ಮುಖದ ಮೇಲಿನ ಚರ್ಮದ ಆರೈಕೆಗೆ ಹಲವು ರೀತಿಯ ಮನೆಮದ್ದುಗಳನ್ನು ಪ್ರಯತ್ನಿಸುತ್ತಿರುತ್ತೇವೆ, ಇನ್ನು ಕೆಲವರಿಗೆ ಮುಖದ ಮೇಲೆ ಹಾಗು ಮೂಗಿನ ಮೇಲೆ ಬಂಗು ಕಾಣಿಸಿಕೊಳ್ಳುತ್ತದೆ ಈ ಬಂಗು ಮುಖದ ಸೌಂದರ್ಯವನ್ನೇ ಹಾಳು ಮಾಡುವಂತದಾಗಿದೆ. ಈ ಬಂಗು ಸಮಸ್ಯೆಗೆ ಒಂದಿಷ್ಟು ಮನೆಮದ್ದುಗಳನ್ನು ಈ ಮೌಲಕ ತಿಳಿದುಕೊಳ್ಳೋಣ.

ಈ ನೈಸರ್ಗಿಕ ಮನೆಮದ್ದುಗಳ ಮೂಲಕ ಅಂದವನ್ನು ಹೆಚ್ಚಿಸುವ ಜೊತೆಗೆ ಬಂಗು ಸಮಸ್ಯೆಯನ್ನು ನಿವಾರಿಸುವ ಗುಣಗಳನ್ನು ಹೊಂದಿದೆ, ಅಷ್ಟಕ್ಕೂ ಆ ಮನೆಮದ್ದುಗಳು ಯಾವುವು ಅನ್ನೋದನ್ನ ಹೇಳುದಾದರೆ, ಜೇನುತುಪ್ಪ ಅನ್ನೋದು ಸರ್ವೇ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತದ್ದು ಇದನ್ನು ಸ್ವಲ್ಪ ಮಟ್ಟಿಗೆ ತಗೆದುಕೊಂಡು ಇದರ ಜೊತೆಗೆ ಸ್ವಲ್ಪ ದಾಲ್ಚಿನ್ನಿ ತೆಗೆದುಕೊಳ್ಳಿ ಇವೆರಡನ್ನೂ ಕೂಡ ಪೇಸ್ಟ್ ಮಾಡಿ, ಆ ಪೇಸ್ಟ್ ಅನ್ನು ಹತ್ತಿಯ ಸಹಾಯದಿಂದ ಬಂಗು ಇರುವ ಜಾಗಕ್ಕೆ ಹಚ್ಚಿ ಈ ರೀತಿಯಾಗಿ ಮಾಡುವುದರಿಂದ ಬಂಗು ನಿವಾರಣೆ ಕಾಣಬಹುದಾಗಿದೆ

ಬಂಗು ಅಥವಾ ಬ್ಲಾಕ್ ಹೆಡ್ಸ್ ಎಂಬುದಾಗಿ ಕರೆಯುವ ಈ ಸಮಸ್ಯೆಗೆ ದಾಲ್ಚಿನ್ನಿ ಜೇನುತುಪ್ಪ ಈ ಮಿಶ್ರಣ ಉತ್ತಮ ಕೆಲಸವನ್ನು ಮಾಡುವುದರ ಜೊತೆಗೆ ಈ ಸಮಸ್ಯೆಗೆ ಪರಿಹಾರವನ್ನು ಒದಗಿಸುವ ಕೆಲಸ ಮಾಡುತ್ತದೆ. ದಾಲ್ಚಿನ್ನಿ ಉತ್ತಮ ಆರೋಗ್ಯವನ್ನು ವೃದ್ಧಿಸುವ ಕಾರಣಕ್ಕೆ ಇದನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಇನ್ನು ಜೇನುತುಪ್ಪ ಕೂಡ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಹೊಂದಿದೆ ಹಾಗು ತಾವಿಕೆಯನ್ನು ನಿವಾರಿಸುವ ವಿಶೇಷ ಗುಣ ಜೇನುತುಪ್ಪದಲ್ಲಿದೆ.

Leave a Reply

Your email address will not be published. Required fields are marked *