Ultimate magazine theme for WordPress.

ತಲೆಕೂದಲು ಉದುರುವ ಸಮಸ್ಯೆ ಇಂದೇ ನಿಲ್ಲಲು ಈ ಗಿಡದ ಎಲೆ ಸಾಕು ನೋಡಿ ಮನೆಮದ್ದು

0 0

ಇತ್ತೀಚೆಗೆ ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡ ವಯಸ್ಸಿನವರೆಗೂ ಕೂಡ ಕೂದಲು ಉದರುತ್ತಿವವರ ಸಮಸ್ಯೆ ಹೇಳತೀರದು . ಕೆಲವರಿಗಂತೂ ತುಂಬಾ ಚಿಕ್ಕ ಪ್ರಾಯದಲ್ಲಿಯೇ ಬಕ್ಕ ತಲೆಯ ಸಮಸ್ಯೆ ಕಂಡು ಬರುತ್ತದೆ. ಕೂದಲು ಉದುರುವಿಕೆಗೆ ಹಲವಾರು ಕಾರಣಗಳಿರಬಹುದು . ಕೂದಲು ಉದುರುವಿಕೆಗೆ ಡಯಾಬಿಟಿಸ್, ಪೌಷ್ಟಿಕಾಂಶದ ಕೊರತೆ, ವಿಟಮಿನ್ ಡಿ ಕೊರತೆ ಅಥವಾ ಹೆರಿಡಿಟರಿ ಕೂಡ ಕಾರಣ ಆಗಿರಬಹುದು.

ನೀವು ಸಾಕಷ್ಟು ಜನರು ಈ ಕೂದಲು ಉದುರುವ ಸಮಸ್ಯೆಯಿಂದ ಬಳಲುತಿದ್ದೀರಾ ಹಲವಾರು ಎಣ್ಣೆ ಅಥವಾ ಶಾಂಪೂ ಬಳಸಿಯೂ ಸಹ ಕೂದಲ ಉದುರುವಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಿದ್ದಾಗ ಕೂದಲು ಉದುರುವ ಸಮಸ್ಯೆಗೆ ಹಾಗೂ ಕೂದಲ ಬೆಳವಣಿಗೆಗೆ ನಾವು ಈ ಲೇಖನದ ಮೂಲಕ ಒಂದು ಹೇರ್ ಪ್ಯಾಕ್ ಹೇಗೆ ತಯಾರಿಸಿಕೊಳ್ಳುವುದು ಎನ್ನುವುದರ ಬಗ್ಗೆ ನೋಡೋಣ.

ನಮ್ಮ ಚರ್ಮದಂತೆಯೇ ಕೂದಲಿಗೆ ಸರಿಯಾದ ಕಾಳಜಿ ಮತ್ತು ಪೋಷಣೆಯ ಅಗತ್ಯವಿರುತ್ತದೆ. ಹಾಗೆಂದು ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಸಲೂನ್‌ ಗೆ ಭೇಟಿ ನೀಡುವುದು ಮತ್ತು ಹಣವನ್ನು ಖರ್ಚು ಮಾಡುವುದಲ್ಲ. ಕೂದಲಿನ ಬೆಳವಣಿಗೆಗೆ ನೆತ್ತಿ ಮತ್ತು ಕೂದಲಿಗೆ ನೈಸರ್ಗಿಕ ಚಿಕಿತ್ಸೆ ಅವಶ್ಯಕ. ಇದನ್ನು ಮನೆಯಲ್ಲಿ ಮಾಡಿಕೊಳ್ಳುವುದರಿಂದ ನಿಮಗೆ ಸ್ವಲ್ಪ ಸಮಯ ಮತ್ತು ಹಣ ಎರಡೂ ಉಳಿಯುತ್ತದೆ. ಕೂದಲು ಉದುರುವುದು ನಿರಂತರ ಸಮಸ್ಯೆಯಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗುತ್ತಿದೆ. ಇದಲ್ಲದೆ, ರಾಸಾಯನಿಕದಿಂದ ತಯಾರಿಸಿದ ಹೇರ್ ಕಲರ್ ಮತ್ತು ಬಣ್ಣಗಳ ಬಳಕೆಯು ಸಹ ನಮ್ಮ ಕೂದಲಿಗೆ ಹಾನಿಯುಂಟು ಮಾಡುತ್ತದೆ.

