ಚರ್ಮರೋಗಗಳು ಕೆಲವರಿಗೆ ಉಂಟಾಗುತ್ತದೆ. ಕೆಲವರಿಗೆ ಸ್ವಚ್ಛತೆಯ ಇರದಿದ್ದಲ್ಲಿ ಉಂಟಾಗಬಹುದು. ಹಾಗೆಯೇ ಕೆಲವರಿಗೆ ವಂಶಪಾರಂಪರಿಕವಾಗಿ ಬರುತ್ತದೆ. ಹಾಗೆಯೇ ಸೋಂಕುಗಳಿಂದ ಚರ್ಮ ರೋಗಗಳು ಉಂಟಾಗುತ್ತವೆ. ಇದಕ್ಕಾಗಿ ವೈದ್ಯರ ಹತ್ತಿರ ಹೋದರೆ ಅತಿ ಹೆಚ್ಚು ಹಣದ ಅವಶ್ಯಕತೆ ಇರುತ್ತದೆ. ಆದ್ದರಿಂದ ಚರ್ಮ ರೋಗ ನಿವಾರಣೆಯಾಗಲು ಮನೆಯಲ್ಲಿ ಮಾಡುವ ಸುಲಭದ ಪರಿಹಾರದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿ ಎಷ್ಟೋ ರೋಗಗಳಿಗೆ ಔಷಧಿಯನ್ನು ಪಡೆಯಬಹುದು. ಹಾಗೆಯೇ ಚರ್ಮ ರೋಗಕ್ಕೂ ಕೂಡ ಮನೆಯಲ್ಲಿ ಔಷಧಿಯನ್ನು ತಯಾರಿಸಿಕೊಳ್ಳಬಹುದು. ಮೊದಲನೆಯದಾಗಿ ಈ ಔಷಧ ತಯಾರಿಸಲು ಕೆಲವು ವಸ್ತುಗಳು ಬೇಕಾಗುತ್ತದೆ. ಅವುಗಳೆಂದರೆ ಎರಡು ಲೋಟ ನೀರು ಮತ್ತು ಕಹಿಬೇವಿನ ಸೊಪ್ಪು. ಮೊದಲು ನೀರಿನ ಜೊತೆ ಕಹಿಬೇವಿನ ಸೊಪ್ಪನ್ನು ಹಾಕಿ ಹತ್ತುನಿಮಿಷ ಕುದಿಸಬೇಕು. ನೀರಿನ ಬಣ್ಣ ಬದಲಾಗುವವರೆಗೆ ಕುದಿಸಬೇಕು.

ನಂತರ ಅದರಲ್ಲಿರುವ ಪೋಷಕಾಂಶಗಳು ಬಿಟ್ಟುಕೊಳ್ಳುತ್ತವೆ. ಇದು ನಮ್ಮ ದೇಹದಲ್ಲಿ ಆಗಿರುವ ಸೋಂಕುಗಳನ್ನು ಕಡಿಮೆಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತದೆ. ನಂತರ ಒಂದು ಚಿಕ್ಕ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಆಲಿವ್ಎಣ್ಣೆಯನ್ನು ಅಥವಾ ತೆಂಗಿನ ಎಣ್ಣೆಯನ್ನು ಬಳಸಬಹುದು. ಒಂದು ಚಮಚ ತೆಂಗಿನ ಎಣ್ಣೆ ಎರಡು ಕರ್ಪೂರವನ್ನು ಪುಡಿಮಾಡಿ ಹಾಕಿ ಮಿಶ್ರಣಮಾಡಬೇಕು. ನಂತರ ಕುದಿಸಿಟ್ಟ ಬೇವಿನ ಎಲೆ ನೀರನ್ನು ಕಜ್ಜಿಯಾದ ಜಾಗಕ್ಕೆ ಹಚ್ಚಿ ತೊಳೆಯಬೇಕು.

ನಂತರ ಕೊಬ್ಬರಿಎಣ್ಣೆ ಕರ್ಪೂರದ ಮಿಶ್ರಣವನ್ನು ಹತ್ತಿಯಲ್ಲಿ ಮಸಾಜ್ ಮಾಡಿಕೊಳ್ಳಬೇಕು. ರಾತ್ರಿ ಮಲಗುವಾಗ ಹಚ್ಚಿಕೊಂಡು ಮಲಗಿದರೆ ಬೆಳಿಗ್ಗೆ ಎದ್ದು ಅದನ್ನು ತೊಳೆದುಕೊಳ್ಳಬೇಕು. ಹೀಗೆ ವಾರದಲ್ಲಿ ಮೂರು ನಾಲ್ಕು ಬಾರಿ ಮಾಡಿದರೆ ಬೇಗನೆ ಗುಣಮುಖರಾಗಬಹುದು. ಯಾವುದೇ ರೀತಿಯ ಚರ್ಮ ರೋಗಗಳು ಇದ್ದರೂ ಸಹ ಅದನ್ನು ಆದಷ್ಟು ಬೇಗ ಶಮನಗೊಳಿಸಿಕೊಳ್ಳಬೇಕು. ಏಕೆಂದರೆ ಇದು ಅತಿಯಾದರೆ ಇದನ್ನು ಪರಿಹಾರ ಮಾಡಿಕೊಳ್ಳುವುದು ಸ್ವಲ್ಪ ಕಠಿಣವಾಗುತ್ತದೆ.

Leave a Reply

Your email address will not be published. Required fields are marked *