ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಹುಡುಗನ ಪ್ರಾಣ ಉಳಿಸಲು ಈ ಮಹಿಳೆ ಮಾಡಿದ್ದೇನು ಗೊತ್ತಾ, ನಿಜಕ್ಕೂ ಎಂತ ಮಾನವೀಯತೆ

0 1

ಇತ್ತೀಚೆಗೆ ಬಹಳಷ್ಟು ಜನರು ರಸ್ತೆ ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ. ರಸ್ತೆ ಅಪಘಾತವಾದಾಗ ಜನರು ತಮ್ಮ ಮೊಬೈಲ್ ನಲ್ಲಿ ವಿಡಿಯೊ ಮಾಡುತ್ತಾರೆ ಹೊರತು ಪ್ರಾಣ ಉಳಿಸಲು ಮುಂದಾಗುವುದಿಲ್ಲ. ಇಲ್ಲೊಬ್ಬ ಮಹಿಳೆ ರಸ್ತೆಯಲ್ಲಿ ಪ್ರಜ್ಞೆ ತಪ್ಪಿದ ಹುಡುಗನ ಪ್ರಾಣ ಉಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಾಮಾನ್ಯವಾಗಿ ಅಪಘಾತವಾದಾಗ ರಸ್ತೆಯಲ್ಲಿ ಜನರು ನೋಡಿಯೂ ನೋಡದಂತೆ ಇರುತ್ತಾರೆ. ಎಲ್ಲಿ ಸಹಾಯ ಮಾಡಿದರೆ ನಮ್ಮನ್ನೆ ತಪ್ಪಿಸ್ಥರನ್ನಾಗಿ ಮಾಡಿಬಿಡುತ್ತಾರೆ, ಪೊಲೀಸರು ನಮ್ಮನ್ನು ಕೇಳುತ್ತಾರೆ ಎಂಬ ಭಯಕ್ಕೆ ಸಹಾಯ ಮಾಡಲು ಹಿಂದೇಟು ಹಾಕುತ್ತಾರೆ.

ಕೆಲವೊಮ್ಮೆ ಯಾವುದಾದರೂ ಅಪಘಾತ ನಡೆದರೆ ತಮ್ಮ‌ ಸ್ಮಾರ್ಟ್ ಫೋನ್ ತೆಗೆದು ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಜನರು ನಮ್ಮ‌ ಮಧ್ಯ ಇರುತ್ತಾರೆ. ಇಂತಹ ಜನರು‌ ಇರುವ ಸಮಾಜದಲ್ಲಿ ಒಬ್ಬ ಮಹಿಳೆ ಹುಡುಗನ ಪ್ರಾಣ ಕಾಪಾಡಲು ಮಾಡಿದ ಕೆಲಸ ನೋಡಿದರೆ ನಿಜಕ್ಕೂ ಇಂತಹ ಜನರು ಇದ್ದಾರಾ ಎಂದು ಅಚ್ಚರಿಯಾಗುತ್ತದೆ ಹಾಗೂ ಖುಷಿಯಾಗುತ್ತದೆ.

ವೃತ್ತಿಯಲ್ಲಿ ನಸ್೯ ಆಗಿ ಸೇವೆ ಸಲ್ಲಿಸುತ್ತಿರುವ 39 ವರ್ಷದ ವನಜಾ ಮನ್ನಾರ್ ಗುಡಿಯಲ್ಲಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಜೆ ಇದ್ದ ಕಾರಣ ಕುಟುಂಬದವರೊಂದಿಗೆ ಮನ್ನಾರ್ ಗುಡಿಗೆ ಕಾರಿನಲ್ಲಿ ಹೋಗುವಾಗ ಇದೆ ಸಮಯದಲ್ಲಿ‌ ಮಧುಕ್ಕೂರು ರಸ್ತೆಯ ಲೆಕ್ಕಂಪೇಟೆಯ ಬಳಿ ಹುಡುಗನೊಬ್ಬ ಪ್ರಜ್ಞೆ ತಪ್ಪಿ ಬಿದ್ದಿದ್ದನು. ರಸ್ತೆ ಬದಿಯಲ್ಲಿ‌ 22 ವರ್ಷದ ವಸಂತ್ ಎಂಬ ಹುಡುಗ ಪ್ರಜ್ಞೆ ತಪ್ಪಿ ಬಿದ್ದನು. ಕರುವಾಕುರಿಚಿಯಲ್ಲಿ ಪಾಲಿಟೆಕ್ನಿಕ್ ಓದುತ್ತಿದ್ದು ಬೈಕ್ ನಲ್ಲಿ ಬರುವಾಗ ಮೇಕೆಗಳ ಗುಂಪಿಗೆ ಬೈಕ್ ತಾಗಿ ಆತ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿ ಹೋಗಿದ್ದಾನೆ.

