ಪೇರಳೆ ಎಲೆಯಿಂದ ಶರೀರಕ್ಕೆ ಏನ್ ಲಾಭವಿದೆ ನೋಡಿ

0 3

ಸಾಮಾನ್ಯವಾಗಿ ಪೇರಲೆ ಹಣ್ಣು ಎಲ್ಲರಿಗೂ ಪ್ರಿಯವಾದ ಮತ್ತು ರುಚಿಯಾದ ಒಂದು ಬಗೆಯ ಹಣ್ಣಾಗಿದೆ. ಇದನ್ನು ತಿನ್ನದವರು ಇಲ್ಲ.ಪೇರಲೆ ಹಣ್ಣಿನಲ್ಲಿರುವ ವಿಟಮಿನ್ ಸಿ ಇರುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ.  ಪೇರಲೆ ಹಣ್ಣಿನಲ್ಲಿರುವ ಔಷದ ಗುಣಗಳ ಹಾಗೆ ಪೇರಳೆ ಗಿಡದ ಎಲೆ ಗಳು ಕೂಡ ಅನೇಕ ಔಷಧ ಗುಣಗಳನ್ನು ಹೊಂದಿದೆ ಎಂದು ವೈಜ್ಞಾನಿಕವಾಗಿ ಆಗಿ ಕೂಡ ಸಾಬೀತಾಗಿದೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇದರಿಂದ ದೇಹಕ್ಕೆ ಬೇಕಾದ ನ್ಯೂಟ್ರಿಷಿಯನ್ ಗಳು ಮತ್ತು ನೋವುಗಳು,ಊತದ ಸಮಸ್ಯೆಗಳನ್ನು ಕಡಿಮೆ ಮಾಡುವಂತಹ ಔಷಧಿಗುಣಗಳನ್ನು ಹೊಂದಿದೆ.ಇದರಲ್ಲಿ ಮುಖ್ಯವಾಗಿ ಕೆಮ್ಮು,ನೆಗಡಿ,ಉಸಿರಾಟದ ಸಮಸ್ಯೆ, ಹಲ್ಲು ನೋವು, ವಸಡಿನ ನೋವುಗಳನ್ನು ಕಡಿಮೆ ಮಾಡುವ ಗುಣವನ್ನು ಪೇರಲೆ ಎಲೆ ಹೊಂದಿದೆ. ಪೇರಲೆ ಎಲೆಯಿಂದ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಎಲೆಗಳಲ್ಲಿ ಪೊಟಾಶಿಯಂ ಮತ್ತು ಫೈಬರ್ ಹೆಚ್ಚಾಗಿರುತ್ತದೆ. ಪ್ರತಿದಿನ ಬೆಳಿಗ್ಗೆ ಎಲೆಗಳನ್ನು ಅಥವಾ ಎಲೆಗಳ ಕಷಾಯವನ್ನು ಮಾಡಿ ಸೇವಿಸಿದರೆ ಶುಗರ್ ಲೆವೆಲ್ ಅನ್ನು ಹತೋಟಿಯಲ್ಲಿ  ಇಟ್ಟುಕೊಳ್ಳಬಹುದು.

ಊಟವಾದ ನಂತರ ಈ ಕಷಾಯವನ್ನು ಸೇವಿಸಿದರೆ ಡಯಾಬಿಟಿಸ್ ನಂತಹ ಸಮಸ್ಯೆಗಳಿಂದ ಹೊರ ಬರಬಹುದು. ಇದರಲ್ಲಿರುವ ಪೊಟ್ಯಾಶಿಯಂ ಮತ್ತು ಡೈಟರಿ  ಫೈಬರ್ ಎನ್ನುವುದು ನಮ್ಮ ಹೃದಯಕ್ಕೆ ಎಷ್ಟೋ ಮೇಲು ಮಾಡಿ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡಿ ಬ್ಲಒಳ್ಳೆಯ ಕೊಲೆಸ್ಟ್ರಾಲ್ಗಳು ಬೆಳೆಯುವ ರೀತಿಯಲ್ಲಿ ಮಾಡುತ್ತದೆ. ಇದರಿಂದ ಹೃದಯಕ್ಕೆ ಆಗುವ ಹೈ ಬಿಪಿ  ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇನ್ನೂ ಹೆಣ್ಣುಮಕ್ಕಳು ಪಿರಿಯಡ್ ಸಮಯದಲ್ಲಿ ಹೊಟ್ಟೆನೋವಿನಿಂದ ಬಾಧೆ ಪಡುತ್ತಿರುತ್ತಾರೆ. ಇಂತವರು ಪೇರಲೆ ಎಲೆಯ ಕಷಾಯವನ್ನು ಮಾಡಿ ಕುಡಿದರೆ ರಿಲೀಫ್ ಆಗುತ್ತಾರೆ.

