ಗುರು ಬದಲಾವಣೆ ಈ ರಾಶಿಯವರಿಗೆ ಬಂಪರ್ ಅದೃಷ್ಟ ಯೋಗ

0 4

ಸೌರವ್ಯೂಹದಲ್ಲಿನ ಗ್ರಹಗಳ ಚಲನೆಯಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ ಉಂಟಾಗುತ್ತದೆ. ದ್ವಾದಶ ರಾಶಿಗಳಲ್ಲಿ ಜನಿಸಿದವರು ತಮ್ಮ ತಮ್ಮ ರಾಶಿಗನುಗುಣವಾಗಿ ಗುರುವಿನಿಂದ ಫಲಗಳನ್ನು ಪಡೆಯುತ್ತಾರೆ. ಗುರುವಿನ ಸಂಚಾರದಿಂದ ಕೆಲವು ರಾಶಿಗೆ ಒಳ್ಳೆಯದಾದರೆ ಇನ್ನು ಕೆಲವು ರಾಶಿಯವರಿಗೆ ಉತ್ತಮ ಫಲ ಸಿಗುವುದಿಲ್ಲ. ಹಾಗಾದರೆ ಗುರು ಸಂಚಾರದಿಂದ ಯಾವ ರಾಶಿಯವರಿಗೆ ಒಳ್ಳೆಯದಾಗುತ್ತದೆ, ಯಾವ ರಾಶಿಯವರಿಗೆ ಕೆಟ್ಟಫಲ ಸಿಗುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಗ್ರಹಗಳು ಚಲನೆ ಆಗುತ್ತಿರುತ್ತದೆ, ಗುರು ಪ್ರತಿ ವರ್ಷ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುತ್ತಾನೆ. ರಾಹು ಕೇತು ಒಂದು ವರ್ಷಕ್ಕೆ ಒಂದು ಮನೆಯಿಂದ ಇನ್ನೊಂದು ಮನೆಗೆ ಚಲಿಸುತ್ತಾರೆ. ಎರಡು ವರೆ ವರ್ಷಕ್ಕೆ ಶನಿ ಒಂದು ಮನೆಯಿಂದ ಇನ್ನೊಂದು ಮನೆಗೆ ಚಲನೆಯಾಗುತ್ತದೆ. ಕುಂಭ ರಾಶಿಯಿಂದ ಮೀನ ರಾಶಿಗೆ ಗುರು ಪ್ರವೇಶ ಮಾಡುತ್ತಾನೆ. ಗುರುಬಲ ಇದ್ದಾಗ ನಾವು ಯಶಸ್ಸು ಪಡೆಯುತ್ತೇವೆ. ರಾಶಿಗಳ ಮೇಲೆ ಗುರುಬಲ ಹೇಗಿದೆ ಎಂಬುದನ್ನು ನೋಡಬೇಕು. ಏಪ್ರಿಲ್ 13,2022 ರಂದು 7 ಗಂಟೆ 50 ನಿಮಿಷ ರಾತ್ರಿ ಗುರು ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚಾರ ಮಾಡುತ್ತಾನೆ. ಎರಡನೆ ಮನೆಯಲ್ಲಿ ಗುರು ಇದ್ದಾಗ ಮಾತನಾಡಲು, ಜೀವನದಲ್ಲಿ ಶಕ್ತಿ ಸಿಗುತ್ತದೆ. ಗುರುಬಲ ಐದನೆ ಮನೆಗೆ ಬಂದಾಗ ಸಂತಾನ ಭಾಗ್ಯ, ಸಂತಾನ ಸುಖ ಸಿಗುತ್ತದೆ. ಏಳನೆ ಮನೆಗೆ ಬಂದಾಗ ಸಾಧ್ಯ ಆದಷ್ಟು ವಿವಾಹ, ಪಾರ್ಟ್ನರ್ ಶಿಪ್ ಮನೆಯಲ್ಲಿ ಶುಭ ವಿಚಾರಗಳು ನಡೆಯುತ್ತದೆ. ಒಂಭತ್ತನೆ ಮನೆಯಲ್ಲಿ ಹೊಸ ಮನೆಯ ಗ್ರಹಪ್ರವೇಶ ನಡೆಯುವುದು, ಹನ್ನೊಂದನೆ ಮನೆಯಲ್ಲಿ ದುಡ್ಡು, ವೈಭೋಗ, ಸನ್ಮಾನ ನಡೆಯುವುದು. 12 ನೇ ಮನೆಗೆ ಮೋಕ್ಷ ಸ್ಥಾನ ಎಂದು ಹೇಳುತ್ತೇವೆ ನಿದ್ದೆಗೆ ಸಹಾಯಮಾಡುತ್ತದೆ.

