ನಿಮ್ಮ ಗ್ರಾಮಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಅವರ ಕರ್ತವ್ಯಗಳೇನು ತಿಳಿದುಕೊಳ್ಳಿ

0 54

ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಅವರ ಕರ್ತವ್ಯಗಳು ಏನೇನಿರುತ್ತದೆ ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಪ್ರತಿಯೊಂದು ಹಳ್ಳಿಯು ಗ್ರಾಮ ಪಂಚಾಯಿತಿಗೆ ಒಳಪಟ್ಟಿರುತ್ತದೆ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಇರುತ್ತಾರೆ ಆದರೆ ಅವರ ಕೆಲಸಗಳು ಏನೆಂಬುದು ಸರಿಯಾಗಿ ಎಲ್ಲರಿಗೂ ತಿಳಿದಿರುವುದಿಲ್ಲ. ನಿಮ್ಮ ಊರು ಅಥವಾ ಹಳ್ಳಿಗೆ ಸಂಬಂಧಿಸಿದಂತೆ ಯಾವ ಯಾವ ಕೆಲಸಗಳನ್ನು ಬಿಲ್ ಕಲೆಕ್ಟರ್ ಅವರು ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

ಬಿಲ್ ಕಲೆಕ್ಟರ್ ಅವರ ಕರ್ತವ್ಯಗಳು ಏನಿರುತ್ತದೆ ಎಂಬುದನ್ನು ಒಂದೊಂದಾಗಿ ನೋಡೋಣ. ಮೊದಲನೆಯದು ಗ್ರಾಮ ಪಂಚಾಯಿತಿಗೆ ಯಾವ ಯಾವ ಮೂಲಗಳಿಂದ ತೆರೆಗೆ ಬರುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತಾರೆ.

ಗ್ರಾಮ ಪಂಚಾಯಿತಿಗೆ ಬರಬೇಕಾದ ತೆರಿಗೆ ವಸೂಲಿ ಸಂಗ್ರಹ ಮಾಡುವುದು ದಿನನಿತ್ಯದ ತೆರಿಗೆ ವಸೂಲಾತಿ ಪುಸ್ತಕ ಹಾಗೂ ತೆರಿಗೆಗೆ ಸಂಬಂಧಿಸಿದ ರಿಜಿಸ್ಟರ್ ಗಳ ನಿರ್ವಹಣೆ ಹಾಗೂ ನೀರಿನ ದರಗಳ ಬೇಡಿಕೆ ಮತ್ತು ವಸುಲಾತಿ ಪುಸ್ತಕಗಳ ನಿರ್ವಹಣೆ ಮಾಡುವುದು. ಕಾಲಕಾಲಕ್ಕೆ ಭೂಮಿ ಮತ್ತು ಕಟ್ಟಡಗಳ ಮೇಲಿನ ತೆರಿಗೆಯನ್ನು ಸಂಗ್ರಹಿಸುವುದು ಮತ್ತು ವಾಹನಗಳ ಮೇಲಿನ ಸುಂಕ ಬೇಡಿಕೆ ಹಾಗೂ ಅದಕ್ಕೆ ಸಂಬಂಧಪಟ್ಟ ತೆರಿಗೆ ವಸೂಲಾತಿ ಪುಸ್ತಕದ ನಿರ್ವಹಣೆ ಮಾಡುವುದು.

ಮನರಂಜನೆಗಳ ತೆರಿಗೆಗಳ ಬೇಡಿಕೆ ರಿಜಿಸ್ಟರ್ ಮತ್ತು ದನಗಳ ದೊಡ್ಡಿ ರಿಜಿಸ್ಟರ್ ನಿರ್ವಹಣೆ ಮಾಡುವುದು ಜೊತೆಗೆ ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಣೆ ಮಾಡುವುದು. ಜೊತೆಗೆ ಗ್ರಾಮಗಳಲ್ಲಿ ತೆರಿಗೆ ಬಾಕಿ ಉಳಿಸಿರುವವರ ಪಟ್ಟಿ ತಯಾರಿಸುವುದು ಹಾಗೂ ಪ್ರತಿ ವರ್ಷಾಂತ್ಯದೊಳಗೆ ಬಾಕಿ ಉಳಿದಿರುವ ತೆರಿಗೆ ತಗಾದೆ ನೋಟಿಸನ್ನು ಸಿದ್ಧಪಡಿಸುವುದು. ಒಟ್ಟಾರೆಯಾಗಿ ಹೇಳುವುದಾದರೆ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ತೆರಿಗೆ ಆಗುಹೋಗುಗಳನ್ನು ನೋಡಿಕೊಳ್ಳುವುದು ಬಿಲ್ ಕಲೆಕ್ಟರ್ ಅವರ ಕರ್ತವ್ಯಗಳಲ್ಲಿ ಪ್ರಮುಖವಾಗಿರುತ್ತದೆ.

ಇದರ ಜೊತೆಗೆ ಬಿಲ್ ಕಲೆಕ್ಟರ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಪಿಡಿಓ ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆಯ ಲೆಕ್ಕ ಸಹಾಯಕರು ಯಾವೆಲ್ಲಾ ಕೆಲಸ ಕಾರ್ಯಗಳನ್ನು ಹೇಳುತ್ತಾರೆ ಅವುಗಳನ್ನು ಕೂಡ ಮಾಡಬೇಕಾಗುತ್ತದೆ. ಈ ರೀತಿಯಾಗಿ ಗ್ರಾಮ ಪಂಚಾಯತಿಯಲ್ಲಿರುವ ಬಿಲ್ ಕಲೆಕ್ಟರ್ ಅವರು ತಮ್ಮ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ.

Leave A Reply

Your email address will not be published.