ಕಟಿಂಗ್ ಶಾಪ್ ನಲ್ಲಿ ತಲೆ ಮಸಾಜ್ ಹಾಗೂ ಮೂಗಿನಲ್ಲಿರುವ ಕೂದಲು ಕಟ್ ಮಾಡಿದ್ರೆ ಏನಾಗುತ್ತೆ

0 63

ದೇವರ ಸೃಷ್ಟಿ ಅದ್ಭುತವಾಗಿದೆ ಹಾಗೂ ಆಶ್ಚರ್ಯವಾಗಿದೆ. ಮನುಷ್ಯನಲ್ಲಿರುವ ಒಂದೊಂದು ಅಂಗಾಂಗಗಳು ತನ್ನದೆ ಆದ ಕಾರ್ಯ ನಿರ್ವಹಿಸುತ್ತದೆ. ಒಂದು ಅಂಗದಲ್ಲಿ ಸಣ್ಣ ಬದಲಾವಣೆಯಾದರೂ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಮೂಗಿನ ಹೊಳ್ಳೆಯಲ್ಲಿರುವ ಕೂದಲು ಸಹ ತನ್ನದೆ ಕೆಲಸ ನಿರ್ವಹಿಸುತ್ತದೆ ಆದ್ದರಿಂದ ಮೂಗಿನ ಹೊಳ್ಳೆಯಲ್ಲಿರುವ ಕೂದಲನ್ನು ತೆಗೆಯಬಾರದು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಮೂಗಿನ ಹೊಳ್ಳೆಯಲ್ಲಿರುವ ಕೂದಲಿನ ಕೆಲಸ ಏನು, ಕೂದಲನ್ನು ಯಾಕೆ ತೆಗೆಯಬಾರದು ಎಂಬುದರ ಬಗ್ಗೆ ಡಾಕ್ಟರ್ ಅಂಜನಪ್ಪ ಅವರು ತಿಳಿಸಿದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ನೀವು ಮೂಗಿನ ಹೊಳ್ಳೆಗಳಲ್ಲಿ ಗಮನಿಸಿದರೆ ಕೂದಲು ಕಾಣಿಸುತ್ತದೆ. ಸುತ್ತಲೂ ಬ್ರಷ್​ನಂತಿರುವ ಈ ಕೂದಲಿನಲ್ಲಿ ಸಣ್ಣ ಮತ್ತು ದಪ್ಪವಿರುವ ಕೂದಲುಗಳಿರುತ್ತದೆ. ಇದು ಎರಡು ವಿಧದ ಮೂಗಿನ ಕೂದಲುಗಳಾಗಿದ್ದು, ಕೆಲವು ಕೂದಲುಗಳು ಕಾಣಿಸುವುದೇ ಇಲ್ಲ. ಮತ್ತೆ ಕೆಲವು ಉದ್ದ ಬೆಳೆಯುವುದಲ್ಲದೆ ಮೂಗಿನ ಹೊರಗೆ ಕಾಣಿಸುತ್ತದೆ. ಇಂತಹ ಸಮಯದಲ್ಲಿ ಹೆಚ್ಚಿನವರು ಮುಜುಗರ ತಪ್ಪಿಸಲು ಕೂದಲನ್ನು ಕಿತ್ತುಕೊಳ್ಳುತ್ತಾರೆ. ಹಾಗೆಯೇ ಈ ಕೂದಲುಗಳು ಯಾಕೆ ಬೆಳೆಯುತ್ತದೆ ಎಂಬ ಪ್ರಶ್ನೆ ಕೂಡ ಅನೇಕ ಬಾರಿ ನಿಮಗೆ ಮೂಡಿರಬಹುದು. ಮೂಗಿನಲ್ಲಿ ಎರಡು ರೀತಿಯ ಕೂದಲು ಬೆಳೆಯುವುದು ದೇಹದ ಪ್ರಮುಖ ಕಾರ್ಯವನ್ನು ಮಾಡಲು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಇಲ್ಲಿ ಉದ್ದನೆ ಬೆಳೆಯುವ ಕೂದಲನ್ನು-ವೈಬರಿಸೈ ಎಂದು ಕರೆಯಲಾಗುತ್ತದೆ. ಇದು ನಿಮ್ಮ ದೇಹದ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ.

ನಾವು ಆಕ್ಸಿಜನ್ ಮತ್ತು ಇಂಗಾಲದ ಡೈ ಆಕ್ಸೈಡ್​ನ್ನು ಮೂಗಿನ ಮೂಲಕ ಉಸಿರಾಡುತ್ತೇವೆ. ಈ ಉಸಿರಾಟ ಪ್ರಕ್ರಿಯೆ ವೇಳೆ ಆಕ್ಸಿಜನ್​ನೊಂದಿಗೆ ಧೂಳು, ಬ್ಯಾಕ್ಟೀರಿಯಾ ಮತ್ತು ಮಣ್ಣು ನಮ್ಮ ದೇಹ ಸೇರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಈ ಕೂದಲುಗಳು ಫಿಲ್ಟರ್​ಗಳಾಗಿ ಕಾರ್ಯ ನಿರ್ವಹಿಸುತ್ತದೆ. ಮೂಗಿನ ಮೂಲಕ ಧೂಳಿನ ಕಣಗಳು, ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಪ್ರವೇಶಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಮೂಗಿನಲ್ಲಿ ಕಡಿಮೆ ಕೂದಳಿದ್ದರೆ ಅದು ನೇರವಾಗಿ ಶ್ವಾಸಕೋಶ ಪ್ರವೇಶಿಸುತ್ತದೆ.