ಗುರು 12ನೇ ಮನೆಗೆ ಸಂಚಾರ ಮಾಡುವುದರಿಂದ ಮೇಷ ರಾಶಿಯವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ನೋಡುವುದಾದರೆ ಮೇಷ ರಾಶಿಯ ವ್ಯಕ್ತಿಗೆ ವಿಮಲ ಯೋಗ ಎಂದರೆ ಸತ್ತಮೇಲೂ ಅಜರಾಮರ ಆಗಿರುವಂತಹ ಯೋಗವಿರುತ್ತದೆ. ಪಿತ್ರಾರ್ಜಿತ ಆಸ್ತಿ ಬರುವ ಸಂಭವ ಇರುತ್ತದೆ. ದಾನ ಮಾಡುವುದು, ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಸಹಾಯ ಮಾಡುವುದರಿಂದ ಒಳ್ಳೆಯದಾಗುತ್ತದೆ. ಪ್ರತಿದಿನ ಶ್ರೀಗಂಧವನ್ನು ಹಣೆಗೆ ಇಟ್ಟುಕೊಳ್ಳಬೇಕು. ವೃಷಭ ರಾಶಿಯವರಿಗೆ ವಿವಾಹ, ಸಂತಾನ, ಕೋರ್ಟ್ ಕೇಸ್ ವಿಷಯದಲ್ಲಿ ಉತ್ತಮ ರಿಸಲ್ಟ್ ಸಿಗುತ್ತದೆ. ಗೋಶಾಲೆಗಳಿಗೆ ದಾನ ಮಾಡುವುದರಿಂದ ವೃಷಭ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಕೇರಳದಲ್ಲಿರುವ ಗುರುವಾಯೂರು ಕೃಷ್ಣ ದೇವಸ್ಥಾನಕ್ಕೆ ಬೆಣ್ಣೆ ದಾನ ಮಾಡುವುದು ಒಳ್ಳೆಯದು. ಮಿಥುನ ರಾಶಿಯವರಿಗೆ ಅವರು ಮಾಡಿರುವ ಕರ್ಮಗಳಿಗೆ ಅನುಗುಣವಾಗಿ ಒಳ್ಳೆಯದು-ಕೆಟ್ಟದ್ದು ಆಗುತ್ತದೆ. ಉದ್ಯೋಗದಲ್ಲಿ ಪ್ರಮೋಷನ್, ಸಂಬಳ ಹೆಚ್ಚು ಸಿಗಬಹುದು. ಭೂಮಿಗೆ ಇನ್ವೆಸ್ಟ್ ಮಾಡುವ ಮನಸ್ಸಿರುವವರು ಮಾಡಬಹುದು. ಮಿಥುನ ರಾಶಿಯವರು ರಾಮೇಶ್ವರಂನಲ್ಲಿ ನದಿ ಸ್ನಾನ ಮಾಡಬೇಕು ಇದರಿಂದ ಒಳ್ಳೆಯದಾಗುತ್ತದೆ.

ಕರ್ಕಾಟಕ ರಾಶಿಯವರು ಉದ್ಯೋಗ ಅಥವಾ ಓದಲು ಬೇರೆ ದೇಶಗಳಿಗೆ ಹೋಗುವವರು ಹೋಗುತ್ತಾರೆ, ತೀರ್ಥಯಾತ್ರೆಗೆ ಹೋಗುತ್ತಾರೆ. ಮನೆಯಲ್ಲಿ ತೀರ್ಥವನ್ನು ನೀರಿಗೆ ಹಾಕಿ ನೆಲ ಒರೆಸಬೇಕಾಗುತ್ತದೆ. ಸಿಂಹ ರಾಶಿಯವರಿಗೆ ಗುರುವಿನಿಂದ ಈಗ ಅಷ್ಟು ಒಳ್ಳೆಯದಾಗುವುದಿಲ್ಲ ಹೀಗಾಗಿ ಪ್ಲಾನ್ ಮಾಡಬೇಕು ಹೆಚ್ಚೇನು ಒಳ್ಳೆಯ ಕೆಲಸಕ್ಕೆ ಕೈ ಹಾಕಬಾರದು. ಸಿಂಹ ರಾಶಿಯವರು ಅರಿಶಿಣ ಕೊಂಬನ್ನು ಶಿವ ಪಾರ್ವತಿ ದೇವಸ್ಥಾನಕ್ಕೆ ಸೋಮವಾರ ದಾನ ಮಾಡಬೇಕು ಇದರಿಂದ ಒಳ್ಳೆಯದಾಗುತ್ತದೆ. ಕನ್ಯಾ ರಾಶಿಯವರು ವಿವಾಹ, ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆ. ಕನ್ಯಾ ರಾಶಿಯವರಿಗೆ ಸಂಬಳದ ಜೊತೆಗೆ ಬೇರೆ ರೀತಿಯಲ್ಲಿ ಆದಾಯ ಬರುವ ಸಂಭವವಿದೆ. ಕನ್ಯಾ ರಾಶಿಯವರಿಗೆ ಸನ್ಮಾನ ಸಿಗುತ್ತದೆ. ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಕನ್ಯಾ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಈ ರಾಶಿಯವರ ಮನೆಯಲ್ಲಿ ಒಂಟೆ ಹಾಗೂ ತಾಜಮಹಲ್ ಚಿತ್ರ ಇರಬಾರದು. ತುಲಾ ರಾಶಿಯವರಿಗೆ ಸೇವಿಂಗ್ಸ್ ಮಾಡಲು ಆಗುವುದಿಲ್ಲ ಹಣ ಖರ್ಚಾಗುತ್ತದೆ. ಆರೋಗ್ಯದ ಕಡೆ ಗಮನ ಕೊಡಬೇಕು. ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ.

