Ultimate magazine theme for WordPress.

ಸಿನಿಮಾ ಶೂಟಿಂಗ್ ಗಾಗಿ ಆ ಊರಿಗೆ ಹೋದಾಗ 20 ದಿನದಲ್ಲಿ 40 ಲಕ್ಷ ದಾನ ಮಾಡಿದ್ರು ಪುನೀತ್

0 3

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸರಳತೆ ಸಜ್ಜನಿಕೆಯ ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆ ಆಗಿವೆ. ಇದರ ಜೊತೆಗೆ ಪುನೀತ್ ರಾಜಕುಮಾರ್ ಅವರು ಒಬ್ಬ ನಿರ್ದೇಶಕರ, ನಿರ್ಮಾಪಕರ ನಟ. ನಿರ್ದೇಶಕರ ಅಣತಿಯಂತೆ ನಡೆಯುತ್ತಿದ್ದರು ಮಾತ್ರವಲ್ಲದೇ ತಂದೆ ಡಾಕ್ಟರ್ ರಾಜಕುಮಾರ್ ಅವರ ಹಾಗೆಯೇ ನಿರ್ದೇಶಕರನ್ನು ಅನ್ನದಾತರು ಎಂದೇ ನಂಬಿದ್ದರು.

ನಿರ್ದೇಶಕರ ಜೊತೆಯಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೇಗೆ ಇರುತ್ತಿದ್ದರು? ಒಬ್ಬ ನಟನಾಗಿ ಸಾಮಾನ್ಯ ವ್ಯಕ್ತಿಯ ಹಾಗೆ ನಿರ್ದೇಶಕರ ಜೊತೆ ಹೇಗೆ ಬಾಂಧವ್ಯ ಹೊಂದಿದ್ದರು ಎನ್ನುವುದರ ಬಗ್ಗೆ ಯುವರತ್ನ, ರಣವಿಕ್ರಮ ಹಾಗೂ ಜೇಮ್ಸ್ ಚಿತ್ರದ ನಿರ್ದೇಶಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರೇನು ಹೇಳಿದ್ದಾರೆ ಪುನೀತ್ ರಾಜಕುಮಾರ್ ಅವರ ಬಗ್ಗೆ ಎನ್ನುವುದನ್ನು ನಾವು ಈ ಲೇಖನದಲ್ಲಿ ನೋಡೋಣ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿರ್ದೇಶಕರ ನಟ. ಅವರು ನಿರ್ದೇಶಕರ ದೃಷ್ಟಿಯನ್ನು ವಾಸ್ತವಕ್ಕೆ ತಿರುಗಿಸುತ್ತಾರೆ ಎಂದು ಸಂತೋಷ್ ಆನಂದರಾಮ್ ಹೇಳಿದ್ದಾರೆ. ರಾಜಕುಮಾರ ಸಿನಿಮಾ ಯಶಸ್ಸಿನ ನಂತರ ಹೊಂಬಾಳೆ ಫಿಲ್ಮ್ಸ್ ಜೊತೆ ಸೇರಿ ಸಂತೋಷ್ ಆನಂದರಾಮ್ ಅವರು ಮತ್ತೆ ಪುನೀತ್ ರಾಜ್‌ಕುಮಾರ್ ಗೆ ಎರಡನೇ ಬಾರಿಗೆ ನಿರ್ದೇಶನ ಮಾಡಿದ್ದರು. ಕಮರ್ಷಿಯಲ್ ನಿರ್ದೇಶಕ ತಮ್ಮ ಸ್ಪೂರ್ತಿದಾಯಕ ಕಥೆಗಳೊಂದಿಗೆ ವೀಕ್ಷಕರನ್ನು ರಂಜಿಸುವುದನ್ನು ತಮ್ಮ ಮೊದಲ ಎರಡು ಚಿತ್ರಗಳಲ್ಲಿ ಅನುಸರಿಸಿದ್ದಾರೆ.

