ರಾಜ್ಯದ ಜನತೆಗೆ ಗುಡ್ ನ್ಯೂಸ್, ವಿದ್ಯುತ್ ದರ ಇಳಿಕೆ

0 10

The good news for the people of the state is the reduction in electricity rates ಇನ್ನೇನು ರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ಸರ್ಕಾರ ಜನರಿಗೆ ಸಾಕಷ್ಟು ಉತ್ತಮ ಸೇವೆಗಳನ್ನು ನೀಡುವುದಕ್ಕೆ ಪ್ರಾರಂಭಿಸಿದೆ ಎಂದು ಹೇಳಬಹುದಾಗಿದೆ. ಮೆಸ್ಕಾಂ ಹಾಗೂ ಬೆಸ್ಕಾಂ ವಿದ್ಯುತ್ ವ್ಯಾಪ್ತಿಯಲ್ಲಿರುವ ಎಲ್ಲಾ ವಿದ್ಯುತ್ ದರವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಚುನಾವಣೆಗೂ ಮುನ್ನವೇ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಲು ಮುಂದಾಗಿದೆ ಎಂದು ಹೇಳಬಹುದಾಗಿದೆ.

electricity rates

ಇದೇ ವಿಚಾರದ ಕುರಿತಂತೆ twitter ಟ್ವಿಟರ್ ನಲ್ಲಿ ರಾಜ್ಯ ಸರ್ಕಾರದ ಇಂಧನ ಸಚಿವರಾಗಿರುವ ಶ್ರೀ ಸುನಿಲ್ ಕುಮಾರ್ ಅವರು ಟ್ವೀಟ್ ಮಾಡಿ ಇದರ ಕುರಿತಂತೆ ಎಲ್ಲರಿಗೂ ತಿಳಿಸಿದ್ದಾರೆ. ಅವರು ಮಾಡಿರುವ ಟ್ವೀಟ್ ಪ್ರಕಾರ (Bescom) ಬೆಸ್ಕಾಂ ಹಾಗೂ (mescom) ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ತಿನ ದರ ಎಷ್ಟು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

electricity for Karnataka
electricity for Karnataka

ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ Unit ಯೂನಿಟ್ ಗೆ 37 ಪೈಸೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 39 ಪೈಸೆ ಏನು ಕಡಿಮೆ ಮಾಡಿದೆ ಎಂಬುದಾಗಿ ಅಧಿಕೃತವಾಗಿ ಇಂಧನ ಸಚಿವರಾಗಿರುವ ಸುನಿಲ್ ಕುಮಾರ್ ಅವರು ಖಾತ್ರಿಪಡಿಸಿದ್ದಾರೆ. ಖಂಡಿತವಾಗಿ ಇದು ಚುನಾವಣಾ ಮುನ್ನ ವಾಗಿ ಜನರಲ್ಲಿ ಸಾಕಷ್ಟು ಖುಷಿಯನ್ನು ಸರ್ಕಾರದ ಪರವಾಗಿ ಏರಿಸುವಂತೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಯಾಕೆಂದರೆ ಇದಕ್ಕೊಂದು ಕಾರಣ ಕೂಡ ಇದೆ ಅದೇನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವಾಹನ ಚಾಲಕರೇ ಇಲ್ಲಿ ಗಮನಿಸಿ ಹೊಸ ವರ್ಷದಿಂದ ಹೊಸ ರೂಲ್ಸ್ ಜಾರಿ

ಹೌದು ಗೆಳೆಯರೇ ಇತ್ತೀಚಿಗಷ್ಟೇ ಇಂಧನ ಹೊಂದಾಣಿಕೆಯ ಶುಲ್ಕವನ್ನು ಪರಿಷ್ಕರಿಸಿದ ಸಂದರ್ಭದಲ್ಲಿ ವಿದ್ಯುತ್ ದರ ಗಣನೀಯವಾಗಿ ಏರಿಕೆ ಕಂಡಿತ್ತು. ಇದು ಜನಸಾಮಾನ್ಯರಲ್ಲಿ ಸಾಕಷ್ಟು ಅಸಮಾಧಾನವನ್ನು ಮೂಡಿಸಿ ಎಲ್ಲರೂ ಕೂಡ ತಮ್ಮ ಆಕ್ರೋಶವನ್ನು ಸರ್ಕಾರದ ವಿರುದ್ಧ ವ್ಯಕ್ತಪಡಿಸಿದ್ದರು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಸರಕಾರ ತೆಗೆದುಕೊಂಡಿರುವ ಈ ನಿರ್ಧಾರ ಜನರಲ್ಲಿ ಇನ್ನಷ್ಟು ಸರ್ಕಾರದ ಕುರಿತಂತೆ ತಪ್ತಿದಾಯಕ ಭಾವನೆಯನ್ನು ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಮೂಲಗಳು ಹೇಳುತ್ತಿವೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Leave A Reply

Your email address will not be published.