Taurus and Scorpio: ವೃಷಭ ಹಾಗೂ ವೃಶ್ಚಿಕ ರಾಶಿಯವರ ದಾಂಪತ್ಯ ಜೀವನ ಹೇಗಿರತ್ತೆ? ನೋಡಿ

0 18,433

Taurus and Scorpio Astrology: ಭಾರತದ ಸಮನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ವಿವಾಹಕ್ಕೆ ತನ್ನದೇ ಆದ ಮಹತ್ವವಿದೆ. ಮದುವೆಯೆಂಬುದು ಕೇವಲ ಗಂಡು ಹೆಣ್ಣಿನ ನಡುವಿನ ಬಾಂಧವ್ಯವಾಗಿರದೆ ಅದು ಎರಡು ಮನೆತನಗಳ ಬೆಸುಗೆ ಆಗಬೇಕು ಎನ್ನುವುದನ್ನು ಹಿರಿಯರು ಹೇಳುತ್ತಾರೆ. ಇದಕ್ಕಾಗಿಯೆ ಒಂದಷ್ಟು ಪದ್ದತಿಗಳನ್ನು ಸಹ ರೂಢಿಸಿಕೊಂಡು ಬಂದಿದ್ದಾರೆ. ಈ ಪದ್ಧತಿಗಳಲ್ಲಿ ಒಂದಾಗಿರುವ ಜಾತಕವನ್ನು ನೋಡುವುದು ಸಹ ಬಹಳವೇ ಅರ್ಥಪೂರ್ಣವಾದ ಶಾಸ್ತ್ರವಾಗಿದೆ.

Taurus and Scorpio Astrology

ಯಾವ ರಾಶಿಗೆ ಯಾವ ರಾಶಿಯವರೊಡನೆ ವಿವಾಹವಾದರೆ ಅವರ ಬದುಕು ಸುಂದರವಾಗಿ ಇರುತ್ತದೆ ಎನ್ನುವುದನ್ನು ಹಿರಿಯರು ತಮ್ಮ ಅನುಭವಗಳಿಂದ ನೋಡಿ ಮುಂದಿನ ಪೀಳಿಗೆಗೆ ತಿಳಿಸಿ ಹೋಗಿದ್ದಾರೆ. ಹಾಗಿದ್ದರೆ ವೃಷಭ ಮತ್ತು ವೃಶ್ಚಿಕ ರಾಶಿಯವರು ಮದುವೆಯಾದಲ್ಲಿ ಅವರ ದಾಂಪತ್ಯ ಜೀವನ ಹೇಗಿರಲಿದೆ? ಅವರ ಬದುಕು ಹೇಗೆ ಸಾಗುತ್ತದೆ? ಇಬ್ಬರ ನಡುವೆ ಪ್ರೀತಿ ಹೊಂದಾಣಿಕೆಯು ಇರುತ್ತದೆಯೋ ಅಥವಾ ಕಾಲಘಟ್ಟದ ಅಡಿಯಲ್ಲಿ ಎಲ್ಲವೂ ನುಂಗಿ ಹೋಗುತ್ತದೆಯೋ ಎನ್ನುವುದನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ವೃಶ್ಚಿಕ ಹಾಗೂ ವೃಷಭ ರಾಶಿಯ ಗಂಡು ಹಾಗೂ ಹೆಣ್ಣು ಪರಸ್ಪರ ವಿರುದ್ಧ ಗುಣಗಳನ್ನು ಹೊಂದಿರುತ್ತಾರೆ‌. ವಿರುದ್ಧ ಧ್ರುವಗಳೇ ಹೆಚ್ಚು ಆಕರ್ಷಣೆಯ ಕೇಂದ್ರವಾಗುವಂತೆ, ವೃಷಭ ಹಾಗೂ ವೃಶ್ಚಿಕ ರಾಶಿಯವರು ಪರಸ್ಪರರಲ್ಲಿ ಆಕರ್ಷಿತರಾಗುತ್ತಾರೆ. ವೃಶ್ಚಿಕ ರಾಶಿಯಲ್ಲಿ ಜನಿಸಿದಂತವರು ಹೆಚ್ಚಾಗಿ ವಾಸ್ತವವನ್ನು ಇಷ್ಟ ಪಡುವಂತಹ ವ್ಯಕ್ತಿಗಳಾಗಿದ್ದರೆ. ಇವರು ಪ್ರಾಯೋಗಿಕ ಜೀವನವನ್ನು ನಡೆಸುತ್ತಾರೆ. ಆದರೆ ವೃಷಭ ರಾಶಿಯವರು ಹಾಗಲ್ಲ. ಅವರು ಭಾವನಾಜೀವಿಗಳು. ಭಾವನೆಗಳನ್ನೆ ಬದುಕು ಎನ್ನುವಷ್ಟು ಹಚ್ಚಿಕೊಂಡಿರುತ್ತಾರೆ‌.

