Gruha Jyoti Bill New Update: ಕಾಂಗ್ರೆಸ್ ಸರ್ಕಾರ ಅವರು ನೀಡಿದಂತಹ ಐದು ಗ್ಯಾರಂಟಿಯನ್ನು ಜಾರಿಗೊಳಿಸಲು ಎಲ್ಲ ಸಿದ್ದತೆಯನ್ನು ಮಾಡುತ್ತಿದ್ದಾರೆ ಅದರಂತೆ ಗೃಹ ಜ್ಯೋತಿ (Gruha Jyoti) ಯೋಜನೆ ಈಗಾಗಲೇ ಜೂನ್ 18ರಿಂದ ಪ್ರಾರಂಭವಾಗಿದ್ದು ಯಾರಾದರೂ ಅರ್ಜಿ ಸಲ್ಲಿಸುದಿದ್ದರೆ ಹೋಗಿ ಅರ್ಜಿ ಸಲ್ಲಿಸಿ ಆದರೆ ಇದಕ್ಕೆ ಯಾವುದೇ ರೀತಿಯ ಕೊನೆಯ ದಿನಾಂಕವನ್ನು ಇನ್ನು ನಿಗದಿಪಡಿಸಿಲ್ಲ.

ಮೊದಲಿಗೆ ಸೇವಾ ಸಿಂಧು ವೆಬ್ ಸೈಟ್ (Seva Sindhu web site)ಗೆ ಹೋಗಿ ಅಲ್ಲಿ ಗೃಹ ಜ್ಯೋತಿ ಯೋಜನೆ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಿರುವಂತಹ ಮಾಹಿತಿ ಭರ್ತಿ ಮಾಡುವುದರಿಂದ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಆಫ್ಲೈನ್ ನಲ್ಲಿ ಗ್ರಾಮ ಪಂಚಾಯಿತಿ ಹಾಗೂ ವಿದ್ಯುತ್ ಸರಬರಾಜು ಕಂಪನಿ ಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಸರ್ಕಾರದ ಆದೇಶದ ಪ್ರಕಾರ ಗೃಹಜ್ಯೋತಿ ಯೋಜನೆಗೆ ಫಲಾನುಭವಿಗಳಾಗಲು ಇಚ್ಚಿಸುವವರು ಜೂನ್ ತಿಂಗಳಿನವರೆಗೆ ವಿದ್ಯುತ್ ಬಿಲ್ ಅನ್ನು ಬಾಕಿ ಉಳಿಸಿಕೊಳ್ಳದೆ ಪಾರ್ವತಿಸಿರಬೇಕು. ಆದರೆ ಮೇ ತಿಂಗಳಿನಲ್ಲಿ ಬಳಸಿದ ವಿದ್ಯುತ್ ಗೆ ಜ್ಯೂನ್ ತಿಂಗಳಿನಲ್ಲಿ ಕೊಟ್ಟಿರುವ ವಿದ್ಯುತ್ ಬಿಲ್ ನಲ್ಲಿ ಭಾರಿ ವ್ಯತ್ಯಾಸವಾಗಿದೆ ಇದಕ್ಕೆ ಇಂಧನ ಇಲಾಖೆಯಿಂದ ಪ್ರತಿಕ್ರಿಯೆ ಕೂಡ ಬಂದಿದೆ. ಯಾವುದೋ ಒಂದು ತಾಂತ್ರಿಕ ದೋಷದಿಂದ ಹೀಗೆ ಆಗಿರಬಹುದು ಎಂದು ಹೇಳಿದ್ದಾರೆ.

ಕರೆಂಟ್ ಬಿಲ್ ನಲ್ಲಿ ತೋರಿಸುವ ದರ ಹಾಗೂ ಆಪ್ ನಲ್ಲಿ ತೋರಿಸುವ ದರಕ್ಕು ವ್ಯತ್ಯಾಸವಿದೆ. ಜನರು ಯಾವ ಬಿಲನ್ನು ತುಂಬಾ ಬೇಕೆಂದು ಗೊಂದಲದಲ್ಲಿದ್ದಾರೆ ತುಂಬದೇ ಇದ್ದರೆ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ ಆದಕಾರಣ ವಿದ್ಯುತ್ ಇಲಾಖೆಗೆ ಹೋಗಿ ಬಿಲ್ ಪಾವತಿಸುವುದು ಉತ್ತಮ ಅಲ್ಲಿ ನಿಮಗೆ ನಿಖರವಾದ ಮಾಹಿತಿ ಇರುತ್ತದೆ. ಮನೆ ಕರೆಂಟ್ ಬಿಲ್ 200 ಯೂನಿಟ್ ಗಿಂತ ಕೆಳಗೆ ಬರುವ ಹಾಗೆ ಉಪಯೋಗಿಸಿ ಈ ಗೃಹಜ್ಯೋತಿ ಯೋಜನೆಯ ಫಲವನ್ನು ಪಡೆದುಕೊಳ್ಳಿ. (ಇದನ್ನೂ ಓದಿ) Property Rights: ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲ ಪಾಲಿದೆ? ಹೆಣ್ಣು ಮಕ್ಕಳಿಗೆ ಬರುವ ಪಾಲೆಷ್ಟು ಇಲ್ಲಿದೆ ಮಾಹಿತಿ

By

Leave a Reply

Your email address will not be published. Required fields are marked *