ಇದರಿಂದ ಅನೇಕ ರೀತಿಯ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅದೇ ವೇಳೆ ಕೂದಲುಗಳಿದ್ದರೆ ನಮ್ಮ ಉಸಿರಾಟವನ್ನು ಫಿಲ್ಟರ್ ಮಾಡುವ ಕೆಲಸ ಮಾಡುತ್ತದೆ. ಕಣ್ಣು ರೆಪ್ಪೆಗಳು ಹೇಗೆ ನಮ್ಮ ಕಣ್ಣುಗಳನ್ನು ಶುದ್ಧವಾಗಿಟ್ಟುಕೊಳ್ಳಲು ನೆರವಾಗುತ್ತದೆಯೋ, ಹಾಗೆಯೇ ಮೂಗಿನ ಕೂದಲು ನಮ್ಮ ಮೂಗನ್ನು ಸ್ವಚ್ಛವಾಗಿ ಮತ್ತು ಆರೋಗ್ಯವಾಗಿರಿಸುತ್ತದೆ. ಶ್ವಾಸಕೋಶಕ್ಕೂ ಮೂಗಿಗೂ ನೇರ ಸಂಪರ್ಕ ಇರುವುದರಿಂದ ಮೂಗಿನ ಕೂದಲು ಶ್ವಾಸಕೋಶದ ಫಿಲ್ಟರ್​ ಆಗಿ ಕಾರ್ಯ ನಿರ್ವಹಿಸುತ್ತದೆ. ಇಲ್ಲದಿದ್ದರೆ ಕಲುಷಿತ ಬ್ಯಾಕ್ಟೀರಿಯಾಗಳು ದೇಹ ಸೇರಿ ಸೋಂಕು ಉಂಟಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಮೂಗಿನ ಮೇಲಿನ ಭಾಗದಿಂದ ತುಟಿಗಳ ಎರಡು ಮೂಲೆಗಳನ್ನು ಸೇರಿಸಿದರೆ, ತ್ರೀಕೋನ ಆಕಾರ ಕಾಣಿಸುತ್ತದೆ. ಮುಖದ ಈ ಭಾಗವನ್ನು ಅತೀ ಅಪಾಯಕಾರಿ ಎನ್ನಲಾಗುತ್ತದೆ. ಕಣ್ಣು, ಮೂಗು ಮತ್ತು ಬಾಯಿಯನ್ನು ಸಂಧಿಸುವ ಈ ಭಾಗ ಬಹಳ ಸೂಕ್ಷ್ಮವಾಗಿರುತ್ತದೆ. ದೇಹದ ಅನೇಕ ಪ್ರಮುಖ ರಕ್ತನಾಳಗಳು ಮುಖದ ಈ ಭಾಗಗಳ ಮೂಲಕ ಹಾದು ಹೋಗುತ್ತವೆ. ಅಲ್ಲದೆ ಅವುಗಳು ನೇರವಾಗಿ ಮೆದುಳನ್ನು ಸಂಪರ್ಕಿಸುತ್ತದೆ. ಕಣ್ಣು, ಬಾಯಿ ಮತ್ತು ಮೂಗಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾದರೆ ನೇರವಾಗಿ ಅದು ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಂದು ಬಾರಿ ಸಣ್ಣ ಗಾಯಗಳೂ ಕೂಡ ಅಪಾಯಕಾರಿಯಾಗಿ ಪರಿಣಮಿಸಬಹುದು.

ಅಂತದರಲ್ಲಿ ನೀವು ಮೂಗಿನ ಕೂದಲನ್ನು ಕಿತ್ತುಕೊಂಡರೆ ರಕ್ತನಾಳದಲ್ಲಿ ರಂಧ್ರವಾಗಿ ರಕ್ತಸ್ರಾವ ಉಂಟಾಗಬಹುದು. ಇಲ್ಲ ಯಾವುದಾದರೂ ಸೋಂಕು ತಗುಲಬಹುದು. ಈ ವೇಳೆ ಅದು ಮುಖ ತ್ರಿಕೋನ ಭಾಗದ ರಕ್ತನಾಳಗಳ ಮೇಲೆ ನೇರ ಪರಿಣಾಮ ಬೀರಬಹುದು. ಇದರಿಂದ ವ್ಯಕ್ತಿಯ ಮೆದುಳಿಗೆ ಹಾನಿಯುಂಟಾಗಿ ಸಾವು ಕೂಡ ಸಂಭವಿಸಬಹುದು, ಅಥವಾ ಹುಚ್ಚರಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.

