ಮದುವೆ ಎಂಬುದು ಭಾರತದಲ್ಲಿ ಅದರಲ್ಲಿಯೂ ನಮ್ಮ ಹಿಂದೂ ಧರ್ಮದಲ್ಲಿ ಒಂದು ಪವಿತ್ರವಾದ ಕಾರ್ಯ ಒಂದು ಗಂಡಿಗೆ ಒಂದು ಹೆಣ್ಣನ್ನು ಬೆಸೆಯುವಂತಹ ಅಪರೂಪದ ಸಮ್ಮಿಲನ ಹುಟ್ಟಿದ ಪ್ರತಿಯೊಂದು ಗಂಡು ಹಾಗೂ ಹೆಣ್ಣು ಮದುವೆಯಾಗಲೇಬೇಕು ಮತ್ತು ಸಂತಾನವನ್ನು ಪಡೆಯಲೇಬೇಕು ಸಂತಾನವಿಲ್ಲದವರಿಗೆ ಸ್ವರ್ಗದಲ್ಲಿ ಜಾಗವಿಲ್ಲ ಎಂಬುದನ್ನು ನಮ್ಮ ಅಂದರೆ ಹಿಂದೂ ಧರ್ಮಶಾಸ್ತ್ರ ಹಾಗೂ ನಮ್ಮ ಪುರಾತನ ಸಂಹಿತೆಗಳು ಒತ್ತಿ ಹೇಳುತ್ತವೆ ಸಂತಾನ ಫಲವನ್ನು ಪಡೆಯುವುದು ತಮ್ಮ ಮನೆತನವನ್ನು ಪೀಳಿಗೆಯನ್ನು ಮುಂದುವರೆಸುವುದು ಹೀಗೆ ಹಲವಾರು ನಂಬಿಕೆಗಳು ನಮ್ಮಲ್ಲಿ ಅಂದಿಗೂ ಇಂದಿಗೂ ಎಂದೆಂದಿಗೂ ಹಾಸುಹೊಕ್ಕಾಗಿಯೇ ಉಳಿದುಬಿಟ್ಟಿವೆ ಮತ್ತು ಗಂಡ ಹೆಂಡಿರ ಈ ಸಂಬಂದಕ್ಕೆ ವಿಶೇಷವಾದ ಮಹತ್ವವಿದೆ ಆದ್ದರಿಂದಲೇ ಭಾರತದ ಸಂಪ್ರದಾಯ ಅಂದರೆ ಹಿಂದೂ ಸಂಪ್ರದಾಯಕ್ಕೆ ವಿಶ್ವದಾದ್ಯಂತ ಉತ್ತಮ ಸ್ಥಾನಮಾನವಿದೆ

ಇಂತಹ ಉತ್ತಮ ಸಂಬಂದವನ್ನು ಬೆಸೆದುಕೊಳ್ಳಲು ಅಂದರೆ ಮದುವೆಯಾಗಲು ಯಾವ ವಯಸ್ಸು ಸೂಕ್ತ ಎಂಬುದರ ಬಗ್ಗೆ ನಾವಿಂದು ಚರ್ಚಿಸುತ್ತಿದ್ದೇವೆ ಯಾಕಂದ್ರೆ ಬದಲಾದ ಕಾಲಮಾನದಲ್ಲಿ ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗುವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಅನೇಕರು ಬಾರದ ವಯಸ್ಸಿನಲ್ಲಿ ಅಂದರೆ ತುಂಬಾ ಚಿಕ್ಕ ವಯಸ್ಸಿನಲ್ಲೇ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗುವಂತಹ ಕಾಲ ಎದುರಾಗಿಬಿಟ್ಟಿದೆ, ಹೀಗೆ ಅಪ್ರಾಪ್ತ ವಯಸ್ಸಿನಲ್ಲಿ ಅಂದರೆ ಅತೀ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದನ್ನು ಯಾವ ಸಂಪ್ರದಾಯವೂ ಒಪ್ಪುವುದಿಲ್ಲ. ಹಾಗೆಯೇ ಯಾವ ವೈದ್ಯಕೀಯ ತಂತ್ರಜ್ಞಾನವೂ ಒಪ್ಪುವುದಿಲ್ಲ, ಯಾಕಂದ್ರೆ ಅದು ದಂಪತಿಗಳಿಬ್ಬರ ದೈಹಿಕ ಸಂಬಂದಕ್ಕೆ ಸೂಕ್ತ ವಯಸ್ಸಾಗಿರುವುದಿಲ್ಲ ಎಂಬುದು ನಮ್ಮ ಮುಂದುವರೆದ ವಿಜ್ಞಾನದ ವಾದವಾಗಿದೆ ಅಲ್ಲದೇ ಇದು ನಿಜವೂ ಹೌದು.

