ಇಂದಿನ ಕಾನೂನು ವ್ಯವಸ್ಥೆ ತುಂಬಾ ಬದಲಾವಣೆ ಆಗಿದೆ ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧಿಕಾರಿ ಆಗಿರುವ ಬಿ ಬೀರಪ್ಪ ಅವರು 1961 ಜೂನ್ 1 ರಂದು ಜನನ ಇನ್ನೂ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಶ್ರೀನಿವಾಸಪುರ ಕೋಲಾರ ಅಲ್ಲಿ ಮುಗಿಸಿ ತಮ್ಮ ಕಾನೂನು ಬಗ್ಗೆ ಎಲ್ಎಲ್ ಬಿ ಅನ್ನು ಶ್ರೀ ರೇಣುಕಾಚಾರ್ಯ ಲಾ ಕಾಲೇಜು ಬೆಂಗಳೂರು ಅಲ್ಲಿ ಮುಗಿಸಿದರು ನಂತರ ಎಂ ಎಸ್ ಗೋಪಾಲ್ ಹಿರಿಯ ವಕೀಲರು ಅವರ ಬಳಿ ಕಾನೂನಿನ ಬಗ್ಗೆ ತರಬೇತಿ ಪಡೆದು ಸುಮಾರು ವರ್ಷ ಕಾಲ ಸರಕಾರಿ ವಕೀಲ ಆಗಿ ಕಾರ್ಯ ನಿರ್ವಹಿಸಿದರು ಇವರು ಉತ್ತಮ ಕ್ರೀಡಾಪಟು ಹಾಗೂ ದೇಹದಾರ್ಢ್ಯ ಸ್ಪರ್ಧೆ ಅಲ್ಲಿ ಬಹುಮಾನವನ್ನು ಪಡೆದಿದ್ದಾರೆ.

ಇತ್ತೀಚೆಗೆ ಸರಕಾರಿ ಆಸ್ಪತ್ರೆಗೆ ಹಾಗೂ ಕಾರಾಗೃಹ ಬಗ್ಗೆ ತಿಳಿಯಲು ತಾವೇ ಸ್ವತಃ ಅಚಾನಕ್ ಆಗಿ ಭೇಟಿ ನೀಡಿ ಅಲ್ಲಿನ ಆಡಳಿತ ಹಾಗೂ ಸ್ವಚತೆ ಇನ್ನೂ ಊಟದ ವ್ಯವಸ್ಥೆಯನ್ನು ತಾವೇ ಸ್ವತಃ ಗಮನ ಹರಿಸಿದ್ದು ಅವರ ನಿಷ್ಠೆಯ ಹಾಗೂ ಪ್ರಾಮಾಣಿಕ ಕೆಲಸದ ಬಗ್ಗೆ ತಿಳಿಯಲು ಅವಕಾಶ ಆಗಿದೆ ಇಂದಿನ ದಿನಗಳಲ್ಲಿ ಹಲವಾರು ಸರಕಾರಿ ಆಸ್ಪತ್ರೆಗಳು ಹೆಸರಿಗೆ ಮಾತ್ರ ಅಲ್ಲಿ ಒಳ್ಳೆಯ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಆರೋಪದ ಮೇರೆಗೆ ಅವರ ಊರಾದ ಚಿಕ್ಕ ಬಳ್ಳಾಪುರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅಲ್ಲಿನ ಮಾದ್ಯಮ ಒಂದಿಗೆ ತಮ್ಮ ಮಾತನ್ನು ಹೇಳಿದ್ದಾರೆ ಇಲ್ಲಿ ಯಾವುದೇ ವಾರ್ಡ್ ಅಲ್ಲಿ ಶುಚಿತ್ವ ಇಲ್ಲ ಹಾಗೂ ನೂರು ಬೆಡ್ ಅಲ್ಲಿ ಆರು ಜನ ಅಷ್ಟೆ ರೋಗಿಗಳು ಇದ್ದು ದಾಖಲಾತಿ ಪುಸ್ತಕದಲ್ಲಿ ಹದಿನೆಂಟು ಜನ ವೈದ್ಯರು ಇದ್ದಾರೆ

