ಮನೆ ಕಟ್ಟೋರಿಗೆ ಶಾಕ್ ನೀಡುತ್ತಾ ಸಿಮೆಂಟ್ ಬೆಲೆ, ಬೆಲೆ ಏರಿಕೆಗೆ ಕಾರಣವೇನು ಗೊತ್ತಾ

0 1

ಹೊಸ ವರ್ಷದ ಆರಂಭದಲ್ಲೇ ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆ ಖಾತರಿಯಾಗಿದೆ. ಹೆಚ್ಚಿನ ಉತ್ಪಾದನಾ ವೆಚ್ಚದಿಂದಾಗಿ ಮುಂದಿನ ಹಣಕಾಸು ವರ್ಷಕ್ಕೆ ಪ್ರತಿ ಚೀಲ ಚಿಲ್ಲರೆ ಸಿಮೆಂಟ್ ದರ 400 ರೂ. ತಲುಪುವ ನಿರೀಕ್ಷೆಯಿದೆ. ಪ್ರತಿಯೊಂದು ಸಿಮೆಂಟ್‌ ಕಾರ್ಖಾನೆಯೂ ವೆಚ್ಚ ಹೆಚ್ಚಳದ ಹೊರೆ ಎದುರಿಸುತ್ತಿದ್ದು ಅದನ್ನು ಗ್ರಾಹಕರಿಗೆ ವರ್ಗಾಯಿಸಲು ಸಜ್ಜಾಗಿದೆ. ಇದರ ಪರಿಣಾಮ ಸಿಮೆಂಟ್‌ ದರ ಏರಿಕೆಯಾಗಲಿದೆ. ಕಲ್ಲಿದ್ದಲು ಮತ್ತು ವಿದ್ಯುತ್‌ ವೆಚ್ಚ ಹೆಚ್ಚಳವಾಗಿರುವುದು ಕಾರ್ಖಾನೆಗಳಿಗೆ ಸವಾಲಾಗಿದೆ. ಮತ್ತೊಂದು ಕಡೆ, ಉಕ್ಕು ಕೂಡ ದುಬಾರಿಯಾಗುತ್ತಿದ್ದು, ನಿರ್ಮಾಣ ವೆಚ್ಚ ಕೂಡ ಹೆಚ್ಚಾಗಲಿದೆ.

ಕಲ್ಲಿದ್ದಲು ಮತ್ತು ಡೀಸೆಲ್ ಬೆಲೆ ಏರಿಕೆಯಾದ ಬಳಿಕ ಕಳೆದ ಆಗಸ್ಟ್‌ ತಿಂಗಳಿನಲ್ಲಿ ಪ್ರತಿ ಚೀಲ ಸಿಮೆಂಟ್​ಗೆ ಸರಾಸರಿ 10-15 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಮುಂದಿನ ಕೆಲವು ತಿಂಗಳುಗಳಲ್ಲಿ ಮತ್ತೆ 15-20 ರೂಪಾಯಿಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ತಿಳಿಸಿದೆ. ಇನ್ನುಮುಂದೆ ಒಂದು ಚೀಲ ಸಿಮೆಂಟ್ ತರೋದೂ ಕಷ್ಟ ಆಗಬಹುದು ಹಾಗಾದರೆ ಎಷ್ಟು ಏರಲಿದೆ ಸಿಮೆಂಟ್ ನ ಬೆಲೆ? ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬೆಲೆ ಹೆಚ್ಚಳದ ಬಿಸಿ ಎಲ್ಲಿ ಇಲ್ಲ ಹೇಳಿ? ಇದಿಗ ಇದು ಸಿಮೆಂಟ್ಗೂ ತಗುಲಿದೆ. ಡಿಸೆಂಬರ್ ಹೊರತುಪಡಿಸಿ ಇಡೀ 2021-22 ಹಣಕಾಸು ವರ್ಷದಲ್ಲಿ ಅಖಿಲ ಭಾರತ ಚಿಲ್ಲರೆ ಸಿಮೆಂಟ್ ಬೆಲೆಗಳು ಹೆಚ್ಚಿವೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಚಂಚಲತೆ, ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಸಿಮೆಂಟ್ ಬೆಲೆಗಳ ಮೇಲೆ ಏರುತ್ತಿರುವ ಬೆಲೆಗಳ ಪರಿಣಾಮವು ದೇಶದ ನಿರ್ಮಾಣ ಚಟುವಟಿಕೆಯ ಚೇತರಿಕೆಯಲ್ಲಿಯೂ ಪ್ರತಿಫಲಿಸುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ಸಿಮೆಂಟ್ ಬೇಡಿಕೆ ಪ್ರಬಲವಾಗಿದೆ ಎಂದು ಕೇರ್ ರೇಟಿಂಗ್ಸ್ ಸಂಶೋಧನಾ ವರದಿ ತಿಳಿಸಿದೆ. ಮುಂದಿನ ದಿನಗಳಲ್ಲಿಯೂ ಈ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ. ಬೆಳೆಯುತ್ತಿರುವ ಬೇಡಿಕೆಗೆ ಅನುಗುಣವಾಗಿ ಬೆಲೆಗಳು ಸಹ ಹೆಚ್ಚಾಗಬಹುದು.