ಸಂತೋಷ್ ಆನಂದರಾಮ್ ಅವರ ಮೂರನೇ ಚಿತ್ರ ಯುವರತ್ನದಲ್ಲಿ ಶಾಲಾ ಶಿಕ್ಷಣ ಮತ್ತು ಖಾಸಗೀಕರಣದಲ್ಲಿನ ಅನ್ಯಾಯದ ಸುತ್ತ ಕಥೆ ಸುತ್ತುತ್ತದೆ. ನಿರ್ದೇಶಕರು ಯುವರತ್ನ ಸಿನಿಮಾನ್ನು ವಾಸ್ತವಿಕ ಆಕ್ಷನ್ -ಎಂಟರ್ಟೈನರ್ ಎಂದು ವರ್ಗೀಕರಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಯುವರತ್ನ ಚಿತ್ರವನ್ನು ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ನಿರ್ಮಿಸಿದ್ದು ಚಿತ್ರದ ಟ್ಯಾಗ್‌ಲೈನ್, ‘ಪವರ್ ಆಫ್ ಯೂತ್’ ಎಂದಿದ್ದು ಇದು ಕಥೆಯನ್ನು ವಿವರಿಸುತ್ತದೆ. “ಇದು ಯುವಕರ ಮಹತ್ವವನ್ನು ಒತ್ತಿ ಹೇಳುತ್ತದೆ. ಇಂದು ಯುವಕರು ಡಿಜಿಟಲ್ ಸಂಪರ್ಕ ಹೊಂದಿದ್ದಾರೆ. ಇದು ಯುವಕರು ಸರಿಯಾದ ದಿಕ್ಕಿನಲ್ಲಿ ಸಾಗಲು ಪ್ರೇರೇಪಿಸಬೇಕು. ಅದು ಹೇಗೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ಸಂತೋಷ್ ಹೇಳಿದ್ದಾರೆ.

ಪುನೀತ್ ರಾಜಕುಮಾರ್ ಅವರು ಒಬ್ಬರು ಕೊಡುಗೈ ದಾನಿ ಆಗಿದ್ದವರು ಎಂದು ಹೇಳುತ್ತಾರೆ ನಿರ್ಮಾಪಕ ಜಯಣ್ಣ. ಪುನೀತ್ ಅವರು ಯಾವತ್ತೂ ನಿರ್ಮಾಪಕರ ಪರವಾಗಿದ್ದ ನಟ. ಸುಮ್ಮನೆ ಜಾಸ್ತಿ ಖರ್ಚು ಮಾಡುವುದು ವೇಸ್ಟ್ ಮಾಡಿದರೆ ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ನಿರ್ಮಾಪಕರಿಗೆ ಹೆಚ್ಚು ಖರ್ಚು ಮಾಡಿಸಬೇಡಿ ಎಂದು ಹೇಳುತ್ತಿದ್ದರು ಎಂದಿದ್ದಾರೆ.

ಜಯಣ್ಣ ಅವರ ಹೊಸ ಚಿತ್ರಕ್ಕೆ ನೂರಾ ಇಪ್ಪತ್ತು ದಿನಗಳ ಶೂಟಿಂಗ್ ನಡೆಯುತ್ತದೆ ಎಂದಾಗ ಅಷ್ಟೆಲ್ಲ ದಿನ ಯಾಕೆ ಬೇಕು ನಿರ್ಮಾಪಕರಿಂದ ಹೆಚ್ಚು ಕರ್ಚು ಮಾಡಿಸಬೇಡಿ ಮೊದಲೇ ಎಲ್ಲವನ್ನೂ ನೀಟ್ ಆಗಿ ಪ್ಲಾನ್ ಮಾಡಿಕೊಳ್ಳಿ ಎಂದು ನಿರ್ದೇಶಕರಿಗೆ ಹೇಳಿದ್ದರಂತೆ.

ಚಿತ್ರಕ್ಕೆ ಅಡ್ವಾನ್ಸ್ ಕೂಡಾ ಪಡೆಯದೇ ಜಯಣ್ಣ ಅವರು ಮೂರು ಬಾರಿ ಅಡ್ವಾನ್ಸ್ ವಿಚಾರಕ್ಕೆ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಆದರೂ ಸಹ ಮೊದಲು ಭಜರಂಗಿ2 ಸಿನಿಮಾ ಬಿಡುಗಡೆ ಆಗಲಿ ಆನಂತರ ಕೊಡಲು ಹೇಳಿದ್ದರಂತೆ. ನಿರ್ಮಾಪಕರು ಎಲ್ಲಿಂದಲೋ ಬಡ್ಡಿಗೆ ದುಡ್ಡು ತಂದು ನೀಡಬಾರದು ಎನ್ನುವುದು ಅವರ ಉದ್ದೇಶವಾಗಿತ್ತು ಹಾಗಾಗಿ ಅಡ್ವಾನ್ಸ್ ಪಡೆಯುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಪುನೀತ್ ರಾಜಕುಮಾರ್ ಅವರು ಐದಾರು ಸಿನಿಮಾಗಳಲ್ಲಿ ನಟಿಸುತ್ತಾ ಇದ್ದರೂ ಸಹ ಯಾರೊಬ್ಬರ ಬಳಿಯೂ ಕೂಡಾ ಅಡ್ವಾನ್ಸ್ ಪಡೆದಿರಲಿಲ್ಲ.

