ಮೆಕ್ಕೆಜೋಳ ಸೇವನೆಯಿಂದ ಶರೀರಕ್ಕೆ ಏನ್ ಲಾಭವಿದೆ ಗೊತ್ತೇ ?

0 28

ಸ್ವಾದ ಮತ್ತು ಆರೋಗ್ಯದ ಕಾರಣದಿಂದಾಗಿ ಜೋಳ ಹೆಸರುವಾಸಿಯಾಗಿದೆ. ಜೋಳದಲ್ಲಿ ಇರುವಂತಹ ಕೆಲವು ಗುಣಗಳ ಕಾರಣದಿಂದಾಗಿ ನಾವು ಜೋಳದ ಕಡೆಗೆ ಆಕರ್ಷಿತರಾಗುತ್ತೇವೆ. ಕಾರ್ನ್ ಎಂದು ಕರೆಯಲ್ಪಡುವ ಜೋಳ ಒಂದು ಪೌಷ್ಠಿಕ ಆಹಾರವಾಗಿದ್ದು ನಮ್ಮ ದೇಹದ ಅವಶ್ಯಕತೆಗಳನ್ನು ಪೂರೈಸುತ್ತದೆ. ಜೋಳ ನಮ್ಮ ದೇಹವನ್ನು ಹಲವಾರು ರೋಗಗಳ ವಿರುದ್ಧ ರಕ್ಷಿಸುತ್ತದೆ ಹಾಗೂ ಬೇರೆ ರೋಗಗಳ ವಿರುದ್ಧ ಹೋರಾಡಲು ಸಹ ಸಹಾಯಕವಾಗಿರುತ್ತದೆ. ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ ಆಗಿರುವಂತಹ ಜೋಳದ ಬಗ್ಗೆ ಹಾಗೂ ಅದರ ಪ್ರಯೋಜನದ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ

ಮೊದಲಿಗೆ ಫ್ಯಾಟ್ ಅಥವಾ ಕೊಬ್ಬನ್ನು ಕರಗಿಸಲು ಜೋಳ ಸಹಾಯಕಾರಿಯಾಗಿದೆ. ನಮ್ಮ ದೇಹದಲ್ಲಿ ಇರುವಂತಹ ಅನಗತ್ಯ ಅಥವಾ ಅನಾವಶ್ಯಕ ಕೊಬ್ಬನ್ನು ಕರಗಿಸಲುಜೋಳ ಸಹಾಯಕಾರಿಯಾಗಿದೆ ಪ್ರತಿದಿನ ಜೋಳವನ್ನು ಸೇವನೆ ಮಾಡುವುದರಿಂದ ನಾವು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಜೋಳದಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದ್ದು ಇದು ನಮ್ಮ ದೇಹದಲ್ಲಿ ಕ್ಯಾನ್ಸರ್ ರೋಗವನ್ನು ಕಡಿಮೆಮಾಡಿಕೊಳ್ಳಲು ಸಹಾಯಕಾರಿಯಾಗಿದೆ. ಜೋಳದಲ್ಲಿ ಇರುವಂತಹ ಪ್ಯಾರಿಯೋಲಿಕ್ ಆಸಿಡ್ ಬ್ರೆಸ್ಟ್ ಮತ್ತು ಲಿವರ್ ನ ಟ್ಯೂಮರ್ ಅನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ಅಷ್ಟೇ ಅಲ್ಲದೇ ಫ್ರೀ ರಾಡಿಕಲ್ ಇಂದ ಆಗುವಂತಹ ತೊಂದರೆಯಿಂದಲೂ ಸಹ ನಮ್ಮನ್ನು ರಕ್ಷಿಸುತ್ತದೆ. ಜೋಳದಲ್ಲಿ ವಿಟಮಿನ್ ಸಿ ಬಯೋ ಫ್ಲೇವೊನೈಡ್ಸ್, ಫೈಬರ್ ಅಂಶ ಹೇರಳವಾಗಿದ್ದು ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ನರಗಳಲ್ಲಿ ಬ್ಲಾಕೆಜ್ ಆಗುವುದನ್ನು ತಡೆಗಟ್ಟುತ್ತದೆ.