ಅಂಕಿಅಂಶಗಳ ಪ್ರಕಾರ 2021-22 ರ ಹಣಕಾಸು ವರ್ಷದಲ್ಲಿ, ಸಿಮೆಂಟ್ ವಲಯವು ಗರಿಷ್ಠ ಶೇಕಡಾ 20 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಅದೇ ವೇಳೆಗೆ ಕಳೆದ ಹಣಕಾಸು ವರ್ಷದಲ್ಲಿ ಶೇ.11ರಷ್ಟು ಕುಸಿತ ಕಂಡಿದೆ. ದೇಶದಲ್ಲಿ ನಡೆಯುತ್ತಿರುವ ಸರ್ಕಾರಿ ಮೂಲಸೌಕರ್ಯ ಕಾಮಗಾರಿಗಳಿಂದಾಗಿ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ. ಬೇಡಿಕೆಯ ಬೆಳವಣಿಗೆ ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಲಯವು ಶೇ.54 ರಷ್ಟು ಬೆಳವಣಿಗೆ ಕಂಡಿದೆ. ಈ ಪ್ರವೃತ್ತಿಯು ಅದರ ಮುಂದಿನ ತ್ರೈಮಾಸಿಕದಲ್ಲಿ 22% ಬೆಳವಣಿಗೆಯೊಂದಿಗೆ ಮುಂದುವರೆದಿದೆ.

ಮೂರನೇ ತ್ರೈಮಾಸಿಕದಲ್ಲಿ ಎನ್ಸಿಆರ್ನಲ್ಲಿನ ನಿರ್ಮಾಣ ಚಟುವಟಿಕೆಗಳಲ್ಲಿನ ಆಗುಹೋಗುಗಳ ಪರಿಣಾಮದಿಂದ ಇದು ಕುಸಿತವನ್ನು ಅನುಭವಿಸಿತು. ಆದರೂ ಅದರ ನಂತರದ ನಾಲ್ಕನೇ ತ್ರೈಮಾಸಿಕದಲ್ಲಿ ಇದು ಮತ್ತೊಮ್ಮೆ ಶೇಕಡಾ 13 ರಷ್ಟು ಏರಿದೆ. ದೇಶದಲ್ಲಿ ಗ್ರಾಮೀಣ ವಸತಿ ಹಾಗೂ ಮಧ್ಯ ಮತ್ತು ದಕ್ಷಿಣ ಭಾರತದಲ್ಲಿನ ಮೂಲಸೌಕರ್ಯ ಚಟುವಟಿಕೆಗಳಲ್ಲಿ ಹೆಚ್ಚಳ ಆಗಿದೆ. ಪೂರ್ವ ಮತ್ತು ಪಶ್ಚಿಮದ ವ್ಯಾಪ್ತಿಯಲ್ಲಿಯೂ ಬೇಡಿಕೆ ಇದೆ. ಡಿಸೆಂಬರ್ ಹೊರತುಪಡಿಸಿ ಇಡೀ 2021-22 ಹಣಕಾಸು ವರ್ಷದಲ್ಲಿ ಅಖಿಲ ಭಾರತ ಚಿಲ್ಲರೆ ಸಿಮೆಂಟ್ ಬೆಲೆಗಳು ಹೆಚ್ಚಿವೆ. ಆದರೆ ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.23ರಷ್ಟು ಪ್ರಗತಿ ಸಾಧಿಸಿದೆ.

ತಜ್ಞರ ಪ್ರಕಾರ ಬೆಲೆ ಏರಿಕೆಗೆ ಮುಖ್ಯ ಕಾರಣವೆಂದರೆ ರಷ್ಯಾ-ಉಕ್ರೇನ್ ಯುದ್ಧ ಮತ್ತು ಏರುತ್ತಿರುವ ತೈಲ ಬೆಲೆಗಳು. ಈ ಅಂಶಗಳು ಸಿಮೆಂಟ್ ಉತ್ಪಾದನೆಯ ವೆಚ್ಚದ ಮೇಲೆ ಪರಿಣಾಮ ಬೀರುತ್ತವೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತವಾಗಿದೆ. 2022-23ನೇ ಹಣಕಾಸು ವರ್ಷದಲ್ಲಿ ಸಿಮೆಂಟ್ಗೆ ಬೇಡಿಕೆ ಹೆಚ್ಚುತ್ತಿದೆ. ಅಲ್ಲದೆ, ಅಲ್ಪಾವಧಿಯಲ್ಲಿ ಸಿಮೆಂಟ್ ಉತ್ಪಾದಕರ ಮೇಲೆ ಹೆಚ್ಚುತ್ತಿರುವ ವೆಚ್ಚದ ಒತ್ತಡದಿಂದಾಗಿ ಗ್ರಾಹಕರಿಗೆ ಹೊರೆಯಾಗಲಿದೆ.

Leave A Reply

Your email address will not be published.