ಮೂಗು ಸೇತುವೆ ಇದ್ದಹಾಗೆ ಅದರಲ್ಲಿ ಸಮಸ್ಯೆ ಇದ್ದರೆ 18 ವರ್ಷದವರೆಗೆ ಕಾದು ನಂತರ ಮೂಗಿನಲ್ಲಿ ಆಪರೇಷನ್ ಮಾಡಬೇಕಾಗುತ್ತದೆ. ಕೆಲವು ಕಟಿಂಗ್ ಶಾಪ್ ಗಳಲ್ಲಿ ಹೇರ್ ಕಟಿಂಗ್ ನಂತರ ತಲೆ ಮೇಲೆ ಹೊಡೆಯುತ್ತಾರೆ ಮತ್ತು ಲಟ್ಟಿಗೆ ತೆಗೆಯುತ್ತಾರೆ ಆದರೆ ಹೀಗೆ ಮಾಡಬಾರದು ಇದರಿಂದ ಸಮಸ್ಯೆಗಳು ಉಂಟಾಗುತ್ತದೆ.

ಹೇರ್ ಕಟಿಂಗ್ ಆದನಂತರ ಲಟ್ಟಿಗೆ ತೆಗೆಯುವುದರಿಂದ ಸ್ಪೈನಲ್ ಕಾರ್ಡ್ ಗೆ ಪೆಟ್ಟು ಬಿದ್ದು ಕೈ ಮತ್ತು ಕಾಲುಗಳು ಸ್ವಾಧೀನ ಕಳೆದುಕೊಂಡ ಉದಾಹರಣೆಗಳನ್ನು ನೋಡಬಹುದು. ಕುತ್ತಿಗೆಗೆ ಹೊಡೆಯಬಾರದು ಕುತ್ತಿಗೆಯ ಭಾಗದಲ್ಲಿ ರೆಸ್ಪಿರೇಟರಿ ಸೆಂಟರ್ ಎಂದು ಇರುತ್ತದೆ ಅದಕ್ಕೆ ಪೆಟ್ಟು ಬಿದ್ದರೆ ಅಲ್ಲಿಯೆ ಸಾವನ್ನಪ್ಪುತ್ತಾರೆ ಹಾಗೂ ವಾಹನಗಳಲ್ಲಿ ಚಲಾಯಿಸುವವರು ದಯವಿಟ್ಟು ಹೆಲ್ಮೆಟ್ ಗಳನ್ನು ಧರಿಸಿ ಎಂದು ಅಂಜನಪ್ಪ ಅವರು ಜನರಿಗೆ ತಿಳಿಸಿದರು.

ಕಪಾಳಕ್ಕೆ ಹೊಡೆಯಬಾರದು ಇದರಿಂದ ಹೃದಯ ನಿಂತು ಹೋಗುವ ಸಂಭವವಿರುತ್ತದೆ. ಬ್ರೇನ್ ಇಂದ ಹೃದಯಕ್ಕೆ ವೇಗಸ್ ನರ್ವ್ ಎಂಬ ನರ ಇರುತ್ತದೆ ಆದ್ದರಿಂದ ಕಪಾಳಕ್ಕೆ ಹೊಡೆದರೆ ಹೃದಯ ತನ್ನ ಕೆಲಸವನ್ನು ನಿಲ್ಲಿಸಿ ಬಿಡುತ್ತದೆ. ಬಾಯಿಯಲ್ಲಿ ಟಾನ್ಸಿಲ್ ಎಂದು ದ್ವಾರಪಾಲಕರು ಇರುತ್ತಾರೆ ನಾವು ತೆಗೆದುಕೊಂಡ ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಮತ್ತು ತೆಗೆದುಕೊಂಡ ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಫಿಲ್ಟರ್ ಮಾಡುತ್ತದೆ. ಮಕ್ಕಳಿಗೆ ಆಗಾಗ ಗಂಟಲು ನೋವು ಬರುವುದು ಸಹಜ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿನ ಕೆಲವು ಸರಳ ವಿಚಾರಗಳು ಎಲ್ಲರಿಗೂ ಗೊತ್ತಿರುವುದಿಲ್ಲ ಈ ಸರಳ ವಿಚಾರಗಳನ್ನು ಈ ಮೂಲಕ ತಿಳಿಸಲು ಡಾಕ್ಟರ್ ಅಂಜನಪ್ಪ ಅವರು ಪ್ರಯತ್ನಿಸಿದ್ದಾರೆ. ಅವರು ವಿಜ್ಞಾನ ಆರೋಗ್ಯದಲ್ಲಿ ಬಹಳ ಮುಖ್ಯವಾಗಿದೆ. ಕೆಲವು ಸರಳ ವಿಚಾರಗಳಾದರೂ ಮುಖ್ಯವಾದ ಜ್ಞಾನವನ್ನು ಕೊಡುತ್ತದೆ. ಈ ವಿಚಾರದ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಒಳ್ಳೆಯದು ಎಂದು ಹೇಳಿದರು ಆದ್ದರಿಂದ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಆರೋಗ್ಯವಾಗಿರಿ.

Leave A Reply

Your email address will not be published.