ಇನ್ನೇನು ಎಲೆಕ್ಷನ್ ಬರುವ ಸಮಯ ನಿಮ್ಮ ವೋಟರ್ ID ಹಾಳಾಗಿದ್ದರೆ ಅಥವಾ ಕಳೆದು ಹೋಗಿದ್ದರೆ ಇಲ್ಲಿದೆ ಹೊಸ ವೋಟರ್ ID ಪಡೆಯುವ ಸುಲಭ ವಿಧಾನ

Recent Story

ಭಾರತದ ಪ್ರಮುಖ ದಾಖಲೆಗಳಲ್ಲಿ ವೋಟರ್ ಐಡಿ ಕಾರ್ಡ್ (Voter ID) ಒಂದು. ಇದು ವಿಳಾಸದ ಪುರಾವೆಯಾಗಿ ಒಂದು ಪ್ರಮುಖ ID ಆಗಿದೆ. ಆದರೆ ಅನೇಕ ಬಾರಿ ನಾವು ಮತದಾರರ ಗುರುತಿನ ಚೀಟಿ ಕಳೆದುಕೊಂಡು ಬಿಟ್ಟಿರುತ್ತೇವೆ. ಆದರೆ ತುರ್ತು ಅಗತ್ಯವಿದ್ದರೆ, ಡಿಜಿಟಲ್ (Digital)ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಬಹುದು. ಇದರ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಮಾಹಿತಿ ಇಲ್ಲಿದೆ.

ಡಿಜಿಟಲ್ ವೋಟರ್ ಐಡಿ ಕಾರ್ಡ್ ಡೌನ್‌ಲೋಡ್ ಮಾಡಲು ಮೊದಲಿಗೆ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ https://voterportal.eci.gov.in ಗೆ ಹೋಗಿ ಈಗ ಇಲ್ಲಿ ನಂತರ ಮತದಾರರ ಸೇವಾ ಪೋರ್ಟಲ್ (NVSP) ಲಾಗಿನ್ ಪುಟಕ್ಕೆ https://www.nvsp.in/Account/Login ಹೋಗಿ ಇದಕ್ಕಾಗಿ ನೀವು ಖಾತೆಯನ್ನು ಹೊಂದಿರಬೇಕು. ನೀವು ಖಾತೆಯನ್ನು ಹೊಂದಿಲ್ಲದಿದ್ದರೆ ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಖಾತೆಯನ್ನು ರಚಿಸಬಹುದು.

ಇದನ್ನೂ ಓದಿ..ಆಸ್ತಿ ಮಾರಾಟ ಹಾಗೂ ಖರೀದಿದಾರರೆ ಇಲ್ಲಿ ಗಮನಿಸಿ, ಬರಿ ಒಂದು ವಾರದಲ್ಲಿ ನಿಮ್ಮ ಹೆಸರಿಗೆ ಅಸ್ತಿ ವರ್ಗಾವಣೆ

ಖಾತೆಯನ್ನು ರಚಿಸಿದ ನಂತರ ಇಲ್ಲಿ ಕೆಲವು ವಿವರಗಳನ್ನು ಕೇಳಲಾಗುತ್ತದೆ. ಈ ವಿವರಗಳನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ. ಲಾಗಿನ್ ಆದ ನಂತರ ಇ-ಇಪಿಐಸಿ ಡೌನ್‌ಲೋಡ್ ಮಾಡುವ ಆಯ್ಕೆ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ. ಇಲ್ಲಿ ನೀವು ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿದ ತಕ್ಷಣ ವೋಟರ್ ಐಡಿಯ ಪಿಡಿಎಫ್ ಫೈಲ್ ಡೌನ್‌ಲೋಡ್ ಆಗುತ್ತದೆ.

ಈ ವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವು ಇ-ಇಪಿಐಸಿ ಸೌಲಭ್ಯವನ್ನು ಆರಂಭಿಸಿದೆ . ಈ ಡಿಜಿಟಲ್ ಮತದಾರರ ಗುರುತಿನ ಚೀಟಿಯ ಪ್ರಯೋಜನವೆಂದರೆ ನೀವು ಪ್ರತಿ ಬಾರಿ ನಗರ ಅಥವಾ ರಾಜ್ಯವನ್ನು ಬದಲಾಯಿಸಿದಾಗ ಹೊಸ ಕಾರ್ಡ್ ಪಡೆಯುವ ತೊಂದರೆಯನ್ನು ಎದುರಿಸಬೇಕಾಗಿಲ್ಲ. ವಿಳಾಸವನ್ನು ಬದಲಾಯಿಸುವ ಮೂಲಕ ತಾಜಾ ಆವೃತ್ತಿಯ ಡೌನ್‌ಲೋಡ್ ಅನ್ನು ಬಳಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ..ದೇಶದ ರೈತರಿಗೆ ಮೋದಿಜಿಯಿಂದ ಗಿಫ್ಟ್ ಈ ಯೋಜನೆಯಿಂದ 15 ಲಕ್ಷ ಸಿಗಲಿದೆ, ನೀವು ಕೂಡ ಇವತ್ತೇ ಅರ್ಜಿಹಾಕಿ

ಜನವರಿ 25 ಮತದಾರ ದಿನದಂದು ಕೇಂದ್ರ ಚುನಾವಣಾ ಆಯೋಗ ಡಿಜಿಟಲ್ ವೋಟರ್ ಐಡಿ ಡೌನ್‍ಲೋಡ್ ಮಾಡಿಕೊಳ್ಳುವ ಅವಕಾಶವನ್ನ ನೀಡಿದೆ. ನಿಮ್ಮ ಡಿಜಿಟಲ್ ವೋಟರ್ ಐಡಿ ಪಿಡಿಎಫ್ ಫಾರ್ಮೆಟ್ ನಲ್ಲಿ ಡೌನ್‍ಲೋಡ್ ಆಗುತ್ತದೆ. ಡೌನ್‍ಲೋಡ್ ಮಾಡಿಕೊಳ್ಳುವ ವೋಟರ್ ಐಡಿ ಇ-ಆಧಾರ್ ಮಾದರಿಯಲ್ಲಿ ಇರೋದರಿಂದ ಎಡಿಟ್ ಮಾಡಲು ಸಾಧ್ಯವಿಲ್ಲ.

Leave a Reply

Your email address will not be published. Required fields are marked *