ಈ ಒಂದು ಪದಾರ್ಥವನ್ನು ತಿನ್ನುವುದರಿಂದ ಬಿಪಿ ಬರುವುದೇ ಇಲ್ಲ. ಬಿಪಿಯನ್ನು ಕಂಟ್ರೋಲ್ ಮಾಡಲು ಸುಲಭವಾದ ಉಪಾಯಗಳನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ನಮ್ಮ ದೇಹದಲ್ಲಿ ರಕ್ತದಲ್ಲಿ ಗ್ಲೂಕೋಸ್ ಅಂಶ ಹೆಚ್ಚಾದಾಗ ಕೊಲೆಸ್ಟ್ರಾಲ್, ರಕ್ತ ಮಂದವಾಗುವುದು ಉಂಟಾಗುತ್ತದೆ. ರಕ್ತ ಮಂದವಾಗಿದೆ ಎಂದರೆ ಹೃದಯದಿಂದ ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಸರಬರಾಜು ಮಾಡುವಾಗ ತಿರುವುಗಳಲ್ಲಿ ರಕ್ತ ಮಂದವಾದಾಗ ಅಲ್ಲಿ ಹೊಲಸು ಸೇರಿಕೊಳ್ಳಲು ಆರಂಭವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮೂಲದಲ್ಲಿ ರಕ್ತದ ಒತ್ತಡ ಹೆಚ್ಚು ಕಡಿಮೆ ಆಗುವುದು ಆರಂಭವಾಗುತ್ತದೆ. ಹೀಗಾದಾಗ ಹೃದಯ ಮತ್ತು ಜೋರಾಗಿ ರಕ್ತವನ್ನು ಸರಬರಾಜು ಮಾಡುವ ಆರಂಭಿಸುತ್ತದೆ. ಹೀಗಾದಾಗ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.

ರಕ್ತನಾಳದ ಗೋಡೆಗಳಮೇಲೆ ಹೊಲಸು ಕುಳಿತುಕೊಂಡಾಗ ರಕ್ತದೊತ್ತಡ ಕೂಡ ಹೆಚ್ಚಾಗುತ್ತದೆ. ಹೀಗೆ ಬಿಪಿ ಬಂದಾಗ ನಾವು ಡಾಕ್ಟರ್ ಬಳಿ ಹೋದಾಗ ಅವರು ರಕ್ತನಾಳದ ಗೋಡೆಗಳ ಮೇಲೆ ಇರುವಂತಹ ಹೊಲಸನ್ನು ತೆಗೆಯುವುದರ ಸಲುವಾಗಿ ಒಂದಿಷ್ಟು ಮಾತ್ರೆಗಳನ್ನು ನೀಡುತ್ತಾರೆ ಅಥವಾ ರಕ್ತನಾಳವನ್ನು ಅಗಲ ಸಲಹೆ ಸೂಚನೆ ನೀಡುತ್ತಾರೆ. ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಬೇರೆ ರೀತಿಯ ಮಾತ್ರೆಗಳನ್ನು ನೀಡುತ್ತಾರೆ. ಮೂಲ ಸಮಸ್ಯೆ ರಕ್ತದಲ್ಲಿ ಹೊಲಸು ಸೇರಿ ರಕ್ತ ತಿಳಿಯಾಗದೆ ಇರುವುದು ಇದಕ್ಕೆ ಮಾತ್ರೆಯನ್ನು ನೀಡದೆ ಬೇರೆಯಲ್ಲ ಸಮಸ್ಯೆಗಳ ಮಾತ್ರೆಯನ್ನು ವೈದ್ಯರು ನೀಡುತ್ತಾರೆ ಹಾಗಾಗಿ ನಾವು ನಮ್ಮ ಆಹಾರದಲ್ಲಿ ರಕ್ತವನ್ನು ತಿಳಿಯಾಗಿಸುವಂತಹ ಪದಾರ್ಥಗಳನ್ನು ಸೇವಿಸಬೇಕು. ಪ್ರಿವೆನ್ಷನ್ ಇಸ್ ಬೆಟ್ಟರ್ ತನ್ ಕ್ಯೂರ್ ಮಾತಿನಂತೆ ರೋಗ ಬಂದ ಮೇಲೆ ನಾವು ಯಾವುದೇ ಔಷಧಿ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ರೋಗ ಬರದಂತೆ ನಮ್ಮ ರಕ್ತದಲ್ಲಿ ಯಾವುದೇ ರೀತಿಯ ರೋಗ ಸೇರಿಕೊಳ್ಳದಂತೆ ನೋಡಿಕೊಳ್ಳುವುದು ಒಳ್ಳೆಯದು.