ಸುತ್ತಲೂ ಜನ ಸೇರಿದ್ದರು ಆದರೆ ಏನು ಮಾಡಬೇಕೆಂದು ಯಾರಿಗೂ ತಿಳಿಯದೆ ನೋಡುತ್ತಾ ನಿಂತರು ಅವರಲ್ಲಿ ಕೆಲವರು ಆಂಬ್ಯುಲೆನ್ಸ್ ಗೆ ಫೋನ್ ಮಾಡಿದರು. ಅದೆ ದಾರಿಯಲ್ಲಿ ಬಂದ ವನಜಾ ಅವರು ಜನಗಳ ಗುಂಪನ್ನು ನೋಡಿ ಕಾರ್ ನಿಲ್ಲಿಸಿ ಕಾರ್ ನಿಂದ ಇಳಿದು ಹುಡುಗನ ಸ್ಥಿತಿ ನೋಡಿ ತಕ್ಷಣ ಸುತ್ತುವರೆದಿದ್ದ ಜನರನ್ನು ಹಿಂದೆ ಸರಿಸಿ ಚಿಕಿತ್ಸೆ ನೀಡಲು ಮುಂದಾದರು. ಹುಡುಗನನ್ನು ಮಲಗಿಸಿ ಇದ್ದ ಜಾಗದಲ್ಲಿಯೆ ಸಿಪಿಆರ್ ಚಿಕಿತ್ಸೆ‌ ಮಾಡಿದ್ದಾರೆ.

ವನಜಾ ಅವರು ಮಾಡಿದ ಚಿಕಿತ್ಸೆಯಿಂದ ಮೂವತ್ತು ಸೆಕೆಂಡ್ ಗಳಲ್ಲಿ ವಸಂತ್ ಎದ್ದು ಕೂತರು. ಸಿಪಿಆರ್ ಚಿಕಿತ್ಸೆ ನೀಡಲು ಆಮ್ಲಜನಕದ ವ್ಯವಸ್ಥೆ ಇರಬೇಕಾಗುತ್ತದೆ, ಆ ಸಮಯದಲ್ಲಿ ತಕ್ಷಣ ಹುಡುಗನನ್ನು ಉಳಿಸಲು ಸಿಪಿಆರ್ ಚಿಕಿತ್ಸೆ ನೀಡಿ ಆ ಹುಡುಗನನ್ನು ಉಳಿಸಿದ್ದಾರೆ. ವಸಂತ್ ಎಚ್ಚರಗೊಳ್ಳುತ್ತಿದ್ದಂತೆ ವನಜಾ ಅವರಿಗೆ ಕೈಮುಗಿದು ಧನ್ಯವಾದ ತಿಳಿಸಿ ಕಾಲಿಗೆ ಬೀಳಲು ಮುಂದಾದನು.

ಪ್ರಜ್ಞೆ ಬಂದ ನಂತರ‌ ವಸಂತ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಮ್ಮವರೆ ನಮಗೆ ಸಹಾಯ ಮಾಡಲು ಸಾವಿರ ಸಲ‌ ಆಲೋಚನೆ ಮಾಡುವ ಜನರ ಮಧ್ಯ ಎಲ್ಲಿಯೊ‌ ಇರುವ ವನಜಾ ಹಿಂದು ಮುಂದೆ‌ ನೋಡದೆ ಹುಡುಗನ ಪ್ರಾಣ ಉಳಿಸಿದ್ದು ನಿಜಕ್ಕೂ ಶ್ಲಾಘನೀಯ. ವನಜಾ ಅಂತವರು ನಮ್ಮ ಮದ್ಯೆ ಇರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ.

Leave A Reply

Your email address will not be published.