ಜೋಳವು ಮೂಳೆಗಳನ್ನು ಬಲಗೊಳಿಸುತ್ತದೆ ಹಾಗೂ ಇದರಲ್ಲಿ ಇರುವಂತಹ ಐರನ್, ಜಿಂಕ್ , ಫಾಸ್ಪರಸ್ , ಮೆಗ್ನೀಷಿಯಂ ಅಂಶಗಳು ಮೂಳೆಗಳ ಸಮಸ್ಯೆಯಿಂದ ದೂರವಿಡುತ್ತದೆ. ಜೋಳದಲ್ಲಿ ವಿಟಾ ಕೆರೋಟಿನ್ ಹಾಗೂ ವಿಟಮಿನ್ ಇ ಇದ್ದು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಜೋಳವನ್ನು ತಿನ್ನುವುದರಿಂದ ಚರ್ಮ ಹೊಳಪಿನಿಂದ ಕೂಡಿರುತ್ತದೆ. ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶಗಳು ಹೇರಳವಾಗಿರುವುದರಿಂದ ಫ್ರೀ ರಾಡಿಕಲ್ಸ್ ದೂರ ಮಾಡಿ ಮುಖದ ಮೇಲೆ ಮೂಡುವಂತಹ ನೆರಿಗೆಗಳನ್ನು ಕಡಿಮೆ ಮಾಡುತ್ತದೆ. ಜೋಳದಲ್ಲಿ ಇರುವಂತಹ ಕಾರ್ಬೋಹೈಡ್ರೇಟ್ ಅಂಶ ಹೇರಳವಾಗಿದೆ ಹಾಗಾಗಿ ಜೋಳವನ್ನು ತಿನ್ನುವುದರಿಂದ ನಮ್ಮ ಶರೀರಕ್ಕೆ ಹೆಚ್ಚಾಗಿ ಶಕ್ತಿ ಮತ್ತು ಬಲ ದೊರೆಯುತ್ತದೆ. ಜೋಳ ನಮ್ಮ ದೇಹದಲ್ಲಿ ಐರನ್ ನ ಕೊರತೆಯನ್ನು ತುಂಬುತ್ತದೆ ಹಾಗೂ ಅನಿಮಿಯಾ ದಿಂದ ಕೂಡ ನಮ್ಮ ದೇಹವನ್ನು ದೂರವಿಡುತ್ತದೆ. ಇಷ್ಟೇ ಅಲ್ಲದೆ ಜೋಳ ಸೇವನೆ ಮಾಡುವುದರಿಂದ ಮಲಬದ್ಧತೆ ನಿವಾರಣೆ ಮಾಡಿ ಹೊಟ್ಟೆ ಸಮಸ್ಯೆಯನ್ನು ಕೂಡ ಸರಿಯಾಗಿರಿಸುತ್ತದೆ. ಜೋಳದಲ್ಲಿ ವಿಟಮಿನ್ ಬಿ9 ಮತ್ತು ಫಾಲಿಕ್ ಆಸಿಡ್ ಗಳು ಹೆಚ್ಚಾಗಿದ್ದು ಗರ್ಭಿಣಿ ಮಹಿಳೆಯರಿಗೆ ಅಂತೂ ಇದು ತುಂಬಾ ಲಾಭದಾಯಕವಾಗಿದೆ. ನಮ್ಮ ದೇಹಕ್ಕೆ ಇಂತಹ ಹತ್ತು ಹಲವಾರು ಪ್ರಯೋಜನವಿರುವ ಜೋಳವನ್ನು ನಾವು ಯಾವ ರೀತಿಯಲ್ಲಿ ಆದರೂ ಸೇವನೆ ಮಾಡಬಹುದು. ಮಿತವಾದ ಸೇವನೆ ಹಿತವಾದ ಅರೋಗ್ಯ ಅತಿಯಾದರೆ ಅಮೃತವು ವಿಷ ಅನ್ನೋದು ನೆನಪಿರಲಿ. ನಿಮಗೆ ಆರೋಗ್ಯಕರ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಉಪಯೋಗವಾಗಲಿ

Leave A Reply

Your email address will not be published.