ನಾವು ನಮ್ಮ ಆಹಾರದಲ್ಲಿ ರಕ್ತವನ್ನು ಶುದ್ಧ ಮಾಡಿಕೊಳ್ಳುವ ಗುಣಗಳಿರುವ ಪದಾರ್ಥವನ್ನು ಸೇವಿಸಬೇಕು. ಅಂತಹ ಗುಣ ಈ 5 ಸಿರಿಧಾನ್ಯಗಳಲ್ಲಿ ಇವೆ. ಸಾಮೆ , ನವಣೆ , ಆರ್ಕಾ, ಕೂರ್ಲೆ ಈ ಧಾನ್ಯಗಳನ್ನು ಎರಡು ದಿನಗಳಂತೆ ತಿನ್ನುವುದರಿಂದ ರಕ್ತ ತಿಳಿಯಾಗುವುದು ಹಾಗೂ ರಕ್ತನಾಳಗಳ ಗೋಡೆಗಳ ಮೇಲೆ ಕುಳಿತಿರುವ ಅಂತಹ ಹೊಲಸುಗಳು ಕೊಲೆಸ್ಟ್ರಾಲ್ ಗಳು ಎಲ್ಲವನ್ನು ನಿಧಾನವಾಗಿ ಕರಗಿಸಲು ಈ ಸಿರಿಧಾನ್ಯಗಳು ಸಹಾಯಕಾರಿಯಾಗಿದೆ. ಈ ಸಿರಿಧಾನ್ಯಗಳ ಸೇವನೆ ಒಂದು ಕಡೆಯಾದರೆ ಇನ್ನೊಂದು ರೀತಿಯಲ್ಲಿಯೂ ಸಹ ನಾವು ಬಿಪಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಕೆಲವೊಂದಿಷ್ಟು ತರಕಾರಿ ಹಾಗೂ ಸೊಪ್ಪಿನ ರಸಗಳಲ್ಲಿ ಕೂಡ ರಕ್ತವನ್ನು ತಿಳಿಯಾಗಿಸುವ ಹಾಗೂ ರಕ್ತನಾಳದ ಗೋಡೆಗಳ ಮೇಲೆ ಇರುವ ಹೊಲಸನ್ನು ತೆಗೆಯುವ ಗುಣಗಳು ಇರುತ್ತವೆ. ಅಂತಹ ತರಕಾರಿಗಳೆಂದರೆ ಸೋರೆಕಾಯಿ ಹೀರೇಕಾಯಿ, ಕುಂಬಳಕಾಯಿ, ಸೌತೆಕಾಯಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಸಬ್ಬಸಿಗೆ ಸೊಪ್ಪು ಈ ಸೊಪ್ಪುಗಳಲ್ಲಿ ಕೂಡ ರಕ್ತವನ್ನು ಶುದ್ಧ ಮಾಡುವ ಅಂಶಗಳು ಹೆಚ್ಚಾಗಿರುತ್ತದೆ. ಹಾಗಾಗಿ ನಮ್ಮ ರಕ್ತವನ್ನು ಶುದ್ಧ ಮಾಡಿಕೊಳ್ಳುವುದರ ಸಲುವಾಗಿ ಒಂದು ಕಡೆ ಸಿರಿಧಾನ್ಯಗಳ ಬಳಕೆ ಹಾಗೂ ಇನ್ನೊಂದು ರೀತಿಯಲ್ಲಿ ಸೊಪ್ಪು ತರಕಾರಿಗಳನ್ನು ತೆಗೆದುಕೊಳ್ಳಬೇಕು. ಈ ರೀತಿಯಾಗಿ ಮೂರರಿಂದ ಆರು ತಿಂಗಳುಗಳ ಕಾಲ ಮಾಡುವುದರಿಂದ ಮುಂದೆ ಯಾವುದೇ ರೀತಿಯ ಮಾತ್ರೆಗಳ ಅವಶ್ಯಕತೆಯಿರುವುದಿಲ್ಲ.