ಹಾಗಂತ ಅಪ್ರಾಪ್ತ ವಯಸ್ಸು ಅಂದ್ರೆ ಅತೀ ಚಿಕ್ಕ ವಯಸ್ಸು ಎಂದೂ ಕೂಡ ನಾವು ಹೇಳುವುದಿಲ್ಲ ಎಷ್ಟೋ ಜನರು ತಮ್ಮ ಆರ್ಥಿಕತೆಯನ್ನು ಬಲಿಷ್ಟಪಡಿಸಿಕೊಳ್ಳಲು ತಮ್ಮ ಗುರಿಯನ್ನು ಸಾಧಿಸಲು ಏನನ್ನೋ ಸಾಧನೆ ಮಾಡಲು ಅಂತಾನೆ ತಮ್ಮ ಜೀವನದ ಅರ್ಧ ಭಾಗವನ್ನು ಮೀಸಲಿಟ್ಟು ನಲವತ್ತು ಅಥವಾ ಐವತ್ತು ವರ್ಷ ತುಂಬಿದ ನಂತರ ಮದುವೆಯಾಗಲು ಮುಂದಾಗುತ್ತಾರೆ ಈ ರೀತಿ ಮಾಡುವವರಲ್ಲಿ ಹೆಣ್ಣು ಮಕ್ಕಳೂ ಗಂಡಸರು ಇಬ್ಬರದು ಸಮಪಾಲಿದೆ ವಯಸ್ಸು ಮೀರಿದ ನಂತರ ಮದುವೆಯಾಗುವುದನ್ನು ಸಹ ಅಪ್ರಾಪ್ತ ವಯಸ್ಸು ಎಂದೇ ಪರಿಗಣಿಸಲಾಗುತ್ತದೆ.

ಇಂತಹ ವಯಸ್ಸಿನಲ್ಲಿ ಮದುವೆಯಾಗುವುದು ಸಹ ಸೂಕ್ತವಲ್ಲ ಯಾಕಂದ್ರೆ ಸಾಕಷ್ಟು ಹೆಣ್ಣು ಮಕ್ಕಳಲ್ಲಿ ನಲವತ್ತರ ವಯಸ್ಸಿಗಾಗಲೇ ಋತುಚಕ್ರ ನಿಲ್ಲುವುದುಂಟು ಋತು ಚಕ್ರವೇ ನಿಂತರೆ ಇನ್ನೂ ಸಂತಾನ ಎಲ್ಲಿಂದ ಸಾಧ್ಯ ಈ ವಯುಯಸ್ಸಿನಲ್ಲಿ ಹೆಣ್ಣು ಮಕ್ಕಳು ಗರ್ಭ ಧರಿಸಲು ಯೋಗ್ಯರಲ್ಲ ಯಾಕಂದ್ರೆ ಅವರಲ್ಲಿ ಅಂಡಾಣುವಿನ ಉತ್ಪತ್ತಿ ಹಾಗೂ ಫಲವತ್ತತೆ ಗರ್ಭದರಿಸಲು ಯೋಗ್ಯ ಪರಿಸ್ಥಿತಿಯಲ್ಲಿ ಇರುವುದರಿಲ್ಲ ಮತ್ತೆ ಅವರ ಗರ್ಭಕೋಶ ಅವರ ಗರ್ಭವನ್ನು ಒಂಬತ್ತು ತಿಂಗಳು ತಡೆದುಕೊಳ್ಳುವುಷ್ಟೂ ಶಕ್ತಿ ಹೊಂದಿರುವುದಿಲ್ಲ.

ಹಾಗೆಯೇ ಗಂಡು ಮಕ್ಕಳಲ್ಲಿಯೂ ಕೂಡ ಅವರ ವೀರ್ಯ ಶಕ್ತಿಯುತವಾದ ವೀರ್ಯವಾಗಿರುವುದಿಲ್ಲ ಹಾಗೂ ಅವರಲ್ಲಿ ವೀರ್ಯಾಣುಗಳ ಸಮಸ್ಯೆ ಕೂಡ ಇಂತಹ ಇಳಿವಯಸ್ಸಿನಲ್ಲಿ ಉಂಟಾಗಿರುತ್ತದೆ ಇಂತಹ ಸಮಯದಲ್ಲಿ ಅವರು ಮದುವೆಯಾಗುವುದರಿಂದ ಸಂತಾನ ಫಲಕ್ಕಾಗಿ ತಮ್ಮ ಸಂಭೋಗವನ್ನು ನಡೆಸುವುದರಿಂದ ಅವರು ನೈಸರ್ಗಿಕವಾಗಿ ಸಂತಾನ ಪಡೆಯಲು ಅವರಲ್ಲಿ ಶಕ್ತಿ ಇರುವುದಿಲ್ಲ ಅಂತೆಯೇ ಸಂತಾನದ ಸಾಧ್ಯತೆಯೂ ಕೂಡ ಕಡಿಮೆ ಇರುತ್ತದೆ ಹಾಗಾಗಿ ಕೆಲವರು ಕೃತಕ ಗರ್ಭಾದಾರಣೆ ಮಾಡಿಸಿಕೊಳ್ಳುವವರಿದ್ದಾರೆ ಮತ್ತು ಪ್ರಣಾಳ ಶಿಶು ಪಡೆಯುವವರಿದ್ದಾರೆ ಇಷ್ಟೊಂದು ಪ್ರಯತ್ನ ಪಡುವುದಕ್ಕಿಂತ ಇಂತಹ ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗುವುದಕ್ಕಿಂತ ಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗುವುದು ಸೂಕ್ತ ಎಂಬುದನ್ನು ನಮ್ಮ ವೈದ್ಯಕೀಯ ವಿಜ್ಞಾನ ಸ್ಪಷ್ಟಪಡಿಸುತ್ತದೆ.

By

Leave a Reply

Your email address will not be published. Required fields are marked *