ಆಸ್ತಿ ಮಾರಾಟ ಹಾಗೂ ಖರೀದಿದಾರರೆ ಇಲ್ಲಿ ಗಮನಿಸಿ, ಬರಿ ಒಂದು ವಾರದಲ್ಲಿ ನಿಮ್ಮ ಹೆಸರಿಗೆ ಅಸ್ತಿ ವರ್ಗಾವಣೆ

News

Karnataka Revenue Department: ಆಸ್ತಿ ನೋಂದಣಿಯಾದ 7 ದಿನದ ಒಳಗೆ ಖರೀದಿದಾರರ ಹೆಸರಿಗೆ ಖಾತೆ ಮತ್ತು ಪಹಣಿಯನ್ನು ಬದಲಾವಣೆಯನ್ನು ಕಡ್ಡಾಯಗೊಳಿಸುವುದು ಎಂದು ಆರ್‌ ಅಶೋಕ್‌ (R Ashok) ಹೇಳಿದ್ದಾರೆ. ಖಾತೆ ಮಾಡಲು ಅವಕಾಶ ಕಲ್ಪಿಸುವ ಮತ್ತೊಂದು ಜನಸ್ನೇಹಿ ತೀರ್ಮಾನವನ್ನು ರಾಜ್ಯ ಸರ್ಕಾರ (State Govt)ಕೈಗೊಂಡಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವರು ಹೇಳಿದ್ದಾರೆ. ಖಾತೆ ಮಾಡಲು ಅವಕಾಶ ಕಲ್ಪಿಸುವ ಮತ್ತೊಂದು ಜನಸ್ನೇಹಿ ನಿರ್ಧಾರ ಕೈಗೊಂಡಿದೆ. ನೋಂದಣಿಯಾದ ಆಸ್ತಿ ನೀಡಲು ಸದ್ಯಕ್ಕೆ 34 ದಿನಗಳ ಕಾಲ ಕಾಲವಕಾಶ ಇದೆ. ಇದನ್ನು 7 ದಿನಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ತಿಳಿಸಿದರು. ಆಸ್ತಿ ನೋಂದಣಿ ಮಾಡಿಸಿಕೊಂಡವರು ಖಾತೆ ಪಡೆಯಲು ತಿಂಗಳುಗಟ್ಟಲೇ ಕಛೇರಿಗೆ ಹೋಗುವುದನ್ನು ತಪ್ಪಿಸಲು ಈ ತೀರ್ಮಾನವನ್ನು ಮಾಡಲಾಗಿದೆ.

ಇದರಿಂದ ಆಸ್ತಿ ಮೇಲೆ ಸೌಲಭ್ಯ ಪಡೆಯಲು ಜನರಿಂದ ಬಹಳಷ್ಟು ಅನುಕೂಲವಾಗಲಿದೆ. ರಾಜ್ಯದಲ್ಲಿ ಲಕ್ಷಾಂತರ ಕಂದಾಯ ನಿವೇಶನವನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಂದಾಯ ಜಾಗಗಳಲ್ಲಿನ ಅನದೀಕೃತ ಮನೆ, ನಿವೇಶನ ಮತ್ತಿತರ 40 ಲಕ್ಷಕ್ಕೂ ಅಧಿಕ ಆಸ್ತಿಗಳನ್ನು ಸಕ್ರಮ ಮಾಡಲು ಸರ್ಕಾರ ಹೊಸ ಮಾರ್ಗವನ್ನು ಹುಡುಕಿದೆ.

ಭೂ ಪರಿವರ್ತನೆಯಲ್ಲಿ ಪಾರದರ್ಶಕತೆಯಲ್ಲಿ ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಲಾಗುತ್ತಿರುವ ನೂತನ ವ್ಯವಸ್ಥೆಯಲ್ಲಿ ಕಂದಾಯ ನಿವೇಶನಗಳ ಆಸ್ತಿಗಳ ಸಕ್ರಮಕ್ಕೂ ಅನುವು ಮಾಡಿಕೊಡಲು ಸರ್ಕಾರ ಚಿಂತನೆ ಮಾಡಿದೆ. ಯೋಜನಾ ಪ್ರಾಧಿಕಾರ ವ್ಯಾಪ್ತಿಗೆ ಒಳಪಟ್ಟ ಕೃಷಿ ಭೂಮಿ, ಕೃಷಿಯೇತರ ಚಟುವಟಿಕೆಯಲ್ಲಿ ಬಳಸಿಕೊಳ್ಳಲು ಭೂ ಪರಿವರ್ತನೆ ಮಾಡಿಕೊಳ್ಳಲು ಮುಂದಾಗಿರುವ ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತದೆ.

ಇದನ್ನೂ ಓದಿ..ಸ್ವಂತ ಮನೆಯಿಲ್ಲದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಬೆಳಗಾವಿಯ ಅಧಿವೇಶನದಲ್ಲಿ ಈ ವಿಚಾರ ಕುರಿತು ವಿಧೇಯಕ ಮಂಡಿಸಲು ನಿರ್ಧರಿಸಲಾಗಿದೆ. ಇದರಿಂದ ನಗರ ಹಾಗು ಗ್ರಾಮೀಣ ವಿಭಾಗದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸಹಕಾರಿಯಾಗಲಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳದ ಇಂತಹ ನಿವೇಶನಗಳ ಭೂ ದಂಡ ಶುಲ್ಕದೊಂದಿಗೆ ಭೂ ಪರಿವರ್ತನೆ ಸಾದ್ಯವಾದರೆ ಜನರಿಗೆ ಅನುಕೂಲವಾಗುತ್ತದೆ.

Leave a Reply

Your email address will not be published. Required fields are marked *