ಸಿರಿಧಾನ್ಯಗಳ ಹಾಗೂ ತರಕಾರಿ ಸೊಪ್ಪುಗಳ ಸೇವನೆಯಿಂದ ನಮ್ಮ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ನಿಧಾನವಾಗಿ ಸೇರುವುದರ ಮೂಲಕ ನಾವು ಬಿಪಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಹಾಗೂ ಕ್ರಮೇಣವಾಗಿ ಸಂಪೂರ್ಣವಾಗಿ ಕಡಿಮೆ ಕೂಡ ಮಾಡಿಕೊಳ್ಳಬಹುದು. ಈಗ ನಾಲ್ಕು ಪೀಳಿಗೆಗಳ ಹಿಂದೆ ಹೋದರೆ ನಮ್ಮ ಪೂರ್ವಜರಲ್ಲಿ ಯಾವುದೇ ರೀತಿಯ ಬಿಪಿ ಡಯಾಬಿಟಿಸ್ ಅಂತಹ ಯಾವುದೇ ರೀತಿಯ ಸಮಸ್ಯೆಗಳು ಕಂಡು ಬಂದಿರಲಿಲ್ಲ ಇವೆಲ್ಲ ಈಗಿನ ಸಮಸ್ಯೆಗಳಾಗಿವೆ. ಇವು ನಮ್ಮ ಆಹಾರ ಪದಾರ್ಥ ಆಚಾರ ವಿಚಾರ ಇವುಗಳ ಬದಲಾವಣೆಯಿಂದಾಗಿ ಬರುವಂತಹ ರೋಗಗಳಾಗಿವೆ. ಆದರೆ ವಿಜ್ಞಾನಿಗಳು ಡಾಕ್ಟರ್ಗಳು ಇದನ್ನು ಒಪ್ಪದೇ ಅನುವಂಶೀಯವಾಗಿ ಬಂದಿರುವುದು ಎಂದು ಹೇಳುತ್ತಿರುತ್ತಾರೆ. ಹಾಗಾಗಿ ನಾವು ಮುಖ್ಯವಾಗಿ ನಮ್ಮ ಆಹಾರ ಪದಾರ್ಥಗಳು, ಜೀವನಶೈಲಿ, ಆಚಾರ-ವಿಚಾರ, ವಿಹಾರಗಳನ್ನು ಬದಲಾಯಿಸಿಕೊಳ್ಳಬೇಕು. ಸಕ್ಕರೆ ಹಾಗೂ ಬೇಕರಿ ಪದಾರ್ಥಗಳನ್ನು ತಿನ್ನದೆ ಇರುವುದರಿಂದ ಕೂಡ ನಾವು ಈ ಸಮಸ್ಯೆಯಿಂದ ಹೊರಬರಬಹುದು. ನಾವು ನಮ್ಮ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದರಿಂದ ಹಲವಾರು ರೋಗಗಳಿಂದ ನಾವು ದೂರ ಇರಬಹುದು.

By

Leave a Reply

Your email address will not be published. Required fields are marked *