ಇನ್ನೂ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡುತ್ತಿದ್ದ ಸಾಮಾಜಿಕ ಕಾರ್ಯ, ಬೇರೆಯವರಿಗೆ ಮಾಡುತ್ತಿದ್ದ ಅವರ ಸಹಾಯ ಮಾಡುವ ಗುಣ, ಎಷ್ಟು ಜನರಿಗೆ ಸಹಾಯ ಮಾಡುತ್ತಿದ್ದರು ಎನ್ನುವುದು ಲೆಕ್ಕಕ್ಕೆ ಇರಲಿಲ್ಲ. ರಣವಿಕ್ರಮ ಚಿತ್ರದ ಚಿತ್ರೀಕರಣಕ್ಕಾಗಿ ಹೊಸಪೇಟೆಗೆ ಹೋದಾಗ ಅಲ್ಲಿ ಚೆಕ್ ಬುಕ್ ಸಹ ತಂದಿದ್ದರು ದೇವಸ್ಥಾನ, ಅನಾಥಾಶ್ರಮ, ವೃದ್ಧಾಶ್ರಮ ಹೀಗೇ ಯಾರೇ ಬಂದು ಕೇಳಿದ್ದರೂ ಸಹ ಏನಿಲ್ಲಾ ಅಂದರೂ ಒಂದು ಲಕ್ಷ ನೀಡುತ್ತಿದ್ದರು.

ತಾನು ಅವರ ಜೊತೆಗೆ ಇದ್ದ ಇಪ್ಪತ್ತು ದಿನಗಳಲ್ಲಿ ಸುಮಾರು ಸಹಾಯಧನವಾಗಿ ನಲವತ್ತರಿಂದ ಐವತ್ತು ಲಕ್ಷ ರೂಪಾಯಿ ಹಣವನ್ನು ನೀಡಿದ್ದಾರೆ ಎನ್ನುತ್ತಾರೆ ಜಯಣ್ಣ. ಹಾಗೇ ನಿರ್ಮಾಪಕರನ್ನಂತೂ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಲಾಭ ನಷ್ಟಗಳು ಏನೇ ಆದರೂ ಸಹ ಪುನೀತ್ ರಾಜಕುಮಾರ್ ಅವರಿಂದ ಯಾರೊಬ್ಬರಿಗೂ ಏನೊಂದೂ ತೊಂದರೆ ಆಗಲಿಲ್ಲ ಎಂದೂ ಹೇಳಿದ್ದಾರೆ

ನಿರ್ಮಾಪಕ ಜಯಣ್ಣ. ಇಂತಹ ಒಬ್ಬ ಧೀಮಂತ ವ್ಯಕ್ತಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಇಂದು ನಾವೆಲ್ಲ ಅವರನ್ನು ಕಳೆದುಕೊಂಡ ದುಃಖದಲ್ಲಿ ಇದ್ದೇವೆ ಆದರೂ ದೈಹಿಕವಾಗಿ ಅವರು ನಮ್ಮೊಡನೆ ಇಲ್ಲದಿದ್ದರೂ ಅವರ ಆದರ್ಶಗಳನ್ನು ನಾವು ನಮ್ಮಲ್ಲಿ ಅಳವಡಿಸಿಕೊಂಡು ಇನ್ನಶ್ಟು ದಿನ ಅವರು ನಮ್ಮಲ್ಲೇ ಜೀವಂತವಾಗಿ ಇರುವಂತೆ ನೋಡಿಕೊಳ್ಳೋಣ.

Leave A Reply

Your email address will not be published.