ದೇಹದಲ್ಲಿ ಸರಿಯಾದ ಜೀರ್ಣಕ್ರಿಯೆ ಆಗಬೇಕೆಂದರೆ ಇಲ್ಲಿದೆ ಸುಲಭ ಉಪಾಯ

0 1

ಜೀವನ ಶೈಲಿ, ಆಹಾರ ಕ್ರಮಗಳು ಇವುಗಳ ವ್ಯತ್ಯಾಸದಿಂದ ನಮ್ಮ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಉಂಟಾಗುವುದು. ಇದರಿಂದಾಗಿ ನಮ್ಮ ಸುತ್ತಮುತ್ತಲಿನ ಸಾಕಷ್ಟು ಜನರು ನಮಗೆ ಅನಾರೋಗ್ಯ ಪೀಡಿತರಾಗಿ ಕಾಣುತ್ತಾರೆ. ತಿಂದ ಆಹಾರವು ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗದೆ ಇದ್ದರೆ ಅದರಿಂದ ಗ್ಯಾಸ್, ಎದೆಯುರಿ, ಅತಿಸಾರ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಹೀಗಾಗಿ ಹೊಟ್ಟೆಯ ಆರೋಗ್ಯವು ಅತೀ ಮುಖ್ಯ. ಹೊಟ್ಟೆಯು ಆರೋಗ್ಯವಾಗಿ ಇದ್ದರೆ ಆಗ ಸಂಪೂರ್ಣ ದೇಹ ಕೂಡ ಆರೋಗ್ಯವಾಗಿ ಇರುತ್ತದೆ. ಸರಳವಾದ ಆಹಾರ ಕ್ರಿಯೆಯಿಂದ ನಾವು ಹೇಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ತಾತ್ಕಾಲಿಕ ಆಹಾರ ಸಮಸ್ಯೆಗಳಿಂದಲೋ ಇಲ್ಲಾ ವಯಸ್ಸಾದ ಕಾರಣಕ್ಕೋ ನಮ್ಮಲ್ಲಿ ಅಜೀರ್ಣದ ಸಮಸ್ಯೆ ಕಾಣಬಹುದು. ತುಂಬಾ ಆಹಾರವು ಹೊಟ್ಟೆಯಲ್ಲಿ ಕರಗದೇ ಹಾಗೆಯೇ ಗಟ್ಟಿಯಾಗಿ ಉಳಿದುಕೊಳ್ಳುವುದು. ಇದರಿಂದ ಅಸಮಾಧಾನ ಕಿರಿಕಿರಿ ಉಂಟಾಗುವುದು. ಹೀಗೆ ಆದಾಗ ಕರುಳಿನ ಸಮಸ್ಯೆ ಉಂಟಾಗುವುದು. ಜೀರ್ಣ ಕ್ರಿಯೆ ಸರಿಯಾಗಿ ಆಗದೇ ಇದ್ದಾಗ ವಾಂತಿ , ವಾಕರಿಕೆ , ಮಲಬದ್ಧತೆ ಹೊಟ್ಟೆನೋವು ಕಾಣಿಸಿಕೊಳ್ಳುವುದು ಸಹಜ. ಇನ್ನು ದೈನಂದಿನ ಆಹಾರದಲ್ಲಿ ನಾವು ಸೇವಿಸುವ ಆಹಾರ ಪದಾರ್ಥಗಳಿಂದ ಸರಿದೂಗಿಸಿಕೊಳ್ಳುವ ಮೂಲಕ ನಾವು ಅಜೀರ್ಣ ಸಮಸ್ಯೆಯಿಂದ ಪಾರಾಗಬಹುದು. ಅಷ್ಟೇ ಅಲ್ಲದೆ ಜಠರ ಮತ್ತು ಕರುಳಿನ ಕಾರುಗಳನ್ನು ಕೂಡಾ ಉತ್ತೇಜಿಸಬಹುದು. ನಾವು ಪ್ರತಿನಿತ್ಯದ ನಮ್ಮ ಅಡುಗೆಯಲ್ಲಿ ಈ ಕೆಲವು ವಸ್ತುಗಳನ್ನು ಬಳಸುವುದರಿಂದ ಮತ್ತು ಅವುಗಳ ಉಪಯೋಗದಿಂದ ನಾವು ಈ ಅಜೀರ್ಣದ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಧಾನ್ಯಗಳಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಬೆಂಬಲಿಸುವ ಅಂಶಗಳು ಇರುತ್ತವೆ. ಹಾಗಾಗಿ ಬೆಳಗಿನ ಉಪಹಾರದಲ್ಲಿ ಧಾನ್ಯಗಳನ್ನು ಬಳಕೆ ಮಾಡುವುದರಿಂದ ಇದು ಕರುಳಿನ ಆರೋಗ್ಯಕ್ಕೆ ಸಹಾಯಕಾರಿ ಹಾಗೂ ತಿಂದ ಆಹಾರ ಕೂಡಾ ಸರಿಯಾಗಿ ಜೀರ್ಣ ಆಗುವುದು. ಚಿಯಾ ಬೀಜಗಳು ಅಂದರೆ ಕಾಮಕಸ್ತೂರಿ ಬೀಜ ಇದರಲ್ಲಿ ನಾರಿನ ಅಂಶ ಹೆಚ್ಚಾಗಿ ಇರುವುದರಿಂದ ಇದರ ಬಳಕೆ ಉತ್ತಮ. ನಾರಿನ ಅಂಶ ಹೆಚ್ಚಾಗಿ ಇರುವುದರಿಂದ ಇದು ಕೂಡಾ ಜೀರ್ಣ ಕ್ರಿಯೆಗೆ ಸಹಾಯಕಾರಿ ಆಗಿರುತ್ತದೆ. ಸಲಾಡ್ ರೂಪದಲ್ಲಿ ಕಾಮಕಸ್ತೂರಿ ಬೀಜವನ್ನು ಸೇವಿಸುವುದರಿಂದ ಉತ್ತಮ ಶಕ್ತಿಯನ್ನು ಪಡೆಯಬಹುದು.

