ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗ ಎಂದೂ ಮರೆಯದ ಹೆಸರು. ಕೇವಲ ಸಿನಿಮಾಗಳ ಮೂಲಕ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನರಿಗೆ ಉತ್ತಮ ರೀತಿಯ ಸೇವೆಯನ್ನು ಒದಗಿಸಿದ್ದರು. ಇದರ ಜೊತೆಗೆ ಅವರು ಸಾವಿನಲ್ಲಿಯೂ ತಮ್ಮ ಸಾರ್ಥಕತೆಯನ್ನು ಮೆರೆದಿದ್ದರು.

ಅಪ್ಪು ಅವರು ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡಿದ್ದರು ಅವರ ಮರಣದ ನಂತರ ಅವರ ಕಣ್ಣುಗಳನ್ನು ನಾಲ್ಕು ಜನ ಅಂಧರಿಗೆ ಅಳವಡಿಸುವ ಮೂಲಕ ಅವರಿಗೆ ಜಗತ್ತನ್ನು ನೋಡುವುದಕ್ಕೆ ಸಾಧ್ಯವಾಯಿತು. ಹಾಗಾಗಿ ಅಪ್ಪು ಅವರು ತಮ್ಮ ಒಳ್ಳೆಯತನದಿಂದ ಸಮಾಜಮುಖಿ ಕಾರ್ಯಗಳಿಂದ ಯುವಜನರಿಗೆ ಆದರ್ಶಪ್ರಾಯ ವಾಗಿದ್ದಾರೆ.

ನೇತ್ರದಾನ ಮಹಾದಾನ ಎಂದು ಎಲ್ಲರಿಗೂ ತಿಳಿದಿದೆ ಆ ಕುರಿತು ಅಪ್ಪು ಅವರು ಏನು ಹೇಳಿದ್ದಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಎಲ್ಲರೂ ನೇತ್ರದಾನವನ್ನು ಮಾಡಿ ನೇತ್ರದಾನ ಮಾಡುವುದು ತುಂಬಾ ಒಳ್ಳೆಯದು ನಾವು ಇದನ್ನು ಹೇಗೆ ಕಲಿತಿದ್ದು ಎಂದರೆ ನಮ್ಮ ತಂದೆಯವರು ನೇತ್ರದಾನವನ್ನು ಮಾಡಿದ್ದರು

ಅವರು ನೇತ್ರದಾನ ಮಾಡಿರುವ ಕಾರಣ ಅವರ ನಿಧನ ನಂತರ ಅವರ ಎರಡು ಕಣ್ಣುಗಳು ಇನ್ನಿಬ್ಬರಿಗೆ ಜಗತ್ತನ್ನು ನೋಡುವುದಕ್ಕೆ ಅವಕಾಶ ಮಾಡಿಕೊಟ್ಟವು ನಾವು ನಮ್ಮ ಕಣ್ಣುಗಳನ್ನು ದಾನ ಮಾಡುತ್ತೇವೆ ನೀವು ನಿಮ್ಮ ಕಣ್ಣುಗಳನ್ನು ದಾನ ಮಾಡಿ ನೇತ್ರದಾನ ಮಹಾದಾನ ಎಂದು ಅಪ್ಪು ಅವರು ಹೇಳಿದ್ದರು.

ಅಪ್ಪು ಅವರನ್ನ ಮರೆಯುವುದಕ್ಕೆ ಎಂದೂ ಯಾರಿಂದಲೂ ಸಾಧ್ಯವಿಲ್ಲ ಅವರು ಮಾಡಿರುವ ಉತ್ತಮ ಕೆಲಸ ಕಾರ್ಯಗಳು ಅವರು ಸದಾ ನಮ್ಮ ನೆನಪಿನಲ್ಲಿ ಇರುವಂತೆ ಮಾಡುತ್ತವೆ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರಿಂದ ಅವರ ಅಭಿಮಾನಿಗಳು ಕೂಡ ಅವರಿಂದ ಸ್ಫೂರ್ತಿಯನ್ನು ಪಡೆದುಕೊಂಡು ಇದುವರೆಗೂ ಸಾವಿರಾರು ಸಂಖ್ಯೆಯಲ್ಲಿ ಜನರು ನೇತ್ರದಾನಕ್ಕೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

ಆ ಮೂಲಕ ಅಪ್ಪು ಅವರ ಅಭಿಮಾನಿಗಳು ಅವರ ದಾರಿಯಲ್ಲಿ ನಡೆದು ಬೇರೆಯವರಿಗೆ ಆದರ್ಶಪ್ರಾಯರಾಗಿದ್ದಾರೆ. ತೆರೆಮರೆಯಲ್ಲಿದ್ದುಕೊಂಡೇ ಅಸಹಾಯಕರಿಗೆ ಸಹಾಯ ಹಸ್ತ ಚಾಚಿದ ಪುನೀತ್ ರಾಜಕುಮಾರ್ ಅವರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

Leave a Reply

Your email address will not be published. Required fields are marked *