ತಲೆಕೂದಲು ಉದುರುವ ಸಮಸ್ಯೆ ನಿವಾರಿಸುವ ಜೊತೆಗೆ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುವ ಮನೆಮದ್ದು.

0 43

ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಕಂಡುಬರುವ ಸಮಸ್ಯೆ ಆಗಿದೆ. ಈಗಿನ ಜೀವನ ಶೈಲಿ, ಫಾಸ್ಟ್ ಫುಡ್, ಪೋಷಕಾಂಶ ಇರುವ ಆಹಾರ ಸೇವನೆ ಇಲ್ಲದೆ ಇರುವುದು, ನಿದ್ರಾಹೀನತೆ, ಕಡಿಮೆ ನೀರು ಕುಡಿಯುವುದು ಹೀಗೆ ಹಲವಾರು ಸಮಸ್ಯೆಗಳಿಂದ ಕೂದಲು ಉದುರಲು ಆರಂಭ ಆಗುತ್ತದೆ. ಈ ರೀತಿ ಸಮಸ್ಯೆ ಇರುವವರು ಕೆಲವು ಸರಳವಾದ ಹಾಗೂ ಸುಲಭವಾದ ಮನೆಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು. ಈ ಲೇಖನದ ಮೂಲಕ ಕೂದಲು ಉದುರುವ ಸಮಸ್ಯೆಗೆ ಈರುಳ್ಳಿ ರಸ ಹೇಗೆ ಸಹಾಯಕಾರಿ ಎನ್ನುವುದನ್ನು ತಿಳಿದುಕೊಳ್ಳೋಣ.

ಕೂದಲು ಉದುರುವ ಎಲ್ಲಾ ಸಮಸ್ಯೆಗಳಿಗೂ ಉತ್ತಮ ಪರಿಹಾರ ಎಂದರೆ ಅದು ಈರುಳ್ಳಿ ರಸ. ಇರುಳ್ಳಿಯಲ್ಲಿ ಸಲ್ಫರ್ ಅಂಶ ಸಮೃದ್ಧವಾಗಿ ಇರುವುದರಿಂದ ಈರುಳ್ಳಿಯಲ್ಲಿರುವ ಈ ಅಂಶ ಕೂದಲನ್ನು ಗಟ್ಟಿ ಮಾಡುವುದು ಅಲ್ಲದೇ ಕೂದಲು ಉದುರುವ ಸಮಸ್ಯೆಯನ್ನು ಸಹ ನಿವಾರಣೆ ಮಾಡುತ್ತದೆ. ಕೂದಲಿನ ಆರೋಗ್ಯಕ್ಕೆ ಬೇಕಾದಂತಹ ಎಲ್ಲಾ ಪೋಷಕಾಂಶಗಳನ್ನು ಸಹ ಈರುಳ್ಳಿ ರಸ ಒದಗಿಸುತ್ತದೆ. ಕೆಂಪು ಬಣ್ಣದ ಈರುಳ್ಳಿಯಲ್ಲಿ ಸಲ್ಫರ್ ಅಂಶ ಹೇರಳವಾಗಿ ಇರುತ್ತದೆ ಹಾಗಾಗಿ ಒಂದು ಕೆಂಪು ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಕಟ್ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಒಂದು ಚಮಚ ಕೊಬ್ಬರಿ ಎಣ್ಣೆ ಸೇರಿಸಿ ಪೇಸ್ಟ್ ಮಾಡಿಕೊಂಡು ನಂತರ ಒಂದು ಕಾಟನ್ ಬಟ್ಟೆಗೆ ಹಾಕಿಕೊಂಡು ಅದರಿಂದ ಹಾಗೆ ಕೂದಲಿನ ಪ್ರತಿಯೊಂದು ಭಾಗಕ್ಕೂ ಹಚ್ಚಿಕೊಳ್ಳಬೇಕು. ರಾತ್ರಿ ತಲೆಗೆ ಎಣ್ಣೆ ಹಚ್ಚಿದ್ದರೆ ಬೆಳಿಗ್ಗೆ ತಲೆಗೆ ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಈರುಳ್ಳಿ ರಸವನ್ನು ಹಚ್ಚಬೇಕು. ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಐದು ನಿಮಿಷ ನಿಧಾನಕ್ಕೆ ಮಸಾಜ್ ಮಾಡಬೇಕು. ಈ ವಿಧಾನವನ್ನು ವಾರದಲ್ಲಿ ಎರಡು ಬಾರಿ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು.

ಈರುಳ್ಳಿ ಬಳಕೆ ಮಾಡುವುದರಿಂದ ಕೂದಲು ವಾಸನೆ ಏನೂ ಬರಲ್ಲ ಅರ್ಧ ಗಂಟೆ ಬಿಟ್ಟು ಶಾಂಪೂ ಬಳಸಿ ಸ್ನಾನ ಮಾಡುವುದರಿಂದ ಈರುಳ್ಳಿ ವಾಸನೆ ಇರಲ್ಲ ಹೋಗಿರತ್ತೆ. ಕೂದಲು ಉದುರುವುದು ನಿಲ್ಲಬೇಕು ಅಂದರೆ ಸುಲಭವಾದ ಈ ಮನೆಮದ್ದನ್ನು ಮಾಡಿಕೊಳ್ಳಲೇಬೇಕು. ಈ ಕೆಳಗಿನ ವಿಡಿಯೋ ನೋಡಿ

Leave A Reply

Your email address will not be published.