ವೃಶ್ಚಿಕ ರಾಶಿಯವರಿಗೆ ವರ್ಗಾವಣೆ ಮಾಡುತ್ತಾರೆ ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಕಷ್ಟವಾಗುತ್ತದೆ. ಈ ರಾಶಿಯವರು ಅನಾಥಾಶ್ರಮಗಳಿಗೆ ಸ್ಟಡಿ ಮಟೀರಿಯಲ್ಸ್ ಕೊಡುವುದರಿಂದ ಒಳ್ಳೆಯದಾಗುತ್ತದೆ. ಧನು ರಾಶಿಯವರಿಗೆ ವಾಹನ, ಮನೆ ಖರೀದಿಸುವ ಯೋಗವಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ಈಗ ಸರಿಯಾಗುತ್ತದೆ. ಬೆಳ್ಳಿಯ ಬಾಕ್ಸ್ ನಲ್ಲಿ ಚಿಕ್ಕ ಬಾಟಲ್ ಜೇನುತುಪ್ಪ ಇಟ್ಟು ಮನೆಯಲ್ಲಿ ಲಾಕರ್ ನಲ್ಲಿ ಒಂದು ವರ್ಷ ಇಡುವುದರಿಂದ ಒಳ್ಳೆಯದಾಗುತ್ತದೆ. ಮಕರ ರಾಶಿಯವರು ಯಾವುದೆ ಕೆಲಸ ಮಾಡಿದರೂ ಬಹಳ ನಿಧಾನ, ಆರ್ಥಿಕವಾಗಿ ನಷ್ಟ, ಈ ರಾಶಿಯವರು ಯಾವುದೊ ಕೆಲಸಕ್ಕೆ ಖರ್ಚು ಮಾಡಬೇಕು ಎಂದು ಅಂದುಕೊಂಡಿರುತ್ತಾರೆ ಇನ್ಯಾವುದೊ ಕೆಲಸಕ್ಕೆ ಖರ್ಚು ಮಾಡುತ್ತಾರೆ. ಈ ರಾಶಿಯವರು ಮಂಗಳವಾರ ದುರ್ಗಾದೇವಿ ದೇವಸ್ಥಾನಕ್ಕೆ ಅರಿಶಿನ ಬಣ್ಣದ ಲಾಡು ದಾನ ಮಾಡಬೇಕು.

ಕುಂಭ ರಾಶಿಯವರಿಗೆ ಗುರುಬಲ ಚೆನ್ನಾಗಿದ್ದು ಒಳ್ಳೆಯದಾಗುತ್ತದೆ. ಈ ರಾಶಿಯವರಿಗೆ ಮಕ್ಕಳಿಂದ ಸಂತೋಷವಾಗುತ್ತದೆ ಮಕ್ಕಳು ಫಾರಿನ್ ಗೆ ಹೋಗುವ ಸಂಭವವಿರುತ್ತದೆ. ಈ ಸಮಯ ಕುಂಭರಾಶಿಗೆ ಬಹಳ ಅದೃಷ್ಟದ ಸಮಯವಾಗಿದೆ. ಕುಂಭರಾಶಿಯವರು ಯೋಜನೆ ರೂಪಿಸಿ ಕೆಲಸಕ್ಕೆ ಕೈ ಹಾಕಬೇಕು. ಈ ರಾಶಿಯವರು ಹಯಗ್ರೀವ ಸ್ವೀಟ್ ತಯಾರಿಸಿ ಬಾಳೆಎಲೆಯಲ್ಲಿ ಹಸುವಿಗೆ ಪ್ರತಿ ಶುಕ್ರವಾರ ತಿನ್ನಿಸಬೇಕು ಇದರಿಂದ ಒಳ್ಳೆಯದಾಗುತ್ತದೆ. ಮೀನರಾಶಿಯವರಿಗೆ ಗುರುವಿನಿಂದ ಅಷ್ಟೇನೂ ಒಳ್ಳೆಯ ಫಲಗಳಿಲ್ಲ. ಈ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿಯಿಂದ ಸುಖ ಸಿಗುತ್ತದೆ. ಮೀನ ರಾಶಿಯವರು ವೃದ್ಧಾಶ್ರಮಗಳಿಗೆ ದಾನ ಕೊಡಬೇಕು. ಪರಿಹಾರಗಳನ್ನು ಒಂದು ವರ್ಷದವರೆಗೆ ಮುಂದುವರಿಸಿಕೊಂಡು ಹೋಗುವುದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.