ಪ್ರತಿದಿನ ಬೆಳಿಗ್ಗೆ ನಾವು ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜದ ನೀರನ್ನು ಕುಡಿಯುವುದರಿಂದ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು. ಕಾಮಕಸ್ತೂರಿ ಬೀಜಕ್ಕೆ ಸಬ್ಜ ಸೀಡ್ಸ್, ಬೇಸಿಲ್ ಸೀಡ್ಸ್ ಎಂದೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಕಾಮಕಸ್ತೂರಿ ಬೀಜಕ್ಕೆ ಕಂಟಿ ಜಯ, ಪರ್ಣಾಸವೆಂದು ಹೆಸರು ಇದೆ. ಕಂಟಿ ನಂ ಜಲಾಯುತಿ ಅಂದರೆ ಎಂತಹ ಕಠಿಣ ಮನಸ್ಸು ಇರುವವರನ್ನು ಸಹ ಬದಲಾಯಿಸುವ ವಿಶಿಷ್ಟ ಸುಗಂಧ ಇರುವ ಗಿಡ ಕಾಮ ಕಸ್ತೂರಿ ಬೀಜದ ಗಿಡವಾಗಿದೆ. ಕಾಮಕಸ್ತೂರಿ ಬೀಜ ಬಣ್ಣದಲ್ಲಿ ಕಪ್ಪಾಗಿದ್ದು ಸಿಹಿ ತುಳಸಿ ಗಿಡದಿಂದ ಸಂಗ್ರಹಿಸಲಾಗುತ್ತದೆ. ಬೀಜಗಳನ್ನು ನೀರಿನಲ್ಲಿ ನೆನೆಸಿ ನಂತರ ತೆಗೆದುಕೊಳ್ಳಬೇಕು. ಅಮೇರಿಕಾದ ಸಾಂಬಾರ ಪದಾರ್ಥಗಳ ವ್ಯಾಪಾರ ಸಂಘಟನೆ ನೀಡುವ ವರದಿಯ ಪ್ರಕಾರ ಕಾಮಕಸ್ತೂರಿ ಬೀಜದಲ್ಲಿ ಶೇಕಡ 6.1 ರಷ್ಟು ತೇವಾಂಶ, ಶೇಕಡ 11.9 ರಷ್ಟು ಪ್ರೊಟೀನ್ , ಶೇಕಡಾ 3.6 ರಷ್ಟು ಕೊಬ್ಬು, ಶೇಕಡ 20.5 ರಷ್ಟು ನಾರು, ಶೇಖರ 41.2 ರಷ್ಟು ಕಾರ್ಬೋಹೈಡ್ರೇಟ್, ಶೇಕಡ 16.2 ಬೂದಿ ಅಂಶಗಳು ಇವೆ.

ರಾತ್ರಿ ಮಲಗುವಾಗ ಒಂದು ಟೀ ಚಮಚ ಕಾಮಕಸ್ತೂರಿ ಬೀಜವನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಅದನ್ನು ಕುಡಿಯಬೇಕು. ಇದರಲ್ಲಿ ಸ್ವಲ್ಪ ಕಲ್ಲುಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುವುದು ಶರೀರಕ್ಕೆ ಬಹಳ ತಂಪನ್ನು ನೀಡುತ್ತದೆ. ಅಷ್ಟೇ ಅಲ್ಲದೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹ ಕಾಮಕಸ್ತೂರಿ ಬೀಜ ನೆರವಾಗುತ್ತದೆ. ಕಾಮಕಸ್ತೂರಿ ಬೀಜದ ಗಿಡದ ಎಲೆಗಳನ್ನು ಪ್ರತಿದಿನ ಮೈಗೆ ಹಚ್ಚಿಕೊಳ್ಳುವುದರಿಂದ ದೇಹದ ದುರ್ಗಂಧ ಮಾಯವಾಗುತ್ತದೆ. ಗಂಟಲು ಬೇನೆಗೆ ಕಾಮಕಸ್ತೂರಿ ಬೀಜದ ಹಸಿ ಎಲೆಗಳನ್ನು ಜಜ್ಜಿ ಅದರ ರಸ ತೆಗೆದು ಶೋಧಿಸಿ ಜೇನುತುಪ್ಪದಲ್ಲಿ ಬೆರೆಸಿ ತಿನ್ನುವುದರಿಂದ ಗಂಟಲುಬೇನೆ ಕಡಿಮೆಯಾಗುವುದು. ಇನ್ನು ಮೂಗಿನಿಂದ ನೀರು ಸೋರುವುದು ಹಾಗೂ ಜ್ವರಕ್ಕೆ ಕಾಮಕಸ್ತೂರಿ ಎಲೆಗಳಿಂದ ಕಷಾಯ ಮಾಡಿ ಈ ಕಷಾಯಕ್ಕೆ ಸ್ವಲ್ಪ ಜೇನು ಬೆರೆಸಿ ಕುಡಿಯುವುದರಿಂದ ಶೀತ ಜ್ವರ ಕಡಿಮೆ ಯಾಗುವುದು. ಬೇಸಿಗೆಯಲ್ಲಿ ತಂಪಾದ ಶರಬತ್ತು ಮಾಡಿಕೊಂಡು ಕುಡಿಯುವುದರಿಂದ ಬಾಯಾರಿಕೆ ಕೂಡ ಕಡಿಮೆಯಾಗುವುದು.

ರಕ್ತಭೇದಿ ಆಗುತ್ತಿದ್ದರೆ 1 ಟೀಚಮಚ ಕಾಮಕಸ್ತೂರಿ ಬೀಜವನ್ನು ಒಂದು ಲೋಟ ನೀರಿಗೆ ಬೆರೆಸಿ, ಅದನ್ನು ರುಬ್ಬಿ ಶೋಧಿಸಿ ಕುಡಿಯುವುದರಿಂದ ರಕ್ತ ಭೇದಿ ಕಡಿಮೆಯಾಗುತ್ತದೆ ಹಾಗೂ ಹೊಟ್ಟೆಯ ಭಾದೆಗಳಿಗೆ ಕಾಮಕಸ್ತೂರಿ ಗಿಡದ ಹೂವುಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಅನುವುಮಾಡಿಕೊಡುತ್ತದೆ. ಕಾಮಕಸ್ತೂರಿ ಬೀಜದಲ್ಲಿ ಅಡಗಿರುವಂತಹ ಆರೋಗ್ಯಕಾರಿ ಅಂಶಗಳು ಬಹಳಷ್ಟಿವೆ. ಇವುಗಳನ್ನು ನಾವು ತಪ್ಪದೇ ಪಾಲಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!