ನೋವಿಗೆ ಇದು ಪರಿಣಾಮಕಾರಿ ಎನ್ನಬಹುದು. ಇಷ್ಟೆಲ್ಲಾ ಲಾಭ ಇರುವ ಈ ಜೀರಿಗೆ ನೀರನ್ನು ತಯಾರಿಸುವ ವಿಧಾನ ಹೇಗೆ ಎಂದು ನೋಡುವುದಾದರೆ, ಒಂದು ಪಾತ್ರೆಗೆ ಎರಡು ಲೋಟದಷ್ಟು ನೀರನ್ನು ಹಾಕಿ ಅದಕ್ಕೆ ಒಂದು ಚಮಚ ಬೆಲ್ಲ ಹಾಗೂ ಒಂದು ಚಮಚ ಜೀರಿಗೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ ನಂತರ ಶೋಧಿಸಿ ಕುಡಿಯಬೇಕು. ಆದರೂ ಒಬ್ಬೊಬ್ಬರ ದೇಹ ಪ್ರಕೃತಿ ಭಿನ್ನವಾಗಿ ಇರುವ ಕಾರಣ ವೈದ್ಯರ ಸಲಹೆ ಪಡೆದು ಕುಡಿಯುವುದು ಉತ್ತಮ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave A Reply

Your email address will not be published.