ಕೂದಲು ಉದುರುವಿಕೆ ನಿರಂತರವಾಗಿ ಹೆಚ್ಚುವುದರಿಂದ ನಿಮ್ಮ ಕೂದಲಿನ ಬೆಳವಣಿಗೆಯ ಮೇಲೆ ಆಳವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಕೂದಲು ಉದುರುತ್ತಿದ್ದರೆ ನೀವು ಯೋಗ ಮಾಡಬಹುದು, ಸಾಕಷ್ಟು ನೀರು ಕುಡಿಯಬೇಕು, ವ್ಯಾಯಾಮ ಮಾಡಬೇಕು. ಅಷ್ಟೇ ಅಲ್ಲ, ಆರೋಗ್ಯಕರ ಮತ್ತು ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಕೂದಲು ನಷ್ಟ ಮತ್ತು ಕೂದಲು ಉದುರುವುದು ವಿಟಮಿನ್ ಕೊರತೆಯ ಸಾಮಾನ್ಯ ಲಕ್ಷಣಗಳು. 50 ವರ್ಷ ದಾಟುವ ಮೊದಲೇ ಬಹಳಷ್ಟು ಜನರು ಕೂದಲು ಉದುರುವ ಸಮಸ್ಯೆಯನ್ನು ಅನುಭವಿಸುತ್ತಾರೆ. ಬಯೋಟಿನ್ ಮತ್ತು ಕಬ್ಬಿಣವು ತುಂಬಾ ಕಡಿಮೆಯಾದಾಗ ಕೂದಲು ಉದುರುವಿಕೆಯ ಹಿಂದಿನ ಕಾರಣಗಳಾಗಿರಬಹುದು. ಆದ್ದರಿಂದ ನೀವು ಮಾಂಸ, ಮೀನು, ಮೊಟ್ಟೆ, ದ್ವಿದಳ ಧಾನ್ಯಗಳು, ಹಸಿರು ಎಲೆ ತರಕಾರಿಗಳು, ಬೀಜಗಳು, ನಟ್ಸ್ ಮತ್ತು ಧಾನ್ಯಗಳನ್ನು ಸೇವಿಸಬೇಕು. ಆಹಾರದ ಹೊರತಾಗಿ, ಕೂದಲಿನ ಬೆಳವಣಿಗೆಗೆ ಮನೆಯಲ್ಲಿರುವ ಪರಿಹಾರಗಳನ್ನು ನೋಡೋಣ.

ಆಯುರ್ವೇದದಲ್ಲಿ ಹೇಳುವ ಹಾಗೆ ಕೂದಲು ಉದುರುವಿಕೆಗೆ ಮುಖ್ಯ ಕಾರಣ ಎಂದರೆ ಪಿತ್ತ ಹಾಗು ಕಫ ಇವು ಮುಖ್ಯ ಕಾರಣ ಆಗಿರುತ್ತವೆ. ಅದರಲ್ಲೂ ಪಿತ್ತ ದಿಂದಲೇ ಹೆಚ್ಚಾಗಿ ಕೂದಲು ಉದುರುತ್ತದೆ ಎನ್ನುತ್ತಾರೆ. ಇದನ್ನು ತಡೆಗಟ್ಟಲು ಈ ಮನೆ ಮದ್ದನ್ನು ಪಾಲನೆ ಮಾಡಿ. ರಾತ್ರಿ ಮಲಗುವ ಮುನ್ನ ಎಂಟರಿಂದ ಹತ್ತು ಕಪ್ಪು ದ್ರಾಕ್ಷಿ ಯನ್ನು ನೀರಿನಲ್ಲಿ ನೆನೆ ಹಾಕಬೇಕು. ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಚೆಲ್ಲಿ ಖಾಲಿ ಹೊಟ್ಟೆಯಲ್ಲಿ ಈ ನೆನೆ ಹಾಕಿದ ದ್ರಾಕ್ಷಿಯನ್ನು ತಿನ್ನಬೇಕು.

