Property Rights: ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲ ಪಾಲಿದೆ? ಹೆಣ್ಣು ಮಕ್ಕಳಿಗೆ ಬರುವ ಪಾಲೆಷ್ಟು ಇಲ್ಲಿದೆ ಮಾಹಿತಿ

0 782

Property Rights: ಆಸ್ತಿಯಲ್ಲಿ ಎಷ್ಟೆಲ್ಲ ಪಾಲು ಸಿಗುತ್ತದೆ ಎನ್ನುವ ಜ್ಞಾನದ ಮೇರೆಗೆ ಸಾಕಷ್ಟು ಹೆಣ್ಣು ಮಕ್ಕಳು ಕೂಡ ತಂದೆ ತಾಯಿ ಹಾಗೂ ಪೂರ್ವಜರ ಆಸ್ತಿಗಳಲ್ಲಿ ಹೆಣ್ಣು ಮಕ್ಕಳು ಇತ್ತೀಚಿನ ದಿನಗಳಲ್ಲಿ ಪಾಲು ಪಡೆದುಕೊಳ್ಳುತ್ತಿದ್ದಾರೆ. ಭೂಮಿಯ ಬೆಲೆ ಕೋಟಿಗಟ್ಟಲೆ ಆಗುತ್ತಿರುವುದರಿಂದ ಅದರ ಮೇಲೆ ಹೆಣ್ಣು ಮಕ್ಕಳ ಕಣ್ಣು ಇರುವುದು ಕೂಡ ಸಾಮಾನ್ಯ. ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲ ಪಾಲು ಸಿಗಲಿದೆ ಹಾಗೂ ಪಿತ್ರಾರ್ಜಿತ ಆಸ್ತಿ ತಂದೆ ತಾಯಿ ಆಸ್ತಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲು ಸಿಗುತ್ತಿದೆ ಹಾಗೂ ಯಾವೆಲ್ಲ ಹಕ್ಕುಗಳಿವೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಪೂರ್ವಜರ ಆಸ್ತಿಯನ್ನು (Ancestral property) ಪಿತ್ರಾರ್ಜಿತ ಆಸ್ತಿ ಎಂದು ಹೇಳುತ್ತಾರೆ ಹಾಗೂ ಸ್ವಂತ ದುಡಿಮೆಯಿಂದ ಖರೀದಿಸಿದ್ದನ್ನು ಸ್ವಯಾರ್ಜಿತ ಆಸ್ತಿ ಎಂದು ಕರೆಯಲಾಗುತ್ತದೆ. ಪಿತ್ರಾರ್ಜಿತ ಬಂದ ಆಸ್ತಿ ಗಾಗಿ ಹಲವಾರು ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರಿದ್ದು ಕುಟುಂಬದಲ್ಲಿ ಜಗಳ ಉಂಟಾಗಿ ಆಸ್ತಿಗಳು ಪ್ರಯೋಜನಕ್ಕೆ ಬಾರದಿರುವ ಹಲವು ಪ್ರಕರಣಗಳನ್ನು ನೋಡಿರಬಹುದು

ಪಿತ್ರಾರ್ಜಿತ ಆಸ್ತಿ ಕಾನೂನಿನ ಪ್ರಕಾರ ಹೇಳುವುದಾದರೆ ಒಂದು ಪೂರ್ವಿಕ ಆಸ್ತಿಯು ಪುರುಷ ವಂಶಾವಳಿಯ ನಾಲ್ಕು ತಲೆಮಾರುಗಳ ವರೆಗೆ ಅನುವಂಶೀಯವಾಗಿ ಪಡೆದ ಆಸ್ತಿ. ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಸಮಾನ ಪಾಲು ಇರುತ್ತದೆ. ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿ ಸ್ವಯಾರ್ಜಿತ ಆಸ್ತಿ ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ನಿಶ್ಚಿತವಾಗಿ ಪಾಲು ಇರುತ್ತದೆ ಆದರೆ ತಂದೆ ಆಸ್ತಿ ಯಾವ ಮೂಲದಿಂದ ದೊರಕಿದೆ ಎನ್ನುವ ಅಂಶದ ಮೇಲೆ ಅವಲಂಬಿತವಾಗಿರುತ್ತದೆ. ಸಂವಿಧಾನ ತಿದ್ದುಪಡಿಯಲ್ಲಿ ಹಾಗೂ ನ್ಯಾಯಾಲಯದಲ್ಲಿ ಇದೇ ವಿಷಯವನ್ನು ಹಲವಾರು ಬಾರಿ ಹೇಳಿದ್ದಾರೆ.

ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕಿನಲ್ಲಿ ಎರಡು ರೀತಿಯ ವರ್ಗಗಳನ್ನು ಮಾಡಲಾಗಿದೆ ಪಿತ್ರಾಜಿತ ಆಸ್ತಿ ಹಕ್ಕು ಹಾಗೂ ಸ್ವಯಾರ್ಜಿತ ಆಸ್ತಿ ಹಕ್ಕು. ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಸಮಾನ ಪಾಲು ಇರುತ್ತದೆ ಉದಾಹರಣೆಗೆ ಒಬ್ಬ ವ್ಯಕ್ತಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಇರುತ್ತಾನೆ ಅದರಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಆಗಿರುತ್ತದೆ ಅಂತ ಸಂದರ್ಭದಲ್ಲಿ ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಕೇಳಬಹುದು. ಸಾಮಾನ್ಯವಾಗಿ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ ಹುಟ್ಟಿದ ದಿನದಿಂದಲೇ ಮಕ್ಕಳಿಗೆ ತನ್ನಿಂದ ತಾನೇ ಸಮಾನತೆಯ ಹಕ್ಕು ಬರುತ್ತದೆ. ಹೆಣ್ಣು ಮಕ್ಕಳ ಆಸ್ತಿಯ ಕುರಿತು ಇರುವ ಕಾನೂನು ಬಹಳ ಸರಳವಾಗಿದ್ದು ಅರ್ಥಮಾಡಿಕೊಳ್ಳಬಹುದು.

ಕೊನೆಯದಾಗಿ ಹೇಳುವುದಾದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಪಾಲು ಇರುತ್ತದೆ. ತಾನೆ ಸ್ವಂತ ಸಂಪಾದಿಸಿದ ಆಸ್ತಿಯನ್ನು ಯಾರಿಗೂ ಬೇಕಾದರೂ ಕೊಡಬಹುದು ಆ ಆಸ್ತಿಯ ಮೇಲೆ ಯಾರಿಗೂ ಹಕ್ಕಿರುವುದಿಲ್ಲ. ತಂದೆಯು ಆಸ್ತಿಯನ್ನು ಮಾರಾಟ ಮಾಡದೆ ಮರಣ ಹೊಂದಿದ್ದರೆ ಆ ಅಸ್ತಿ ಮಕ್ಕಳು, ಹೆಂಡತಿ, ತಾಯಿಗೆ ಸಮಾನ ಪಾಲು ಸೇರುತ್ತದೆ. ತಂದೆ ಸ್ವಂತ ಮಾಡಿದ ಆಸ್ತಿ ಅವರು ಬದುಕಿದ್ದಾಗಲೇ ಆ ಆಸ್ತಿಯನ್ನು ಮಕ್ಕಳು ಕೇಳುವ ಹಾಗಿಲ್ಲ.

ಗಂಡು ಮತ್ತು ಹೆಣ್ಣು ಸಮಾನವಾಗಿದ್ದು ಅದರಂತೆ ಮಕ್ಕಳಿಗೆ ಆಸ್ತಿಯಲ್ಲೂ ಸಮಪಾಲು ಇರುತ್ತದೆ ಕುಟುಂಬದಲ್ಲಿ ಬಾಂಧವ್ಯ ಹಾಳಾಗದಂತೆ ಹೆಣ್ಣು ಮಕ್ಕಳು ತಮ್ಮ ಹಕ್ಕನ್ನ ವಿನಯವಾಗಿ ಕೇಳಬೇಕು. ಒಂದು ವೇಳೆ ತಂದೆ ಆಸ್ತಿಯಲ್ಲಿ ಪಾಲು ಸಿಗದಿದ್ದಾಗ ರಾಜಸಂಧಾನ ಮಾಡಿಸುವುದು ಅಲ್ಲೂ ನಿಮಗೆ ನ್ಯಾಯ ಸಿಗದಿದ್ದರೆ ನ್ಯಾಯಾಲಯದಲ್ಲಿ ವಿಭಾಗದಾವೆ ಹಾಕಬಹುದು. ತಂದೆ ತಾಯಿಯ ನೋಡಿಕೊಳ್ಳುವ ಜವಾಬ್ದಾರಿ ಕೇವಲ ಗಂಡು ಮಕ್ಕಳಿಗೆ ಇರುತ್ತದೆ ಎಂದು ಭಾವಿಸಬಾರದು ಹೊಣೆಗಾರಿಕೆಯಿಂದ ಜಾರಿಕೊಳ್ಳುವಂತ್ತಿಲ್ಲ ಪಾಲಕರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಎಲ್ಲಾ ಆಗೂ ಹೋಗುಗಳಲ್ಲಿ ಮಹಿಳೆಯರ ಜವಾಬ್ದಾರಿ ಗಂಡಿನಂತೆ ಇರುತ್ತದೆ.

ಪಾಲಕರನ್ನು ನೋಡಿಕೊಳ್ಳುವುದರ ಜೊತೆಗೆ ಅವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸುವುದು ಮಕ್ಕಳ ಹೊಣೆಗಾರಿಕೆಯಾಗಿದೆ. ಆಸ್ತಿಯ ಮೇಲೆ ಯಾವುದಾದರು ಸಾಲ ಇದ್ದಲ್ಲಿ ಅದನ್ನು ಮಗ ಹಾಗೂ ಮಗಳು ತೀರಿಸಬೇಕು.

Leave A Reply

Your email address will not be published.