ವೃಷಭ ರಾಶಿಯವರು ತಮ್ಮ ಸಂಗಾತಿಯನ್ನು ಇನ್ನಿಲ್ಲದಂತೆ ಪ್ರೀತಿಸುತ್ತಾರೆ. ಇವರು ಆದರ್ಶ ಪ್ರೇಮಿಯಂತೆ ಯಾವತ್ತಿಗೂ ಸಂಗಾತಿಯ ಮಾತಿಗೆ ಬಹಳ ಬೆಲೆ ನೀಡುತ್ತಾರೆ‌. ಎರಡು ರಾಶಿಯ ಜನರಲ್ಲಿಯು ಸಹ ಕೋಪವು ಹೆಚ್ಚಾಗಿ ಕಂಡುಬರುತ್ತದೆ. ಸ್ವಲ್ಪ ನಾಟಕ ಮಾಡುವಂತಹ ಜನರಾಗಿರುತ್ತಾರೆ. ಆದಾಗ್ಯೂ ಇವರು ಒಬ್ಬರನ್ನೊಬ್ಬರು ಹೊಂದಿಕೊಳ್ಳುವ ಗುಣವನ್ನು ಬೆಳೆಸಿಕೊಂಡು ಇರುತ್ತಾರೆ. ಆದ್ದರಿಂದ ಈ ಎರಡು ರಾಶಿಯವರ ದಾಂಪತ್ಯದಲ್ಲಿ ಹೆಚ್ಚಿನ ಬಿರುಕುಗಳು ಬರುವುದಿಲ್ಲ.

ಇನ್ನು ವೃಷಭ ರಾಶಿಯವರು ಗೂಳಿಯ ಚಿನ್ಹೆ ಪಡೆದದ್ದು, ಇವರು ಸದಾ ಪ್ರಮಾಣಿಕರಾಗಿ ಇರುತ್ತಾರೆ. ತಮ್ಮ ಸಂಗಾತಿಗೆ ಎಂದಿಗೂ ಮೋಸ ಮಾಡುವ ಯೋಚನೆಯನ್ನು ಮಾಡುವುದಿಲ್ಲ‌. ಇವರು ಬಹಳಷ್ಟು ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇವರ ಪ್ರೀತಿ ಹಾಗೂ ಸ್ನೇಹವು ಪರಿಶುದ್ಧವಾದ ಮನಸ್ಸಿನಿಂದ ಕೂಡಿರುತ್ತದೆ. ಇವರು ಸದಾ ಚಟುವಟಿಕೆಯಿಂದ ಇರುತ್ತಾರೆ. ಹಾಗಾಗಿ ವೃಷಭ ರಾಶಿಯವರ ಜನರನ್ನು ವಿವಾಹವಾಗಲು ಅದೃಷ್ಟ ಮಾಡಿರಬೇಕು ಎನ್ನುತ್ತಾರೆ.

ವೃಶ್ಚಿಕ ರಾಶಿಯವರು ಹೇಳುವವರಲ್ಲ, ಮಾಡಿ ತೋರಿಸುವ ಜಾಯಮಾನದವರಾಗಿರುತ್ತಾರೆ. ಇವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಗೋಜಿಗೆ ಹೋಗುವುದಿಲ್ಲ. ಇವರ ಮನಸ್ಸು ಸದಾ‌ ಮುಚ್ಚಿದ ಬಾಗಿಲಿನ ಹಿಂದಿರುವ ರಹಸ್ಯದಂತೆ ನಿಗೂಢವಾಗಿಯೆ ಇರುತ್ತದೆ. ಇವರಿಗೆ ಎಲ್ಲರ ಮುಂದೆ ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರೀತಿಯನ್ನು ಸಹ ಇವರು ಮುಚ್ಚಿಟ್ಟುಕೊಂಡೆ ಮಾಡುತ್ತಾರೆ‌. ಹಾಗಾಗಿ ಇವರ ಭಾವನೆಗಳನ್ನು ಇತರರು ಅರಿಯುವುದು ಅಷ್ಟು ಸುಲಭವಿಲ್ಲ. ಆದರು ಇವರು ಪ್ರೀತಿಯಲ್ಲಿ ಪ್ರಾಮಾಣಿಕರಾಗಿ ಇರುತ್ತಾರೆ.

ವೈವಾಹಿಕ ಜೀವನ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಹೊಸ ಉತ್ಸಾಹವನ್ನು ತರುವಂತದ್ದಾಗಿದೆ. ಇದರಿಂದಾಗಿ ಮನುಷ್ಯನ ಸರ್ವತೋಮುಖ ಅಭಿವೃದ್ಧಿ ಆಗುತ್ತದೆ. ಹಾಗೂ ಮಾನಸಿಕವಾಗಿ ಮನುಷ್ಯನ ಬೆಳವಣಿಗೆಗೆ ವಿವಾಹವೆನ್ನುವುದು ಬಹು ಮುಖ್ಯವಾಗಿದೆ. ಹಾಗಾಗಿ ತಮ್ಮ ಸಂಗಾತಿಗಳನ್ನು ಆರಿಸಿಕೊಳ್ಳಬೇಕಾದಾಗ ಜಾತಕಗಳನ್ನು ತೋರಿಸಿ, ಕುಂಡಲಿಯ ಹೊಂದಾಣಿಕೆ ಆಗುತ್ತದೆಯೊ ಇಲ್ಲವೋ ಎನ್ನುವುದುನ್ನು ತಿಳಿಯದೆ ಹೋದರೆ ಮುಂದೆ ದೊಡ್ಡ ಸಮಸ್ಯೆಗಳನ್ನು ಅನುಭವಿಸ ಬೇಕಾಗಬಹುದು.

Leave A Reply

Your email address will not be published.