ಹುಬ್ಬಳ್ಳಿ ರೈಲ್ವೆ ನೇಮಕಾತಿ 2024 ಸೌಥ್ ವೆಸ್ಟರ್ನ್ ರೈಲ್ವೆ ಟೀಚರ್ ರೆಕ್ರೂಟ್ಮೆಂಟ್ ( South Western Railway Teacher recruitment ) ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಇಬ್ಬರು ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಕರ್ನಾಟಕದ ಯಾವುದೇ ಭಾಗದಲ್ಲಿ ವಾಸ ಇರುವವರು ಅರ್ಜಿ ಸಲ್ಲಿಕೆ ಮಾಡಬಹುದು. ನೈರುತ್ಯ ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗ ಹುಬ್ಬಳ್ಳಿಯ ಗದಗ ರಸ್ತೆಯ ರೈಲ್ವೆ ಪ್ರೌಢಶಾಲೆ (ಆಂಗ್ಲ ಮಾಧ್ಯಮ) ಯಲ್ಲಿ ಖಾಲಿ ಇರುವ ಜಿಟಿ ಶಿಕ್ಷಕರು ಮತ್ತು ಪಿಆರ್ ಶಿಕ್ಷಕರ ಹುದ್ದೆಗಳ ನೇಮಕಾತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಅರ್ಹತೆ ಉಳ್ಳವರು ಮತ್ತು ಆಸಕ್ತಿ ಇರುವ ಜನರು ಅರ್ಜಿ ಸಲ್ಲಿಕೆ ಮಾಡಬಹುದು. ಹುದ್ದೆ ಖಾಲಿ ಇರುವುದು ಹುಬ್ಬಳ್ಳಿಯ ವಿಭಾಗದ ನೈರುತ್ಯ ರೈಲ್ವೆ ಇಲಾಖೆಯಲ್ಲಿ. ಇಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ. ಒಟ್ಟು ಹುದ್ದೆಗಳ ಸಂಖ್ಯೆ 9. ಅರ್ಜಿಗಳನ್ನು ಆನ್ಲೈನ್ ಮುಖಾಂತರ ಸಲ್ಲಿಕೆ ಮಾಡಬೇಕು.

ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ:-

  • ಜಿಟಿ ಶಿಕ್ಷಕರು :- 4
  • ಪಿಆರ್ ಶಿಕ್ಷಕರು :- 5

ವಿದ್ಯಾ ಅರ್ಹತೆ ( Qualification ) :-
ಬಿ.ಎ ( BA ), ಬಿ.ಎಡ್ ( B.ed. ), ಬಿ.ಎಸ್ಸಿ ( B.Sc ) ಬಿ.ಕಾಂ ( B.com ) ಮತ್ತು ದ್ವಿತೀಯ ಪಿಯುಸಿ ( PUC ) ಉತ್ತೀರ್ಣರಾಗಿ ಇರುವ ಜನರು ಅರ್ಜಿ ಸಲ್ಲಿಕೆ ಮಾಡಲು ಅರ್ಹತೆ ಹೊಂದಿರುವರು.

ವಯೋಮಿತಿ :– ಕನಿಷ್ಠ 18 ವರ್ಷ ಮತ್ತು ಗರಿಷ್ಠ 65 ವರ್ಷದ ಒಳಗಿನ ವ್ಯಕ್ತಿಗಳು ಅರ್ಜಿ ಸಲ್ಲಿಕೆ ಮಾಡಬಹುದು ಒಬಿಸಿ ( OBC ) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಹಾಗೂ ಎಸ್. ಸಿ. / ಎಸ್. ಟಿ. ( SC / ST ) ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ವೇತನ ಶ್ರೇಣಿ :-
ಮೇಲೆ ತಿಳಿಸಿರುವ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ₹30,000 – ₹60,000 ರೂ. ವರೆಗೂ ಇರುತ್ತದೆ.

ಆಯ್ಕೆ ಮಾಡುವ ವಿಧಾನ :-
ಅರ್ಜಿ ಸಲ್ಲಿಸುವ ವ್ಯಕ್ತಿಗಳನ್ನು ಅವರ ವಿದ್ಯಾ ಅರ್ಹತೆ ಮೇಲೆ ನೇರ ಸಂದರ್ಶನ ಮಾಡಿ ಆಯ್ಕೆ ಮಾಡಲಾಗುವುದು. ಯಾವುದೇ ರೀತಿಯ ಲಿಖಿತ ಪರೀಕ್ಷೆ ಮತ್ತು ಅರ್ಜಿ ಶುಲ್ಕ ಇರುವುದಿಲ್ಲ.

ಸಂದರ್ಶನ ನಡೆಯುವ ಸ್ಥಳ :-
ರೈಲ್ವೆ ಪ್ರೌಢಶಾಲೆ / ಆಂಗ್ಲ ಮಾಧ್ಯಮ, ಗದಗ ರಸ್ತೆ ಹುಬ್ಬಳ್ಳಿ – 580020.

ಸಂದರ್ಶನ ನಡೆಯುವ ದಿನಾಂಕಗಳು :-
ಜಿಟಿ ಹುದ್ದೆಗಳಿಗೆ ದಿನಾಂಕ 27/05/2024 ರಂದು ಬೆಳಿಗ್ಗೆ 10.00 ರಿಂದ ಸಂಜೆ 5:30 ರವರೆಗೂ ನೇರ ಸಂದರ್ಶನವನ್ನು ನಡೆಸಲಾಗುತ್ತದೆ. ಪಿಆರ್ ಹುದ್ದೆಗಳಿಗೆ ದಿನಾಂಕ 28/05/2024 ರಂದು ಬೆಳಿಗ್ಗೆ 10.00 ರಿಂದ ಸಂಜೆ 5:30 ರವರೆಗೂ ನೇರ ಸಂದರ್ಶನವನ್ನು ನಡೆಸಲಾಗುತ್ತದೆ.ಅರ್ಹ ಅಭ್ಯರ್ಥಿಗಳು ಅಗತ್ಯ ಇರುವ ದಾಖಲೆಗಳ ಜೊತೆಗೆ ಸಂದರ್ಶನದಲ್ಲಿ ಭಾಗವಹಿಸುವ ಮೂಲಕ ಹುದ್ದೆಗಳಿಗೆ ಆಯ್ಕೆ ಆಯಾಗಬಹುದು.

ದಾಖಲೆಗಳು :-

  • ಆಧಾರ್ ಕಾರ್ಡ್ ( Aadhar card )
  • ಪಾಸ್ಪೋರ್ಟ್ ಸೈಜ್ ಫೋಟೋ ( passport size photo )
  • ಕ್ವಾಲಿಫಿಕೇಶನ್ ಸರ್ಟಿಫಿಕೇಟ್ಸ್ ( Qualification Certificates )

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27/05/2024.
ಆಸಕ್ತಿ ಇರುವ ಮತ್ತು ಅರ್ಹತೆ ಇರುವ ಅಭ್ಯರ್ಥಿಗಳು ಕೆಲಸಕ್ಕಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!