ಆಸ್ಪತ್ರೆ ಅಲ್ಲಿ ಕೇವಲ ಇಬ್ಬರು ಹಾಜರು ಇದ್ದು ವಿಚಾರಿಸಿದರೆ ಕ್ಯಾಂಪ್ ಹೋಗಿದಾರೆ ಎಂದು ಹೇಳಿದ್ದಾರೆ ಅದನ್ನು ಪರಿಶೀಲಿಸಿದ ಮೂರು ಜನ ಮಾತ್ರ ಹೋಗಿರೋದರ ಬಗ್ಗೆ ಮಾಹಿತಿ ಇದ್ದು ಉಳಿದ ವ್ಯೆದ್ಯರ ಬಗ್ಗೆ ಮಾಹಿತಿ ಇಲ್ಲ ಇನ್ನು ಮೆಡಿಕಲ್ ಶಾಪ್ ಪೂರ್ತಿ ಧೂಳು ಕೂತಿದ್ದು ಅಲ್ಲಿನ ಮಾತ್ರೆ ಬಗ್ಗೆ ತಾವೇ ಪರಿಶೀಲಿಸಿದಾಗ ಎಲ್ಲ ಮಾತ್ರೆಯ ಅವಧಿ ಮುಗಿದಿದ್ದು ಇದರ ಬಗ್ಗೆ ಯಾರೂ ಎಚ್ಚರ ವಹಿಸಲು ಹೋಗಿಲ್ಲ

ಇದರಿಂದ ವೀರಪ್ಪ ಅವರು ತಮ್ಮ ಕ್ರೋಧವನ್ನು ವ್ಯಕ್ತ ಪಡಿಸಿದ್ದಾರೆ ಸರಕಾರ ಕೋಟಿ ಕೋಟಿ ಹಣವನ್ನು ಸರಕಾರಿ ವೈದ್ಯಕೀಯಕ್ಕೆ ನೆರವು ನೀಡಿದ್ದರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೆ ವೈದ್ಯರಿಗಳಿಗೆ ಅಷ್ಟು ಸಂಬಳವನ್ನು ಯಾಕೆ ನೀಡಬೇಕು ಎಂದು ಪ್ರಶ್ನಿಸಿದರು ಹಾಗೂ ಇನ್ನು ಚಿಂತಾಮಣಿಯ ಕಾರಾಗೃಹ ಬಗ್ಗೆ ಮಾದ್ಯಮ ಅವರು ಪ್ರಶ್ನಿಸಿದರು ಅದಕ್ಕೆ ಅಲ್ಲಿನ ವ್ಯವಸ್ಥೆ ಕೂಡ ಹದಗೆಟ್ಟಿದ್ದು ಸರಿಯಾದ ಗ್ರಂಥಾಲಯ ಇಲ್ಲ ಇನ್ನೂ ಊಟದ ವ್ಯವಸ್ಥೆ ಕೂಡ ಚೆನ್ನಾಗಿಲ್ಲ ಹಾಗೂ ಹೆಣ್ಣು ಮಕ್ಕಳ ಬಗ್ಗೆ ಕೂಡ ಅಲ್ಲಿ ಸುಮಾರು ಮಾರ್ಪಾಡು ವ್ಯವಸ್ಥೆ ಬೇಕು

ಇನ್ನು ಕೋಲಾರ ಅಲ್ಲಿನ ಸ್ಥಿತಿ ಅಂತೂ ತೀರಾ ಹದಗೆಟ್ಟಿದ್ದು ಸರಿಯಾದ ಶೌಚಾಲಯ ಇಲ್ಲ ಎಂದು ಹೇಳಿದ್ದು ಇದರ ಬಗ್ಗೆ ಪ್ರಾಮಾಣಿಕವಾಗಿ ಸರಕಾರಕ್ಕೆ ಒಂದು ಮನವಿ ಪತ್ರ ಬರೆದು ಇಲ್ಲಿನ ಸ್ಥಿತಿಗತಿ ಬಗ್ಗೆ ವಿವರ ನೀಡಿ ಇವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಮಾದ್ಯಮವು ಸಂವಿಧಾನದ ನಾಲ್ಕನೇಯ ಅಂಗ ಹಾಗಾಗಿ ನೀವು ತಮ್ಮ ಪತ್ರಿಕೆ ಹಾಗೂ ವಾಹಿನಿಯಲ್ಲಿ ಈ ವಿಷಯದ ಬಗ್ಗೆ ಹೆಚ್ಚು ತೋರಿಸಿ ಬಡಜನರು ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಜನರು ಉತ್ತಮ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ ಇವರು ಖಾಸಗಿ ಆಸ್ಪತ್ರೆಗೆ ಹೋಗಲು ಅಸಾದ್ಯ ಹಾಗಾಗಿ ಆದಷ್ಟು ಇದರ ಬಗ್ಗೆ ಗಮನ ಹರಿಸಲು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *