ಕಡಲೆಬೀಜ/ ಶೇಂಗಾ ಇದನ್ನ ಬಡವರ ಬಾದಾಮಿ ಎನ್ನುತ್ತಾರೆ ಏಕೆಂದರೆ ಈ ಕಡಲೆಬೀಜ ಬಾದಾಮಿಯಲ್ಲಿರುವಷ್ಟೇ ಪೌಷ್ಠಿಕತೆಯನ್ನ ಒಳಗೊಂಡಿದೆ. ಇದರಲ್ಲಿ ಪ್ರೊಟೀನ್ ಕೊಬ್ಬು ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಇದು ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆರವಾಗುತ್ತದೆ. ಇದು ಕೇವಲ ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲ ಉತ್ತಮ ಸೌಂದರ್ಯಕ್ಕೂ ಸಹಾಯಕ. ಕಡಲೆಬೀಜದಲ್ಲಿನ ಇನ್ನಷ್ಟು ಆರೋಗ್ಯಕರ ಅಂಶಗಳು ಇಲ್ಲಿವೆ ನೋಡಿ.

ಕಡಲೆಬೀಜ ಕರುಳಿನ ಕಾಯಿಲೆಗಳನ್ನು ನಿವಾರಿಸುತ್ತದೆ. ಪ್ರತಿದಿನ ಕಡಲೆ ಬೀಜ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಹಾಗೂ ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತವೆ. ಎರಡು ದಿನಕೊಮ್ಮೆಯಾದರು ಕಡಲೆಬೀಜವನ್ನು ಸೇವಿಸಿದ್ರೆ ಹೃದಯ ಸಂಬಂಧಿ ಖಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.

ರಕ್ತ ಹೀನತೆ ಇರುವವರು ಅವಶ್ಯಕವಾಗಿ ಕಡಲೆಬೀಜವನ್ನು ಸೇವಿಸಬೇಕು. ಪ್ರತಿದಿನ ಕಡಲೆಬೀಜವನ್ನು ತಿನ್ನುವುದರಿಂದ ರಕ್ತದ ಸಮಸ್ಯೆಗಳು ಎದುರಾಗುವುದಿಲ್ಲ. ಪ್ರತಿ ದಿನ ಪುರುಷ ಹಾಗೂ ಮಹಿಳೆಯರಿಬ್ಬರು ಕಡಲೆಬೀಜವನ್ನು ಸೇವಿಸುವುದರಿಂದ ಮಿಲನ ಕ್ರಿಯೆಗೆ ಬೇಕಾಗುವಂತ ಹಾರ್ಮೋನುಗಳು ಸಮತೋಲನದಲ್ಲಿರುತ್ತವೆ. ಇದರಿಂದಾಗಿ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಗರ್ಭಿಣಿಯರಿಗೆ ಕಡಲೆಬೀಜ ಬಹಳ ಒಳ್ಳೆಯದು. ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಉತ್ತಮ ಬೆಳವಣಿಗೆಗೆ ಕಡಲೆಬೀಜದ ಪಾತ್ರ ಬಹಳ ಇದೆ, ಇದು ಮಗುವಿನ ಬೆಳವಾಗಿಗೆಗೆ ಸಹಕಾರಿ ಚರ್ಮದ ಕಾಂತಿಗೆ ಕಡಲೆಬೀಜ ಒಳ್ಳೆಯದು. ಕಡಲೆ ಬೀಜದ ಎಣ್ಣೆಯನ್ನು ಬಳಸಿ ಸಹ ನಾವು ನಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಇದ್ರಲ್ಲಿ ಒಮೆಗಾ 6 ಎಂಬ ಕೊಬ್ಬಿನಂಶವಿರುತ್ತದೆ. ಹೀಗೆ ನಾನಾ ಉಪಯೋಗಗಳನ್ನು ಕಡಲೆಕಾಯಿ ಬೀಜದಿಂದ ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!