ಇನ್ನು ಅರಿಶಿನ ಇದು ಅಪಾರವಾದ ಆರೋಗ್ಯಕಾರಿ ಗುಣಗಳು ಹೊಂದಿದೆ. ಅರಿಶಿನವನ್ನು ಆಹಾರದಲ್ಲಿ ಬಳಕೆ ಮಾಡುವುದರಿಂದ ಇದು ಜೀರ್ಣ ವ್ಯವಸ್ಥೆಗೆ ಉತ್ತಮ ಸಹಾಯಕಾರಿ ಆಗಿರುತ್ತದೆ. ಇದು ಅಜೀರ್ಣದ ಸಮಸ್ಯೆಯನ್ನು ದೂರ ಮಾಡುವುದು ಮಾತ್ರ ಅಲ್ಲದೇ ಉರಿಯೂತ ಮುಂತಾದ ಸಮಸ್ಯೆಯನ್ನು ಸಹ ದೂರ ಮಾಡುತ್ತದೆ. ಇನ್ನು ನಾವು ಪ್ರತಿನಿತ್ಯ ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿ. ಇದು ಅನೇಕ ರೋಗಗಳನ್ನು ಗುಣಮುಖ ಆಗಿಸುವ ಶಕ್ತಿಯನ್ನು ಹೊಂದಿದೆ. ಆಹಾರಗಳಲ್ಲಿ ಬೆಳ್ಳುಳ್ಳಿಯ ಬಳಕೆ ಮಿತವಾಗಿ ಇದ್ದರೆ ಜೀರ್ಣ ಕ್ರಿಯೆಗೆ ಅತ್ಯುತ್ತಮ ಸಹಾಯಕಾರಿ ಎನ್ನಬಹುದು. ಇದರಲ್ಲಿ ಅತ್ಯುತ್ತಮ ಖನಿಜ, ನಾರಿನ ಅಂಶಗಳು ಇರುವುದರಿಂದ ಜೀರ್ಣ ಕ್ರಿಯೆಗೆ ಅತ್ಯುತ್ತಮ ಸಹಾಯಕಾರಿ. ಇನ್ನು ಊಟದ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿದ ಮಜ್ಜಿಗೆ ಸೇವಿಸುವುದರಿಂದ ಕೂಡಾ ಅಜೀರ್ಣ ಸಮಸ್ಯೆ ನಿವಾರಣೆ ಆಗುವುದು. ರಾತ್ರಿ ಸಮಯದಲ್ಲಿ ಒಂದು ಜಗ್ ನೀರಿಗೆ ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಅರ್ಧ ನಿಂಬೆ ಹಣ್ಣು ಹಾಕಿಟ್ಟು ಆ ನೀರನ್ನು ಮಾರನೇ ದಿನ ಬೆಳಿಗ್ಗೆ ಆಗಾಗ ಕುಡಿಯುವುದರಿಂದ ಹೊಟ್ಟೆ ಖಾಲಿ ಆಗಿ ಅಜೀರ್ಣದ ಸಮಸ್ಯೆ ದೂರ ಆಗುವುದು.

ಮೊಸರು ಕೂಡಾ ಜೀರ್ಣ ಕ್ರಿಯೆಗೆ ಸಹಾಯ ಮಾಡಿ ಅಜೀರ್ಣದ ಸಮಸ್ಯೆಯನ್ನು ದೂರ ಮಾಡುವುದು. ಇದರಲ್ಲಿ ಇರುವ ಕಿಣ್ವಗಳು ಮತ್ತು ಒಳ್ಳೆಯ ಬ್ಯಾಕ್ಟೀರಿಯಾಗಳು ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಆಗಲು ಸಹಾಯ ಮಾಡುತ್ತದೆ. ಪ್ರತೀ ದಿನ ಸ್ವಲ್ಪ ಮೊಸರು ಸೇವನೆ ಮಾಡುವುದರಿಂದ ಅಜೀರ್ಣದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ರೀತಿಯಾಗಿ ನಾವು ಮನೆಯಲ್ಲಿಯೇ ಸುಲಬವಾಗಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಮೊದಲು ಒಮ್ಮೆ ಮನೆಮದ್ದನ್ನು ಉಪಯೋಗಿಸಿ ನಂತರ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ
ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave A Reply

Your email address will not be published.