ನಮ್ಮ ಭಾರತೀಯ ವೈದ್ಯಕೀಯ ಶಾಸ್ತ್ರದಲ್ಲಿ ಹಾಗೂ ಅಡುಗೆಗಳಲ್ಲಿ ಕೇಸರಿ ದಳಕ್ಕೆ ಹೆಚ್ಚಿನ ಮಹತ್ವವಿದೆ. ಕೇಸರಿ ದಳಗಳನ್ನು ಕೇವಲ ಅಡುಗೆಗೆ ಮಾತ್ರವಲ್ಲದೆ ನಮ್ಮ ಆರೋಗ್ಯದ ಹಾಗೂ ಸೌಂದರ್ಯದ ವೃದ್ಧಿಗಾಗಿ ಕೂಡಾ ಉಪಯೋಗ ಮಾಡಲಾಗುಗುವುದು. ಸೌಂದರ್ಯ ಹೆಚ್ಚಿಸುವ ಆಹಾರಗಳಲ್ಲಿ ಕೇಸರಿ ದಳ ಕೂಡಾ ಒಂದಾಗಿದೆ. ಅದರಲ್ಲಿಯೂ ಕಾಶ್ಮೀರಿ ಶುದ್ಧ ಕೇಸರಿಯನ್ನು ಸೇವಿಸಿದರೆ ಅಂತೂ ನಿಮ್ಮ ಮುಖ ಒಂದೇ ವಾರದಲ್ಲಿ ಉತ್ತಮ ಕಾಂತಿಯನ್ನು ಪಡೆದುಕೊಳ್ಳುತ್ತದೆ. ಕೇಸರಿ ದಳಗಳ ಉಪಯೋಗ ಹಾಗೂ ಹೇಗೆ ಬಳಸುವುದು ಎನ್ನುವುದರ ಕುರಿತು ಇಲ್ಲಿ ತಿಳಿದುಕೊಳ್ಳೋಣ.

ಕೇಸರಿಯ ದಳಗಳನ್ನು ಸೇವಿಸುವುದರಿಂದ ಕೆಲವು ದಿನಗಳಲ್ಲಿಯೇ ಮುಖದಲ್ಲಿ ನೈಸರ್ಗಿಕವಾಗಿ ಹೊಳಪು ಕಾಣಿಸುವುದು. ಕೇಸರಿ ದಳಗಳನ್ನು ಯಾವುದಾದರೂ ಸಿಹಿ ತಿಂಡಿ, ಐಸ್ಕ್ರೀಮ್ ಮುಂತಾದ ಪದಾರ್ಥಗಳಲ್ಲಿ ಸೇರಿಸಿದರೆ ಆಗ ಅದರ ರುಚಿಯೇ ಬೇರೆ. ಆದರೆ ಆರೋಗ್ಯವರ್ಧಕ ಆಗಿರುವಂತಹ ಪದಾರ್ಥಗಳಲ್ಲಿ ಕೇಸರಿಯನ್ನು ಬೆರೆಸಿ ತಿನ್ನುವುದರಿಂದ ಆಗ ಅದರ ಉಪಯೋಗಗಳು ಬೇರೆಯೆ ಇವೆ. ಕೇಸರಿ ದಳಗಳ ಉಪಯೋಗಗಳ ಬಗ್ಗೆ ನೋಡುವುದಾದರೆ, ಗರ್ಭಿಣಿಯರಿಗೆ ಹಾಲಿನಲ್ಲಿ ಕೇಸರಿ ದಳಗಳನ್ನು ಬೆರೆಸಿ ಕೊಡಲಾಗುತ್ತದೆ. ಏಕೆಂದರೆ ಇದರಿಂದ ಮಗುವಿನ ತ್ವಚೆ ಸುಂದರವಾಗಿ ಕಾಣುತ್ತದೆ. ಇನ್ನು ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬೇಕು ಎಂದು ಇಚ್ಛಿಸುವವರು ಕೇಸರಿ ದಳಗಳನ್ನು ಬಳಸಿ, ಟೀ, ಕಷಾಯವನ್ನು ಹಾಗೂ ಕೇಸರಿ ಮತ್ತು ಅರಿಶಿನದ ಹಾಲನ್ನು ಸೇವಿಸುವುದು ಒಳ್ಳೆಯದು.

ರಾತ್ರಿ ಮಲಗುವಾಗ ಹಾಲಿನ ಜೊತೆಗೆ ಸ್ವಲ್ಪ ಕೇಸರಿ ದಳಗಳನ್ನು ಬೆರೆಸಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದಲ್ಲದೆ ನಮ್ಮ ಚರ್ಮದ ಆರೋಗ್ಯವನ್ನೂ ಸಹ ಕಾಪಾಡಿಕೊಳ್ಳಲು ಕೇಸರಿ ಸಹಾಯಕಾರಿ ಆಗಿದೆ. ಇನ್ನು ನಮ್ಮ ದೇಹದಲ್ಲಿ ಉಷ್ಣತೆ ಮತ್ತು ಪಿತ್ತದ ಪ್ರಮಾಣ ಹೆಚ್ಚಾಗಿ ಇದ್ದಲ್ಲಿ ಅಂತವರು ಕೇಸರಿಯ ಸೇವನೆಯನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಕೆಸರಿಯ ದಳಗಳಲ್ಲಿ ಕೂಡಾ ಸ್ವಲ್ಪ ಮಟ್ಟದ ಉಷ್ಣ ಅಂಶವನ್ನು ಹೊಂದಿರುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಉಷ್ಣ ಮತ್ತು ಪಿತ್ತ ಪ್ರಕೃತಿ ಇರುವವರು ಕೇಸರಿಯನ್ನು ಕಡಿಮೆ ಸೇವನೆ ಮಾಡುವುದು ಒಳ್ಳೆಯದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!