ಎಲೆಯಲ್ಲಿರುವ ಡೈಟರಿ  ಫೈಬರ್ ಶಕ್ತಿಯು  ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಅಜೀರ್ಣದ ಸಮಸ್ಯೆಯಿಂದ ವಾಂತಿ ಆಗುತ್ತಿದ್ದರೆ ಪೇರಲ ಎಲೆಯ ಟೀ  ಮಾಡಿ ಕುಡಿಯುವುದರಿಂದ ತಕ್ಷಣ ವಾಂತಿ ನಿಲ್ಲುತ್ತದೆ ಮತ್ತು ದೇಹ ಡಿ ಹೈಡ್ರೇಟ್ ಆಗುವುದನ್ನು ತಡೆಯುತ್ತದೆ. ದಿನ ಬೆಳಿಗ್ಗೆ ಪೇರಲೆ ಎಲೆಯನ್ನು ಅಥವಾ ಪೇರಲೆ ಎಲೆಯ ಕಷಾಯವನ್ನು ಸೇವಿಸುವುದರಿಂದ ಕ್ಯಾನ್ಸರ್ ನಂತಹ ಮಹಾಮಾರಿ ರೋಗವು ಬರದಂತೆ ತಡೆಯಬಹುದು. ಕ್ಯಾನ್ಸರ್ ರೋಗಿಗಳು ಉಪಯೋಗಿಸುವಂತಹ ಔಷಧಿಗಳ ಪರಿಣಾಮಗಳು  ಮತ್ತು  ಅಡ್ಡ ಪರಿಣಾಮಗಳನ್ನು ಕಡಿಮೆಮಾಡಿಕೊಳ್ಳಲು ಇದರ ಕಷಾಯವನ್ನು ಸೇವಿಸಿದರೆ ಉತ್ತಮ. ಇದರಲ್ಲಿ ವಿಟಮಿನ್ ಸಿ ಇರುವ ಕಾರಣ ಇದು ಕಾಯಿಲೆಗಳ ಜೊತೆ,ಇನ್ಫೆಕ್ಷನ್ ಗಳ ಜೊತೆ, ಹೋರಾಡಲು ಸಹಾಯಮಾಡುತ್ತದೆ.

ಇದನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ  ಶಕ್ತಿಯನ್ನು ಹೆಚ್ಚಿಸಿ ರೋಗಗಳು ಬರದಂತೆ ನೋಡಿಕೊಳ್ಳಬಹುದು.ಪೇರಲೆ ಎಲೆಗಳಿಂದ ಚರ್ಮದ ಸಮಸ್ಯೆಗಳು ಅಂದರೆ ಮೊಡವೆ ಕಲೆಗಳನ್ನು, ಡೆಡ್ ಸೆಲ್ವ್ಸ್ ಹೆಚ್ಚಾಗುವುದು ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲು ಪೇರಲೆ ಎಲೆಯ ಪೇಸ್ಟ್ ಮಾಡಿ ಹಚ್ಚುವುದರಿಂದ ಚರ್ಮವು ಸಂಪೂರ್ಣ ಸ್ವಚ್ಛವಾಗಿ ಚರ್ಮದ  ಸಮಸ್ಯೆಯಿಂದ ದೂರವಾಗಬಹುದು. ಪೇರಲೆ ಎಲೆಯನ್ನು ಸೇವಿಸುವುದರಿಂದ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು.ಹೀಗೆ ಅನೇಕ ಆರೋಗ್ಯಕರ ಔಷಧ ಗುಣಗಳನ್ನು ಪೇರಲೆ ಎಲೆ ಹೊಂದಿದೆ. ಇದರನ್ನು ಸೇವಿಸಿ ಪ್ರತಿಯೊಬ್ಬರೂ ನೈಸರ್ಗಿಕವಾಗಿ ಸಿಗುವಂತಹ ಔಷಧಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕು.

Leave A Reply

Your email address will not be published.