ಕೃಷಿ ಕೆಲಸಕ್ಕೆ ಕೈ ಹಾಕಿರುವ ನಟಿ ಮಣಿಯರು

0 0

indian film actor: ವ್ಯವಸಾಯ ನಮ್ಮ ದೇಶದ ಬೆನ್ನೆಲುಬು. ನಮ್ಮ ದೇಶದ ಜನತೆಗಷ್ಟೆ ಅಲ್ಲದೇ ಹೊರ ದೇಶಕ್ಕೂ ಆಹಾರ ಒದಗಿಸುತ್ತದೆ ನಮ್ಮ ವ್ಯವಸಾಯ. ವ್ಯವಸಾಯದ ಪರಂಪರೆ ತುಂಬಾ ಹಳೆಯದು. ಈಗ ಕೆಲವು ನಟಿಯರು ತಮ್ಮ ಹೊಲಗಳಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ಲಭ್ಯವಾಗುತ್ತಿದೆ. ಹಾಗಾದರೆ ಯಾರು ಆ ನಟಿಯರು ಎಂಬುದನ್ನು ಈ ಮಾಹಿತಿಯಿಂದ ತಿಳಿಯೋಣ.

ಈಗ ಕರೋನಾ ವೈರಸ್ ವಿಚಾರವಾಗಿ ಲಾಕ್ಡೌನ್ ಆದ ಸಮಯದಲ್ಲಿ ದೊಡ್ಡ ನಟಿ ಎನ್ನುವ ಪ್ರತಿಷ್ಠೆ ಬದಿಗಿರಿಸಿ ಭೂಮಿಯ ಮಡಿಲಿಗೆ ಇಳಿದಿದ್ದಾರೆ. ಅವರು ಯಾರೆಂದರೆ ಬಾಲಿವುಡ್ ನಟಿ ಯಾಮಿ ಗೌತಮಿ, ಇವರು ಬಾಲಿವುಡ್‌ನ ಸ್ಟಾರ್ ನಟಿ. ಹಿಮಾಚಲ ಪ್ರದೇಶಕ್ಕೆ ಹೋಗಿರುವ ನಟಿ ಯಾಮಿ ಗೌತಮಿ ಆರ್ಗ್ಯಾನಿಕ್ ಫಾರ್ಮಿಂಗ್ ತಮ್ಮ ಜಮೀನಿನಲ್ಲಿ ಮಾಡಲು ತಯಾರಾಗಿದ್ದಾರೆ. ರೀಸರ್ಚ್ ಮಾಡಿ ವ್ಯವಸ್ಥಿತ ವ್ಯವಸಾಯಕ್ಕೆ ಮುಂದಾಗಿದ್ದಾರೆ.

ಕನ್ನಡಿಗರ ನಿದ್ದೆಗೆಡಿಸಿದ ನಟಿ ಜೂಹಿ ಚಾವ್ಲಾ. ಹತ್ತಾರು ವರ್ಷಗಳು ಬಾಲಿವುಡ್ ನಲ್ಲಿ ಮಿಂಚಿ ಹೆಸರುವಾಸಿಯಾಗಿದ್ದ ನಟಿ. ತಮ್ಮದೆ ಜಮೀನಿನಲ್ಲಿ ಬೆಳೆ ಬೆಳೆಯಬೇಕೆಂದು ಕೃಷಿ ಜಮೀನು ಖರೀದಿಸಿ, ಅದರಲ್ಲಿ ವಿವಿಧ ತಳಿಗಳ ಬೆಳೆ ಬೆಳೆಯಲು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಸಂಪದಾ ಕುಲಕರ್ಣಿ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ ಜೊತೆಗೆ ಹೆಸರು ಗಳಿಸಿದ್ದಾರೆ. ಈ ನಟಿ ಹಳ್ಳಿಯಲ್ಲಿ ಇರುವ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಾ, ರೈತರಿಗೂ ಕೆಲಸ ನೀಡುತ್ತಿದ್ದಾರೆ.

ನಟ ಅರುಣ್ ಪಾಂಡ್ಯನ್ ಕನ್ನಡದ ಖ್ಯಾತ ನಟ. ಇವರ ಮಗಳು ಕೀರ್ತಿ ಪಾಂಡ್ಯನ್ ಕೂಡ ಒಬ್ಬರು ನಟಿಯಾಗಿ ಬೆಳೆಯುತ್ತಿದ್ದಾರೆ. ಕೀರ್ತಿ ಪಾಂಡ್ಯನ್ ಅವರು ಟ್ರಾಕ್ಟರ್ ಹತ್ತಿ ಉಳುಮೆ ಮಾಡುವುದರಿಂದ ಹಿಡಿದು, ಕೆಸರಲ್ಲಿ ಇಳಿದು ಪೈರು ನಾಟಿ ಮಾಡುತ್ತಿದ್ದಾರೆ‌. ಮಾಳವೀಕ ಗಾಯಕ್ವಾಡ್ ಮೊದಲ ಚಿತ್ರದಲ್ಲೆ ಉತ್ತಮ ಹೆಸರು ಪಡೆದವರು. ಈ ನಟಿ ತಮ್ಮ ಊರಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಭೂಮಿ ಶೆಟ್ಟಿ ಯವರು ಬಿಗ್ ಬಾಸ್ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿದವರು. ಇವರು ಲಾಕ್ಡೌನ್ ಸಮಯದಲ್ಲಿ ಊರಿಗೆ ಹೋಗಿದ್ದಾರೆ. ಅಲ್ಲಿ ಕಠಿಣ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಮಳೆಯಾಳಂನ ನಟಿ ಸುರಭಿ ಲಕ್ಷ್ಮಿ ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಇವರು ಕೂಡ ಈಗ ತಮ್ಮದೆ ಆದ ತೋಟದ ಕೆಲಸದಲ್ಲಿ ನಿರತರಾಗಿದ್ದಾರೆ. ಉತ್ತಮ ಅಡಿಕೆ ಬೇಳೆ ತೆಗೆಯುವ ಸಲುವಾಗಿ ತೋಟದ ಸ್ವಚ್ಛತೆಗೆ ಮುಂದಾಗಿದ್ದಾರೆ.

ಹೆಸರು ಪಡೆದ ಕಾರಣದಿಂದ, ಎಸಿ ರೂಮ್ ನಲ್ಲಿ, ಬೆಚ್ಚಗೆ ಹೊದ್ದು ಮಲಗದೆ ಭೂಮಿ ತಾಯಿಯ ಒಡನಾಟಕ್ಕೆ ಮುಂದಾದ ಈ ನಟಿಯರ ಗುಣ ತುಂಬಾ ಒಳ್ಳೆಯದು. ವ್ಯವಸಾಯವನ್ನು ಅಲ್ಲಗಳೆಯುವ ಕೆಲವು ವ್ಯಕ್ತಿಗಳಿಗೆ ಉತ್ತಮ ಮಾದರಿಯಾಗಿದ್ದಾರೆ.

Leave A Reply

Your email address will not be published.