ಹೊಸ ಪೆಟ್ರೋಲ್ ಬಂಕ್ ಓಪನ್ ಮಾಡಲು ಬಂಡವಾಳ ಎಷ್ಟಿರಬೇಕು? ಇದಕ್ಕೆ ಅರ್ಜಿಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ

0 12,092

ಈ ಲೇಖನದ ಮೂಲಕ ನಾವು ಪೆಟ್ರೋಲ್ ಬಂಕ್ (Petrol Bank) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಯಾರಿಗಾದರೂ ಪೆಟ್ರೋಲ್ ಬಂಕ್ (Petrol Bank) ಬಿಸಿನೆಸ್ (Business) ಮಾಡುವ ಆಸಕ್ತಿ ಇದ್ದರೆ ಹೇಗೆ ಆರಂಭ ಮಾಡುವುದು ಇದಕ್ಕೆ ಬೇಕಾಗುವಂತಹ ಖರ್ಚು ಎಷ್ಟು ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ

ಮೊದಲಿಗೆ ಈ ಪೆಟ್ರೋಲ್ ಬಂಕ್ ಬಿಸಿನೆಸ್ ಅನ್ನು ಯಾರು ಮಾಡಬಹುದು ಅಂತ ನೋಡುವುದಾದರೆ ಕೆಲವೊಂದಿಷ್ಟು ಅರ್ಹತೆಗಳು ಇರುತ್ತವೆ ಅರ್ಹತೆಗಳು ಏನು ಅಂತ ನೋಡುವುದಾದರೆ ಈ ರೀತಿಯಾಗಿರುತ್ತವೆ. ಪೆಟ್ರೋಲ್ ಬಂಕ್ ಬಿಸಿನೆಸ್ ಮಾಡುವಂತಹ ವ್ಯಕ್ತಿ ಭಾರತೀಯನಾಗಿರಬೇಕು. ವಯಸ್ಸು 21 ರಿಂದ 55 ವರ್ಷದ ಒಳಗಿರಬೇಕು ಹಾಗೂ ಎಜುಕೇಶನ್ 10ನೇ ತರಗತಿ ಪಾಸಾಗಿರಬೇಕು.

ಈ ಮೂರು ಅರ್ಹತೆಗಳು ಪೆಟ್ರೋಲ್ ಬಂಕ್ ಓಪನ್ ಮಾಡುವಂತಹ ವ್ಯಕ್ತಿಗೆ ಇರಲೇಬೇಕು. ಇನ್ನು ಪೆಟ್ರೋಲ್ ಬಂಕ್ ಓಪನ್ ಮಾಡಲು ತಗಲುವ ಸಾಮಾನ್ಯ ಕರ್ಚು ನೋಡುವುದಾದರೆ, ಇದು ನಿಮ್ಮ ಏರಿಯಾ ಅಥವಾ ಜಾಗದ ಮೇಲೆ ಅವಲಂಬಿತವಾಗಿರುತ್ತದೆ ಅಂದರೆ ಹಳ್ಳಿ ಮತ್ತು ನಗರಗಳಿಗೆ ಸಂಬಂಧಿಸಿ ಪೆಟ್ರೋಲ್ ಬೆಲೆಗಳು ವ್ಯತ್ಯಾಸವನ್ನು ಹೊಂದಿರುತ್ತದೆ.

ಒಂದು ವೇಳೆ ನೀವು ಹಳ್ಳಿಯಲ್ಲಿ ಪೆಟ್ರೋಲ್ ಬಂಕ್ ಓಪನ್ ಮಾಡಬೇಕು ಅಂತ ಇದ್ದರೆ ಮಿನಿಮಮ್ 12 ಲಕ್ಷ ಖರ್ಚು ಬೇಕಾಗುತ್ತದೆ ಇನ್ನೂ ನಗರಗಳಲ್ಲಿ ಪೆಟ್ರೋಲ್ ಬಂಕ್ ಓಪನ್ ಮಾಡಬೇಕು ಅಂತ ಇದ್ದಲ್ಲಿ 25 ಲಕ್ಷರೂಪಾಯಿ ಇನ್ವೆಸ್ಟ್ಮೆಂಟ್ ಮಾಡಬೇಕಾಗುವುದು. ಇನ್ನು ಪೆಟ್ರೋಲ್ ಬಂಕ್ ಓಪನ್ ಮಾಡಲು ಕೆಲವೊಂದಿಷ್ಟು ಅಪ್ಲಿಕೇಶನ್ಗಳನ್ನು ಕೊಡಬೇಕಾಗುತ್ತದೆ ಅದು ಹೇಗೆ ಅಂತ ನೋಡೋಣ.