ಇದನ್ನು ಆಗಾಗ ಮಾಡುವುದರಿಂದ ಪಿತ್ತ ನಿಯಂತ್ರಣದಲ್ಲಿ ಇರಲು ಸಹಾಯವಾಗಿ ಕೂದಲು ಉದುರುವಿಕೆ ಕಡಿಮೆ ಮಾಡಲು ನೆರವಾಗುತ್ತೆ. ಆಯುರ್ವೇದದಲ್ಲಿ ಆಮಲಕ ರಸಾಯನ ಎಂಬ ಹರ್ಬಲ್ ಜಾಮ್ ಲಭ್ಯವಿದೆ. ಈ ರಸಾಯನವನ್ನು ನೆಲ್ಲಿಕಾಯಿ ಇಂದ ಮಾಡಲಾಗುತ್ತೆ ಇದು ಸಹ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೇ. ಇದನ್ನು ಪ್ರತಿ ದಿನ ಎರಡರಿಂದ ಮೂರು ಚಮಚ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಕೂದಲು ಉದುರುವಿಕೆ ಸಮಸ್ಯೆಯನ್ನು ದೂರ ಮಾಡುವುದಲ್ಲದೆ ಚರ್ಮದ ಸಮಸ್ಯೆಯನ್ನು ಸಹ ಕಡಿಮೆ ಮಾಡಬಹುದು.

ಇನ್ನೂ ಕೂದಲು ಉದುರುವ ಸಮಸ್ಯೆಗೆ ಹೇರ್ ಪ್ಯಾಕ್ ಏನೂ? ಹಾಗೂ ಅದರ ತಯಾರಿಕಾ ವಿಧಾನ ಹೇಗೆ? ಎನ್ನುವುದನ್ನು ನೋಡುವುದಾದರೆ, ಇದಕ್ಕೆ ಬೇಕಿರುವುದು ಕೇವಲ ಎರಡು ಪದಾರ್ಥಗಳು. ಬ್ರುಂಗರಾಜದ ಪುಡಿ ಅಥವಾ ಅದರ ಹಸಿ ಸಸ್ಯವಾದರೂ ಎರಡರಲ್ಲಿ ಯಾವುದಾದರೂ ತೆಗೆದುಕೊಳ್ಳಬೇಕು. ಹಾಗೂ ಮೆಂತೇಕಾಳಿನ ಪುಡಿಯನ್ನು ಸಹ ತೆಗೆದುಕೊಳ್ಳಬೇಕು. ಇವೆರಡನ್ನೂ ಸಮ ಪ್ರಮಾಣದಲ್ಲಿ ಮಿಶ್ರಣಮಾಡಿ ನೀರಿಗೆ ಬೆರೆಸಿ ಆ ಮಿಶ್ರಣವನ್ನು ತಲೆಗೆ ಸರಿಯಾಗಿ ಹೆಡ್ ಪ್ಯಾಕ್ ಅಥವಾ ಹೇರ್ ಪ್ಯಾಕ್ ಆಗಿ ಲೇಪಿಸಿಕೊಳ್ಳಬೇಕು. ಇದನ್ನು ಪ್ರತೀ ನಿತ್ಯ ಲೇಪಿಸಿಕೊಂಡು ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆಗಳ ಕಾಲ ಹಾಗೆಯೇ ಬಿಡಬೇಕು. ಹೀಗೆ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave A Reply

Your email address will not be published.