ಇದನ್ನೂ ಓದಿ..ಕೆಲಸದ ನಿರೀಕ್ಷೆಯಲ್ಲಿರುವರಿಗೆ ಇಲ್ಲಿದೆ ಉದ್ಯೋಗಾವಕಾಶ ಇವತ್ತೆ ಅರ್ಜಿಹಾಕಿ

ಪೆಟ್ರೋಲ್ ಬಂಕ್ ಓಪನ್ ಮಾಡಲು ಒಂದು ಹೊಸ ಜಾಗ ಇರಬೇಕು. ಹೊಸ ಜಾಗವಿದ್ದರೆ ನೀವು ಪೆಟ್ರೋಲ್ ಬಂಕ್ ವೆಬ್ ಸೈಟಿಗೆ ಹೋಗಿ ಅಪ್ಲಿಕೇಶನನ್ನು ಸಲ್ಲಿಸಬಹುದು. ಇಲ್ಲಿ ನೀವು ಯಾವ ಕಂಪನಿಯ ಪೆಟ್ರೋಲ್ ಬಂಕ್ ತೆರೆಯಬೇಕು ಅಂದುಕೊಂಡಿರುವ ಕಂಪನಿಯ ಹೆಸರನ್ನು ವೆಬ್ಸೈಟ್ ಓಪನ್ ಮಾಡಿ ಅಪ್ಲಿಕೇಶನ್ ತುಂಬಬೇಕು. ಆದರೆ ಪೆಟ್ರೋಲ್ ಬಂಕ್ ಓಪನ್ ಮಾಡಲು ಕೆಲವೊಂದಿಷ್ಟು ಶರತ್ತುಗಳು ಇರುತ್ತವೆ

ಅವುಗಳನ್ನು ನೋಡುವುದಾದರೆ ನಿಮ್ಮ ಸ್ವಂತ ಜಾಗ ಹೊಂದಿರಬೇಕು, ಜಾಗವನ್ನು ಬಾಡಿಗೆಗೆ ಕೂಡ ತೆಗೆದುಕೊಳ್ಳಬಹುದು ಆದರೆ ಆ ಜಾಗದ ಮಾಲೀಕರಿಂದ NOC ಪಡೆದುಕೊಂಡಿರಬೇಕು. ಇನ್ನು ನಿಮ್ಮ ಫ್ಯಾಮಿಲಿ ಅವರು ಯಾರ ಜಾಗ ಇದ್ದರೂ ಅವರಿಂದ ಕೂಡ ನೀವು NOC ಮತ್ತು ಅಫಿಡೆವಿಟ್ ಪಡೆಯಬೇಕು. ಜಾಗ ನಿಮ್ಮ ಸ್ವಂತದ್ದೆ ಆಗಿದ್ರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಲೀಗಲ್ ಡಾಕ್ಯುಮೆಂಟ್ಸ್ ಗಳು ಸಹ ನಿಮ್ಮ ಬಳಿ ಇರಲೇಬೇಕು.

ಇದನ್ನೂ ಓದಿ..ಬಾರ್ ಓಪನ್ ಮಾಡಲು ಬಂಡವಾಳ ಎಷ್ಟಿರಬೇಕು? ಲೈಸೆನ್ಸ್ ಪಡೆಯೋದು ಹೇಗೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಮುಖ್ಯವಾಗಿ ನೀವು ಪೆಟ್ರೋಲ್ ಬಂಕ್ ಓಪನ್ ಮಾಡುವಲ್ಲಿ ಗ್ರೀನ್ ಬೆಲ್ಟ್ ಏರಿಯಾಗಳು ಇರಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ನಾವು ಗಳಿಸುವಂತಹ ಆದಾಯ.. ಪೆಟ್ರೋಲ್ ಬಂಕ್ ಬಿಸಿನೆಸ್ ಇಂದ ನಾವು ಲಕ್ಷಗಟ್ಟಲೆ ಆದಾಯವನ್ನು ಗಳಿಸಬಹುದು. ಈ ಬಿಸಿನೆಸ್ ನಲ್ಲಿ ಸಕ್ಸಸ್ ಆದರೆ ಕೋಟ್ಯಾಧಿಪತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಹೆಚ್ಚು ಹಣ ಗಳಿಸಬೇಕು ಅಂತ ಎಂದಿದ್ದರೆ ಜಾಗ ತುಂಬಾ ಮುಖ್ಯವಾಗಿರುತ್ತದೆ ಅಷ್ಟೇ.

Leave A Reply

Your email address will not be published.